AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಟನ್ ಕಂಪೆನಿಯ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ; ಶೇ 48ರಷ್ಟು ಹೆಚ್ಚಳವಾಗಿ ಲಾಭ ರೂ. 529 ಕೋಟಿ

2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 48ರಷ್ಟು ಹೆಚ್ಚ ಲಾಭ ಗಳಿಸಿರುವ ಟೈಟನ್, 529 ಕೋಟಿ ರೂಪಾಯಿ ಲಾಭ ಮಾಡಿದೆ

ಟೈಟನ್ ಕಂಪೆನಿಯ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ; ಶೇ 48ರಷ್ಟು ಹೆಚ್ಚಳವಾಗಿ ಲಾಭ  ರೂ. 529 ಕೋಟಿ
ಲಾಭದ ನಗದು
Srinivas Mata
|

Updated on: Apr 29, 2021 | 7:43 PM

Share

ಟೈಟನ್ ಕಂಪೆನಿಯ 2021ನೇ ಇಸವಿಯ ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಕಳೆದ ವರ್ಷಕ್ಕಿಂತ ಈ ವರ್ಷದ ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ಕಂಡಿದ್ದು, ಲಾಭದ ಪ್ರಮಾಣದಲ್ಲಿ ಶೇ 48.2ರಷ್ಟು ಬೆಳವಣಿಗೆ ಕಂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಲಾಭವು ರೂ. 529 ಕೋಟಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 357 ಕೋಟಿ ರೂಪಾಯಿ ಲಾಭ ದಾಖಲಿಸಿತ್ತು. ಅದಕ್ಕೆ ಹೋಲಿಸಿದಲ್ಲಿ ಶೇ 48ರಷ್ಟು ಬೆಳವಣಿಗೆ ಆಗಿದೆ. ಇನ್ನು ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದ ಅವಧಿಗೆ ಹೋಲಿಸಿದಲ್ಲಿ ಈ ಬಾರಿ ಶೇ 26.3ರಷ್ಟು ಲಾಭದ ಪ್ರಮಾಣ ಹೆಚ್ಚಾಗಿದೆ.

ಈ ತ್ರೈಮಾಸಿಕದಲ್ಲಿ ಆದಾಯ 7,135 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 61.1ರಷ್ಟು ಬೆಳವಣಿಗೆ ಕಂಡಿದೆ. ಆದರೆ ಕಳೆದ ತ್ರೈ,ಮಾಸಿಕಕ್ಕೆ (ಅಕ್ಟೋಬರ್​ನಿಂದ ಡಿಸೆಂಬರ್) ಹೋಲಿಸಿದಲ್ಲಿ ಶೇ 2.1ರಷ್ಟು ಇಳಿಕೆ ಆಗಿದೆ. ಟೈಟನ್ ಕಂಪೆನಿಯ ಐವೇರ್ ಮತ್ತು ಆಭರಣ ವಿಭಾಗ ಎರಡು ಪ್ರಬಲವಾದ ಆದಾಯ ಬೆಳವಣಿಗೆಯನ್ನು ದಾಖಲಿಸಿದ್ದರೆ, ವಾಚ್ ವಿಭಾಗ ಪೂರ್ತಿಯಾಗಿ ಚೇತರಿಸಿಕೊಂಡಿದೆ ಎಂದು ಬಿಎಸ್​ಇ ಫೈಲಿಂಗ್​ನಲ್ಲಿ ಟೈಟನ್ ತಿಳಿಸಿದೆ.

ಆಭರಣದ ಸೆಗ್ಮೆಂಟ್ ವರ್ಷದಿಂದ ವರ್ಷಕ್ಕೆ, ಅಂದರೆ ಕಳೆದ ವರ್ಷಕ್ಕಿಂತ ಶೇ 71.1ರಷ್ಟು ಬೆಳವಣಿಗೆ ದಾಖಲಿಸಿ, ಆದಾಯವಾಗಿ ರೂ. 6,422 ಕೋಟಿಯನ್ನು ಪಡೆದಿದೆ. ಕೊರೊನಾ ಬಿಕ್ಕಟ್ಟಿಗೆ ಸಿಲುಕಿದ ವರ್ಷದಲ್ಲಿ FY21ಕ್ಕೆ ಸ್ಟ್ಯಾಂಡ್​ಅಲೋನ್ ಲಾಭವು ಶೇ 42.2ರಷ್ಟು ಕುಸಿದು ರೂ. 877 ಕೋಟಿ ಮುಟ್ಟಿದೆ. ಮತ್ತು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಆದಾಯವು ಶೇ 3ರಷ್ಟು ಹೆಚ್ಚಳವಾಗಿ ರೂ. 20,602 ಕೋಟಿ ತಲುಪಿದೆ.

ಐವೇರ್ ಸೆಗ್ಮೆಂಟ್​ನಲ್ಲಿ ಆದಾಯವು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 17.6ರಷ್ಟು ಬೆಳವಣಿಗೆಯಾಗಿ, ರೂ. 127 ಕೋಟಿ ಆಗಿದೆ. ವಾಚ್​ಗಳು ಹಾಗೂ ವೇರಬಲ್​ನಿಂದ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 0.4ರಷ್ಟು ಇಳಿಕೆಯಾಗಿ 555 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಕಂಪೆನಿಗೆ ನಾಲ್ಕನೇ ತ್ರೈಮಾಸಿಕದಲ್ಲಿ 1,166 ಕೋಟಿ ರೂ. ಲಾಭ; 45 ರೂ. ಡಿವಿಡೆಂಡ್ ಘೋಷಣೆ

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್ ಜನವರಿ- ಮಾರ್ಚ್ ತ್ರೈಮಾಸಿಕ ಲಾಭ ಶೇ 260ರಷ್ಟು ಏರಿಕೆ

(Titan company FY21 Q4 net profit at 529 crore rupees, yoy growth 48%)