1 ವರ್ಷದಲ್ಲಿ 4 ಪಟ್ಟು ರಿಟನ್ಸ್ ನೀಡಿದ ಈ ಕಂಪೆನಿ ಷೇರಿನಲ್ಲಿ ಹಾಕಿದ ದುಡ್ಡು 10 ವರ್ಷದಲ್ಲಿ ಬೆಳೆದಿದ್ದು 25 ಪಟ್ಟು
ಈ ಕಂಪೆನಿಯ ಷೇರಿನ ಮೇಲೆ ಹಾಕಿದ ದುಡ್ಡು ಒಂದೇ ವರ್ಷದಲ್ಲಿ 4 ಪಟ್ಟಾಗಿದೆ. ಇನ್ನು ಹತ್ತು ವರ್ಷಗಳಲ್ಲಿ ಇಪ್ಪತ್ತೈದು ಪಟ್ಟಾಗಿದೆ. ಯಾವುದು ಆ ಷೇರು? ಹತ್ತು ವರ್ಷದ ಹಿಂದೆ 4 ಲಕ್ಷ ರೂ. ಈ ಷೇರಿನ ಮೇಲೆ ಹಾಕಿದ್ದರೆ ಇವತ್ತಿಗೆ 1 ಕೋಟಿ ರೂ.
ನೀವು ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಹಣ ಒಂದೇ ವರ್ಷದಲ್ಲಿ 4 ಲಕ್ಷ ರೂಪಾಯಿಯಾದರೆ, ಅಥವಾ 1 ಲಕ್ಷ ರೂಪಾಯಿ ಹತ್ತು ವರ್ಷದಲ್ಲಿ 25 ಲಕ್ಷ ರೂಪಾಯಿಯಾದರೆ? ಇದೆಲ್ಲೋ ಹುಚ್ಚು ಕಲ್ಪನೆ ಅಂದುಕೊಳ್ಳುತ್ತಿದ್ದೀರಿ ಅನಿಸುತ್ತದೆ. ನೀವು ಯಾವುದನ್ನು ಹುಚ್ಚು ಕಲ್ಪನೆ ಅಂದುಕೊಳ್ಳುತ್ತಿದ್ದೀರೋ ಅದು ವಾಸ್ತವದಲ್ಲೇ ನಿಜವಾಗಿದೆ. 2011ರ ಏಪ್ರಿಲ್ನಲ್ಲಿ 130 ರೂಪಾಯಿ ಇದ್ದ ಟಾಟಾ ಎಲಾಕ್ಸಿ ಕಂಪೆನಿಯ ಷೇರು ಇವತ್ತಿಗೆ (ಏಪ್ರಿಲ್ 29, 2021) ಎನ್ಎಸ್ಇಯಲ್ಲಿ 3,384.70 ಮುಟ್ಟಿದೆ. ಎಷ್ಟು ಪರ್ಸೆಂಟ್ ರಿಟರ್ನ್ಸ್ ಗೊತ್ತಾ? ಹತ್ತು ವರ್ಷದಲ್ಲಿ ಶೇ 2,442ಕ್ಕೂ ಹೆಚ್ಚು ರಿಟರ್ನ್ಸ್ ನೀಡಿದೆ.
ಈ ಕಂಪೆನಿಯ ಷೇರು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಮಾಡಿರುವುದು ಮಾತ್ರವಲ್ಲ, ಕೋವಿಡ್ ಕಾರಣಕ್ಕೆ ನೆಲ ಕಚ್ಚಿದ್ದ ಬೆಲೆಯು ಮತ್ತೆ ಚಿಗಿತು ನಿಂತಿದೆ. ಒಂದೇ ವರ್ಷದ ಸಮಯದಲ್ಲಿ, ಅಂದರೆ 2020ರ ಏಪ್ರಿಲ್ನಲ್ಲಿ 814 ರೂಪಾಯಿ ಇದ್ದ ಷೇರು ನಾಲ್ಕು ಪಟ್ಟು ಜಾಸ್ತಿಯಾಗಿ 3,384 ರೂಪಾಯಿಗೆ ಬಂದು ನಿಂತಿದೆ.
