ಐಸಿಐಸಿಐ ಬ್ಯಾಂಕ್ ಜನವರಿ- ಮಾರ್ಚ್ ತ್ರೈಮಾಸಿಕ ಲಾಭ ಶೇ 260ರಷ್ಟು ಏರಿಕೆ

ಐಸಿಐಸಿಐ ಬ್ಯಾಂಕ್​ನಿಂದ 2020-21ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಜನವರಿ- ಮಾರ್ಚ್ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಶೇ 260ರಷ್ಟು ಬೆಳವಣಿಗೆ ದಾಖಲಾಗಿದೆ.

ಐಸಿಐಸಿಐ ಬ್ಯಾಂಕ್ ಜನವರಿ- ಮಾರ್ಚ್ ತ್ರೈಮಾಸಿಕ ಲಾಭ ಶೇ 260ರಷ್ಟು ಏರಿಕೆ
ಐಸಿಐಸಿಐ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಎರಡು ಖಾತೆಗಳನ್ನು ನೀಡುತ್ತದೆ - ಯಂಗ್ ಸ್ಟಾರ್ಸ್ ಅಕೌಂಟ್ ಮತ್ತು ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆ ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. 18 ವರ್ಷದೊಳಗಿನ ಯಾವುದೇ ಮಗುವಿಗಾಗಿ ಯಂಗ್ ಸ್ಟಾರ್ಸ್ ಖಾತೆ ತೆರೆಯಬಹುದು. ಆದರೆ ಈ ಸೌಲಭ್ಯವನ್ನು ಪಡೆಯಲು ಪಾಲಕರು ಐಸಿಐಸಿಐ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗಾಗಿ ತೆರೆಯಬಹುದು. ಆದರೆ ಯಂಗ್ ಸ್ಟಾರ್ಸ್ ಸೇವಿಂಗ್ಸ್ ಖಾತೆಯಲ್ಲಿ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) 3,000 ರೂಪಾಯಿ. ಎಟಿಎಂ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯದ ಜತೆಗೆ ಆರ್‌ಡಿ, ಎಫ್‌ಡಿ, ಎಸ್‌ಐಪಿ ಇತ್ಯಾದಿ ವಿವಿಧ ಮೂಲಭೂತ ಹೂಡಿಕೆ ಆಯ್ಕೆಗಳೊಂದಿಗೆ ಇವೆ.
Follow us
Srinivas Mata
|

Updated on: Apr 24, 2021 | 9:51 PM

ಐಸಿಐಸಿಐ ಬ್ಯಾಂಕ್​ನಿಂದ 2020- 21ನೇ ಹಣಕಾಸು ವರ್ಷದ ಜನವರಿಯಿಂದ ಮಾರ್ಚ್ ಅವಧಿಯ ತ್ರೈಮಾಸಿಕ ಫಲಿತಾಂಶವನ್ನು ಶನಿವಾರ ಘೋಷಣೆ ಮಾಡಲಾಗಿದೆ. ಶೇ 260ರಷ್ಟು ಬೆಳವಣಿಗೆ ಕಂಡು, ನಿವ್ವಳ ಲಾಭ 4,402.62 ಕೋಟಿ ರೂಪಾಯಿಯನ್ನು ದಾಖಲಿಸಲಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 1,221.36 ಕೋಟಿ ರೂಪಾಯಿ ಲಾಭ ದಾಖಲಿಸಿತ್ತು ಐಸಿಐಸಿಐ ಬ್ಯಾಂಕ್. ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಎನಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್ ನಿವ್ವಳ ಬಡ್ಡಿ ಆದಾಯದಲ್ಲಿ ಶೇ 17ರಷ್ಟು ಏರಿಕೆ ಕಂಡು, ಈ ತ್ರೈಮಾಸಿಕದಲ್ಲಿ 10,431 ಕೋಟಿ ರೂಪಾಯಿ ಬಂದಿದೆ. ಅಕ್ಟೋಬರ್​ನಿಂದ- ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ 4,940 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಪಡೆದಿತ್ತು.

