Coin Auction: ಆ ಒಂದು ಚಿನ್ನದ ನಾಣ್ಯ ಹರಾಜಾಗಿದ್ದು 138 ಕೋಟಿ ರೂಪಾಯಿಗೆ; ಏನಿತ್ತು ಅಂಥ ವಿಶೇಷ ಅಂತೀರಾ?
1933ನೇ ಇಸವಿಯಲ್ಲಿ ಟಂಕಿಸಲಾದ ಎರಡು ಹದ್ದು (Eagle) ಒಳಗೊಂಡ ಬಂಗಾರದ ನಾಣ್ಯವು ನ್ಯೂಯಾರ್ಕ್ನಲ್ಲಿ ನಡೆದ ಹರಾಜಿನಲ್ಲಿ 1.89 ಕೋಟಿ ಅಮೆರಿಕನ್ ಡಾಲರ್ (ರೂ. 138 ಕೋಟಿ)ಗೆ ಮಾರಾಟ ಆಗಿದೆ. ಆ ನಾಣ್ಯದ ಮುಖ ಬೆಲೆ ಇಟ್ಟಿದ್ದು 20 ಅಮೆರಿಕನ್ ಡಾಲರ್ ಮಾತ್ರ.
ನಿಮಗೆ ಹೇಳುತ್ತಿರುವ ಈ ವಿಷಯ ನಂಬಿಕೆಗೆ ಕಿಲೋಮೀಟರ್ಗಟ್ಟಲೆ ದೂರ ಇರುವಂಥದ್ದು. ಆದರೆ ನಂಬಿಕೆಗೆ ದೂರವೇ ಹೊರತು ಆಗುವುದೇ ಇಲ್ಲ ಅನ್ನೋವಂಥದ್ದಲ್ಲ. ಹಳೇ ನಾಣ್ಯ ಮತ್ತು ನೋಟುಗಳನ್ನು ಇಟ್ಟುಕೊಂಡವರು ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ. ಅವುಗಳನ್ನು ಬರೀ ಇಟ್ಟುಕೊಂಡಿದ್ದಕ್ಕಲ್ಲ, ಆನ್ಲೈನ್ನಲ್ಲಿ ಹರಾಜು ಹಾಕಿದ್ದರಿಂದ ದೊರೆತ ಮೊತ್ತಕ್ಕೆ. ಈಚೆಗಿನ ಒಂದು ಉದಾಹರಣೆಯನ್ನೇ ಕೇಳಿ, 1933ನೇ ಇಸವಿಯಲ್ಲಿ ಟಂಕಿಸಲಾದ ಎರಡು ಹದ್ದು (Eagle) ಒಳಗೊಂಡ ಬಂಗಾರದ ನಾಣ್ಯವು ನ್ಯೂಯಾರ್ಕ್ನಲ್ಲಿ ನಡೆದ ಹರಾಜಿನಲ್ಲಿ 1.89 ಕೋಟಿ ಅಮೆರಿಕನ್ ಡಾಲರ್ (ರೂ. 138 ಕೋಟಿ)ಗೆ ಮಾರಾಟ ಆಗಿದೆ. ಆ ನಾಣ್ಯದ ಮುಖ ಬೆಲೆ ಇಟ್ಟಿದ್ದು 20 ಅಮೆರಿಕನ್ ಡಾಲರ್ ಮಾತ್ರ. ಭಾರತದ ರೂಪಾಯಿ ಲೆಕ್ಕದಲ್ಲಿ 1400. ಆದರೆ ಅದು ಮಾರಾಟ ಆಗಿದ್ದು ಮಾತ್ರ 138 ಕೋಟಿ ರೂಪಾಯಿಗೆ. ಶೂ ಡಿಸೈನರ್ ಮತ್ತು ಸಂಗ್ರಹ ಮಾಡುವ ಸ್ಟುವರ್ಟ್ ವಿಟ್ಜ್ಮನ್ ಈ ನಾಣ್ಯವನ್ನು ಮಾರಿದವರು. ಅದನ್ನು ಆತ 2002ರಲ್ಲಿ 76 ಲಕ್ಷ ಯುಎಸ್ಡಿ (55 ಕೋಟಿ ರೂಪಾಯಿ)ಗೆ ಖರೀದಿಸಿದ್ದರು. ಅವರ ಬಳಿ ಇದ್ದದ್ದು 1933ರ ಅಪರೂಪದ ಹಾಗೂ ಖಾಸಗಿಯಾಗಿ ಇಟ್ಟುಕೊಳ್ಳಲು ಅವಕಾಶ ನೀಡಿದ್ದ ಎರಡು ಹದ್ದಿನ ಚಿನ್ನದ ನಾಣ್ಯ.