ಟಾಟಾ ಎಲಾಕ್ಸಿಯ ಈ ತನಕದ ಪಯಣ ಹತ್ತು ವರ್ಷದ ಹಿಂದೆ ಟಾಟಾ ಎಲಾಕ್ಸಿ ಎಂಬುದು ಶುದ್ಧ ಪ್ಲೇ ತಂತ್ರಜ್ಞಾನ ಕಂಪೆನಿ. 2011-2012ರಲ್ಲಿ ಆಡಳಿತ ಮಂಡಳಿಯು ವಲಯದ ವರ್ಟಿಕಲ್ಸ್ಗಳಿಗೆ ಗಮನ ನೀಡಲು ಆರಂಭಿಸಿತು. ಇದರಿಂದಾಗಿ ಪ್ರೀಮಿಯಂ ಎಂಜಿನಿಯರಿಂಗ್ ಸೇವೆ ಒದಗಿಸುವ ಕಂಪೆನಿಯಾಗಿ ಬದಲಾಗಲು ಸಹಾಯ ಆಯಿತು. ಸಂಪೂರ್ಣ ಫೀಚರ್ಗಳನ್ನು ಒಳಗೊಂಡ ಇನ್ಫೋಟೇನ್ಮೆಂಟ್ ಸಿಸ್ಟಮ್, ಅಥವಾ ಪಾರ್ಕಿಂಗ್ ಸೆನ್ಸರ್ಗಳು ಅಥವಾ ವಾಯ್ಸ್ ಅಸಿಸ್ಟೆಂಟ್ಸ್ ಅಥವಾ ಸುರಕ್ಷಿತ ವ್ಯವಸ್ಥೆಯನ್ನು ಆಲೋಚನೆ ಮಾಡಿ ನೋಡಿ. ಟಾಟಾ ಎಲಾಕ್ಸಿ ಕಂಪೆನಿಯು ವಾಹನ ಬಿಡಿ ಭಾಗಗಳ ಉತ್ಪಾದಕರಿಗೆ ಈ ಉತ್ಪನ್ನಗಳ ರಚನೆಗೆ ಹಾಗೂ ರೂಪಿಸುವುದಕ್ಕೆ ನೆರವು ನೀಡುತ್ತದೆ. ಮಾಧ್ಯಮ, ಸಂವಹನ, ಹೆಲ್ತ್ಕೇರ್, ಗೃಹಬಳಕೆ, ರೈಲು, ನಿರ್ಮಾಣ ಹಾಗೂ ಸೆಮಿ ಕಂಡಕ್ಟರ್ಗಳನ್ನು ಆಧುನಿಕ ಆವಿಷ್ಕಾರಗಳೊಂದಿಗೆ ರೂಪಿಸಲು ಟೆಕ್ ಸಲ್ಯೂಷನ್ಗಳನ್ನು ರೂಪಿಸುತ್ತಿದೆ.
ವೈಶಿಷ್ಟ್ಯದಿಂದ ಕೂಡಿದ ಉತ್ಪನ್ನಗಳನ್ನು ಡೆಲಿವರಿ ನೀಡುವ ವ್ಯವಹಾರವು ಕಂಪೆನಿಗೆ ಅತ್ಯುತ್ತಮ ಫಲಿತಾಂಶವನ್ನು ನೀಡಿದೆ. ಕಂಪೆನಿಯ ಆಪರೇಟಿಂಗ್ ಆದಾಯವು ಸಿಎಜಿಆರ್ (ಕಾಂಪೌಂಡ್ ಆನ್ಯುಯೆಲ್ ಗ್ರೋಥ್ ರೇಟ್) FY11ರಲ್ಲಿ ಶೇ 18 ಇದ್ದದ್ದು 411 ಕೋಟಿ ರೂಪಾಯಿಯಿಂದ FY21ಕ್ಕೆ 1826 ಕೋಟಿ ರೂಪಾಯಿಗೆ ಬೆಳವಣಿಗೆ ಕಂಡಿದೆ. ಅದೇ ರೀತಿ ತೆರಿಗೆ ನಂತರದ ಲಾಭದ ಪ್ರಮಾಣವು ರೂ. 31 ಕೋಟಿ ಇದ್ದದ್ದು 368 ಕೋಟಿ ರೂಪಾಯಿಗೆ ನೆಗೆದಿದೆ. ಆ ಮೂಲಕ ಈ ಅವಧಿಯಲ್ಲಿ ಸಿಎಜಿಆರ್ ಶೇ 31ರಷ್ಟು ದಾಖಲಾಗಿದೆ.