ಬ್ಯಾಂಕ್​ನ ಎನ್​ಪಿಎ (ನಾನ್ ಪರ್ಫಾರ್ಮಿಂಗ್ ಅಸೆಟ್ಸ್) ರೇಷಿಯೋ ಮಾರ್ಚ್ 31, 2021ಕ್ಕೆ ಶೇ 1.14ಕ್ಕೆ ಇಳಿಕೆ ಆಗಿದೆ. ಡಿಸೆಂಬರ್ 31, 2020ರಲ್ಲಿ ಪ್ರೊಫಾರ್ಮಾ ಆಧಾರದಲ್ಲಿ ಅಲ್ಲದೆ ಶೇ 1.26 ಇತ್ತು ಮತ್ತು ಮಾರ್ಚ್ 31, 2020ಕ್ಕೆ ಶೇ 1.14ಕ್ಕೆ ಇಳಿದಿದೆ. ಇನ್ನು ಐಸಿಐಸಿಐ ಬ್ಯಾಂಕ್ ಹೇಳಿರುವ ಪ್ರಕಾರ, ಕೋವಿಡ್-19 ಸಂಬಂಧಿಸಿದ ಪ್ರಾವಿಷನ್ ಹೆಚ್ಚುವರಿಯಾಗಿ 1000 ಕೋಟಿ ರೂಪಾಯಿ ಮಾಡಲಾಗಿದೆ. ಮತ್ತು ಕೋವಿಡ್​ಗೆ ಸಂಬಂಧಿಸಿದ ಪ್ರಾವಿಷನ್ ಮಾರ್ಚ್ 31, 2021ಕ್ಕೆ 7475 ಕೋಟಿ ಇದೆ.

ವರ್ಷದಿಂದ ವರ್ಷಕ್ಕೆ ಬ್ಯಾಂಕ್​ನ ಒಟ್ಟಾರೆ ಠೇವಣಿ ಶೇ 21ರಷ್ಟು ಹೆಚ್ಚಾಗಿದ್ದು, 9,32,522 ಕೋಟಿ ಆಗಿದೆ. ದೇಶೀಯ ಸಾಲ ಶೇ 18ರಷ್ಟು ಬೆಳವಣಿಗೆ ಆಗಿದ್ದರೆ, ವರ್ಷದಿಂದ ವರ್ಷಕ್ಕೆ ರೀಟೇಲ್ ಸಾಲ ಶೇ 20ರಷ್ಟು ಬೆಳವಣಿಗೆ ಆಗಿದೆ. ಕಂಟಿಜೆನ್ಸಿ ಪ್ರಾವಿಷನ್ ಮೊತ್ತವಾದ 3509 ಕೋಟಿ ರೂಪಾಯಿಯನ್ನು ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್​ನಿಂದ ಬಳಸಲಾಗಿದೆ. ಆರ್​ಬಿಐ ಮಾರ್ಗದರ್ಶಿ ಸೂತ್ರದ ಪ್ರಕಾರ, ಡಿಸೆಂಬರ್ 31, 2021ಕ್ಕೆ ಎನ್​ಪಿಎ ಪ್ರೊಫಾರ್ಮಾಗೆ ಇದನ್ನು ಬಳಸಲಾಗಿದೆ.

ಐಸಿಐಸಿಐ ಬ್ಯಾಂಕ್​ನಿಂದ ಪ್ರತಿ ಷೇರಿಗೆ ರೂ. 2 ಡಿವಿಡೆಂಡ್ ಶಿಫಾರಸು ಮಾಡಲಾಗಿದೆ. ಈ ಘೋಷಣೆಯು ಅಗತ್ಯ ಅನುಮತಿಗಳ ಮೇಲೆ ಅವಲಂಬಿತವಾಗಿದೆ. ಶುಕ್ರವಾರದಂದು ದಿನಾಂತ್ಯಕ್ಕೆ ಐಸಿಐಸಿಐ ಬ್ಯಾಂಕ್ ಷೇರಿನ ಬೆಲೆ ಬಿಎಸ್​ಇಯಲ್ಲಿ 570.05 ರೂಪಾಯಿ ಇತ್ತು.

ಇದನ್ನೂ ಓದಿ: HCL Technologies FY21 Q4 Results; ಎಚ್​ಸಿಎಲ್ ವಿಶೇಷ ಮಧ್ಯಂತರ ಡಿವಿಡೆಂಡ್ ತಲಾ 10 ರೂ. ಘೋಷಣೆ

(ICICI Bank announced FY21 Q4 results on Saturday. Net profit jumps many folds)