ಈ ನಾಣ್ಯವು ಹರಾಜಿನ ವೇಳೆ 1 ಕೋಟಿ ಯುಎಸ್ಡಿಯಿಂದ 1.5 ಕೋಟಿ ಯುಎಸ್ಡಿಗೆ, ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 73 ಕೋಟಿಯಿಂದ 100 ಕೋಟಿಗೆ ಬಿಕರಿ ಆಗಬಹುದು ಎಂದು ಅಂದಾಜಿತ್ತು ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ. ಆದರೆ ಈ ಅಪರೂಪದ ನಾಣ್ಯಕ್ಕೆ ಬಿಡ್ಡಿಂಗ್ನಲ್ಲಿ ಬೆಲೆ ಏರುತ್ತಲೇ ಹೋಗಿ, ಅಂತಿಮವಾಗಿ 13 ಕೋಟಿ ರೂಪಾಯಿಗೆ ಹರಾಜಾಯಿತು. ಒಂದು ಬದಿಯಲ್ಲಿ ಅಮೆರಿಕನ್ ಹದ್ದು ಹಾರುತ್ತಿರುವ ಡಿಸೈನ್ ಹೊಂದಿದೆ ಈ ನಾಣ್ಯ. ಮತ್ತೊಂದು ಬದಿಯಲ್ಲಿ ಸ್ವಾತಂತ್ರ್ಯ ದೇವತೆ ನಡೆದು ಹೋಗುತ್ತಿರುವ ಗುರುತಿದೆ. ಅಂದ ಹಾಗೆ ಇದು ಅಮೆರಿಕದಲ್ಲಿ ಚಲಾವಣೆಯಲ್ಲಿದ್ದ ಕೊನೆಯ ಚಿನ್ನದ ನಾಣ್ಯವಿದು.
A rare Double Eagle gold coin sold for a record $18.9 million at an auction in New York, and a British Guiana One-Cent Magenta stamp, issued in 1856, went for $8.3 million. Read more https://t.co/d5P3unkaCM pic.twitter.com/LvRHN3VvCK
— Reuters India (@ReutersIndia) June 10, 2021
ಜೂನ್ 4ನೇ ತಾರೀಕಿನಂದು ಇದೇ ಹರಾಜಿನ ವೇಳೆ ವಿಟ್ಜ್ಮನ್ ಅವರು ಮತ್ತೊಂದು ಅಪರೂಪದ ವಸ್ತುವನ್ನು ಮಾರಿದ್ದಾರೆ. ಅದು 1856ರಲ್ಲಿ ವಿತರಿಸಿದ ಬ್ರಿಟಿಷ್ ಗಿಯಾನ ಒಂದು ಸೆಂಟ್ ಮಜೆಂಟಾ ಸ್ಟ್ಯಾಂಪ್ (ಅಂಚೆ ಚೀಟಿ). ಇದು 60 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಹರಾಜು ಪ್ರಕ್ರಿಯೆ ಮುಗಿದ ಮೇಲೆ ಈ ಅಂಚೆ ಚೀಟಿಯು ಇಲ್ಲಿಯ ತನಕದ ಅತ್ಯಂತ ಮೌಲ್ಯಯುತದ್ದು ಎನಿಸಿಕೊಂಡಿದೆ. ಈ ಎರಡನ್ನೂ ಅಂದರೆ ನಾಣ್ಯ ಹಾಗೂ ಅಂಚೆ ಚೀಟಿಯನ್ನು ಖರೀದಿಸಿದವರು ಯಾರು ಎಂಬುದು ಬಹಿರಂಗಪಡಿಸಿಲ್ಲ.
ವಿಟ್ಜ್ಮನ್ ತಮ್ಮ ಬಾಲ್ಯದ ದಿನಗಳಿಂದಲೂ ಅಂಚೆಚೀಟಿ ಹಾಗೂ ನಾಣ್ಯಗಳ ಸಂಗ್ರಹದ ಹವ್ಯಾಸ ಇಟ್ಟುಕೊಂಡಿದ್ದಾರೆ. ಈಗ ಹರಾಜಿನ ಮೂಲಕ ಬಂದ ಹಣವನ್ನು ದತ್ತಿ ಕಾರ್ಯಕ್ರಮಗಳಿಗೆ ಬಳಸುವುದಾಗಿ ಅವರು ಹೇಳಿದ್ದಾರೆ. ಅದರಲ್ಲಿ ವೈದ್ಯಕೀಯ ಸಂಶೋಧನೆ, ಡಿಸೈನ್ ಶಾಲೆ ಮತ್ತು ಮ್ಯಾಡ್ರಿಡ್ನಲ್ಲಿ ಇರುವ ಯಹೂದಿ ವಸ್ತು ಸಂಗ್ರಹಾಲಯದ ಕೆಲಸಗಳು ಒಳಗೊಂಡಿವೆ. ಈ ಹಿಂದೆ, 2019ರಲ್ಲಿ ಅಪರೂಪದ ಬೆಳ್ಳಿಯ ನಾಣ್ಯ 13.2 ಲಕ್ಷ ಯುಎಸ್ಡಿ, ಅಂದರೆ 9 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಕ್ಕೆ ಅಮೆರಿಕದಲ್ಲಿ ಮಾರಾಟ ಆಗಿದೆ.
(Rare gold coin sold for 18.9 million USD recently in an auction at New York. Know the reason why it sold with so expensive price)