ಉತ್ಸಾಹದಾಯಕ ಭವಿಷ್ಯ ಪ್ರಬಲವಾದ ಆದಾಯದ ಬೆಳವಣಿಗೆ ಬಗ್ಗೆ ಟಾಟಾ ಎಲಾಕ್ಸಿ ಕಂಪೆನಿಯ ಆಡಳಿಯ ಮಂಡಳಿ ವಿಶ್ವಾಸ ಇರಿಸಿಕೊಂಡಿದೆ. ಜತೆಗೆ ಸ್ಥಿರವಾದ ಆಪರೇಟಿಂಗ್ ಮಾರ್ಜಿನ್ ಬಗ್ಗೆಯೂ ವಿಶ್ವಾಸ ಇದೆ. ಅದಕ್ಕೆ ಕಾರಣ ಏನೆಂದರೆ, ಕಂಪೆನಿಯ ಎಲ್ಲ ವರ್ಟಿಕಲ್ಸ್ಗಳಲ್ಲಿ ಇರುವ ಬೇಡಿಕೆ, ಹೊಸ ವ್ಯವಹಾರಗಳು ಬಂದಿರುವುದು, ಇನ್ನಷ್ಟು ಹೊಸ ವ್ಯವಹಾರಗಳು ಬರಬೇಕಿರುವುದು, ಈ ಹಿಂದೆ ಪಡೆದಿರುವ ವ್ಯವಹಾರಗಳು ಮತ್ತು ಕಂಪೆನಿಯ ವಿವಿಧ ಬಗೆಯ ಸಾಮರ್ಥ್ಯಗಳು ಈ ಎಲ್ಲ ಸೇರಿಕೊಂಡಿವೆ.
ಇನ್ನು ಟಾಟಾ ಎಲಾಕ್ಸಿ ಕಂಪೆನಿಯು ಹೊಸ ಹೊಸ ಹೂಡಿಕೆ ಮಾಡುತ್ತಿದೆ. ಆ ಮೂಲಕವಾಗಿ ಕನೆಕ್ಟಡ್, ಅಟಾನಮಸ್, ಷೇರ್ಡ್ ಮತ್ತು ಎಲೆಕ್ಟ್ರಿಕಲ್ ವಾಹನಗಳು ಮತ್ತು ಇನ್ಫೋಟೇನ್ಮೆಂಟ್ ಕ್ಷೇತ್ರಗಳಲ್ಲಿ ಹಣ ಹೂಡುತ್ತಿದೆ. TELನ ಇಂಟರ್ನೆಟ್ ಥಿಂಗ್ಸ್ (IoT) ಪ್ಲಾಟ್ಫಾರ್ಮ್ನಲ್ಲಿ ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನ್ಯುಫ್ಯಾಕ್ಚರರ್ (OEM)ಎಂದು ಜಾಗತಿಕ ಮಾನ್ಯತೆ ಪಡೆದಿದೆ.
ಇದರ ಜತೆಗೆ ಕಂಪೆನಿಯು ರೈಲು, ಆಫ್ ರೋಡ್, ಡಿಜಿಟಲ್ ಹೆಲ್ತ್ ಮತ್ತು ಇತರ ಉದ್ಯಮ ಕ್ಷೇತ್ರವನ್ನು ಬೆಳೆಸುವತ್ತಲೂ ಗಮನ ಹರಿಸಿದೆ. ಆ ಮೂಲಕ ಒಂದೇ ಉದ್ಯಮದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಕಂಪೆನಿಯಿಂದ ಡಿಸೈನ್ ಬಗೆಯ ಪ್ರಾಜೆಕ್ಟ್ಗಳ ಮೇಲೂ ಗಮನ ಹರಿಸಿರುವುದರಿಂದ ಇಂಡಸ್ಟ್ರಿಯಲ್ ಡಿಸೈನ್ ಮತ್ತು ವಿಶ್ಯುಯಲೈಸೇಷನ್ ಉದ್ಯಮವು ಶೇ 30ರಿಂದ 40ರಷ್ಟು ಬೆಳೆಯಲು ಸಹಕಾರಿ ಆಗುತ್ತದೆ.
ಕೌಂಟರ್ ಬಗ್ಗೆ ಆಡಳಿತ ಮಂಡಳಿಯು ಸಕಾರಾತ್ಮಕವಾಗಿದೆ. ಶೇರ್ಖಾನ್ನಿಂದ FY2022E/FY2023E ಗಳಿಕೆಯನ್ನು ಅಂದಾಜು ಮೇಲ್ಮಟ್ಟಕ್ಕೆ ಪರಿಷ್ಕರಿಸಲಾಗಿದೆ. 2021ರ ಹಣಕಾಸು ವರ್ಷ Q4ನಲ್ಲಿ ಎಲ್ಲ ವರ್ಟಿಕಲ್ನಲ್ಲಿ ಆರ್ಡರ್ ಬುಕ್ಕಿಂಗ್ ನಿರೀಕ್ಷೆಯನ್ನು ಮೀರಬಹುದು. ಮತ್ತು ನಾನ್-ಆಟೋಮೋಟಿವ್ ಸೆಗ್ಮೆಂಟ್ನಲ್ಲಿ ಬೆಳವಣಿಗೆ ಮುಂದುವರಿಸಬಹುದು. ಬೇಡಿಕೆ ಕಂಡುಬಂದು, ಆಫರಿಂಗ್ಸ್, ಮತ್ತು ಈಚಿನ ಡೀಲ್ಗಳನ್ನು ತನ್ನದಾಗಿಸಿಕೊಂಡಿದೆ.
ಟಾಟಾ ಎಲಾಕ್ಸಿಯ ಯುಎಸ್ಡಿ ಆದಾಯ ಮತ್ತು ಗಳಿಕೆ ಸಿಎಜಿಆರ್ ಶೇ 26 ಮತ್ತು ಶೇ 29 ಇದೆ. ಕ್ರಮವಾಗಿ FY2021- FY2023Eರಲ್ಲಿ ಹೀಗಿರಬಹುದು ಎಂಬ ಅಂದಾಜಿದೆ. ಸ್ಟಾಕ್ ಆದ್ಯತೆ ಮೇಲೆ, ವಿವಿಧ ತಾಂತ್ರಿಕ ಸಾಮರ್ಥ್ಯ, ಗಟ್ಟಿಯಾದ ಅನುಷ್ಠಾನ, ಗ್ರಾಹಕರ ಜತೆ ದೀರ್ಘಾವಧಿ ಸಂಬಂಧ, ಮತ್ತು ಪ್ರಬಲ ಪೋಷಕತ್ವ ಹೊಂದಿದೆ ಎಂದು ಬ್ರೋಕರೇಜ್ ಸಂಸ್ಥೆಯು ವರದಿಯು ತಿಳಿಸಿದ್ದು, 3,600 ರೂಪಾಯಿ ಗುರಿಯನ್ನು ಇರಿಸಿಕೊಂಡಿದೆ.
ಅದೇ ರೀತಿ, ಎಚ್ಡಿಎಫ್ಸಿ ಸೆಕ್ಯೂರಿಟೀಸ್ ಈ ಷೇರನ್ನು ಖರೀದಿ ಶಿಫಾರಸು ಮಾಡಿದೆ. ಈ ವಲಯದ ಪ್ರಮುಖ ಮೆಟ್ರಿಕ್ ಆಧಾರ (ಬೆಳವಣಿಗೆ, ಮಾರ್ಜಿನ್ ಮತ್ತು ಕ್ಷಮತೆ) ಮತ್ತು ನಾಲ್ಕನೇ ತ್ರೈಮಾಸಿಕದ ಅತ್ಯುತ್ತಮ ಫಲಿತಾಂಶದ ಮೇಲೆ ಈ ಶಿಫಾರಸು ಮಾಡಿದೆ. “ನಮ್ಮ ಸಕಾರಾತ್ಮಕ ದೃಷ್ಟಿಕೋನಕ್ಕೆ 1) ಉದ್ಯಮದ ಪ್ರಬಲ ಅಳತೆ (>20% CAGR FY21-24E), 2) ಅತ್ಯುತ್ತಮ ಅನುಷ್ಠಾನ ರೀತಿ, 3) ಸಾಮರ್ಥ್ಯದಿಂದ ಕೂಡಿದ ವಲಯದ ಅಂಶಗಳು (CASE, OTT ಮತ್ತು ಹೊಸ ಮಾಧ್ಯಮ), ಐಪಿ ವ್ಯವಹಾರ ಮತ್ತು ಪ್ರಬಲ ಸಹಭಾಗಿತ್ವ (ಗೂಗಲ್ ವೈಡ್ವೈನ್) ಆಗ್ಯುಮೆಂಟಿಂಗ್ ಬೆಳವಣಿಗೆ, 4) ಹೊಸ ವ್ಯವಹಾರದ ಬರುವಿಕೆ ಜತೆಗೆ ಬೆಳವಣಿಗೆಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿರುವುದು (ದೊಡ್ಡ ಖಾತೆಗಳ ಜತೆಗೆ ಇನ್ನಷ್ಟು ವ್ಯವಹಾರ ಬರಬೇಕಿದೆ) ಮತ್ತು ದೀರ್ಘಾವಧಿ ವ್ಯವಹಾರಗಳನ್ನು ಮಾಡುವುದಕ್ಕೆ ಹೂಡಿಕೆ ಹಾಗೂ 5) ಪ್ರಬಲ ನಗದು ಸೃಷ್ಟಿ (OCF/FCFನಲ್ಲಿ ಶೇ 70ರಷ್ಟು ಬೆಳವಣಿಗೆ), ” ಇಷ್ಟೂ ಅಂಶಗಳು ಕಾರಣ ಎನ್ನಲಾಗಿದೆ.
(ಮಾಹಿತಿ ಕೃಪೆ: ಮನಿ9.ಕಾಮ್ ಮೂಲ ಲೇಖಕರು: ಹರ್ಷ್ ಚೌಹಾಣ್)
(ಸ್ಪಷ್ಟನೆ: ಈ ವರದಿಯಲ್ಲಿನ ಶಿಫಾರಸುಗಳು ಆಯಾ ಸಂಶೋಧನೆ ಮತ್ತು ದಲ್ಲಾಳಿ ಸಂಸ್ಥೆಯಿಂದ ಮಾಡಿರುವಂಥದ್ದು. ಮನಿ 9 ಮತ್ತು ಅದರ ನಿರ್ವಹಣೆ ಹೂಡಿಕೆ ಸಲಹೆಗೆ ಯಾವುದೇ ಜವಾಬ್ದಾರಿಯನ್ನು ಹೊರುವುದಿಲ್ಲ. ಹೂಡಿಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಿ)
ಇದನ್ನೂ ಓದಿ: Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು
(Tata Elxsi share gives 25 times returns in 10 years and 4 times returns in a year)
Published On - 5:36 pm, Thu, 29 April 21