AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CBDTಯಿಂದ ವಿವಾದ್ ಸೇ ವಿಶ್ವಾಸ್ ಸೇರಿ ವಿವಿಧ ತೆರಿಗೆ ಸಂಬಂಧಿತ ಪಾವತಿಗೆ ಜೂನ್ ತನಕ ಅವಧಿ ವಿಸ್ತರಣೆ

CBDTಯಿಂದ ವಿವಾದ್​ ಸೇ ವಿಶ್ವಾಸ್ ವ್ಯಾಜ್ಯ ವಿಲೇವಾರಿ ತೆರಿಗೆ ಪಾವತಿಯೂ ಸೇರಿದಂತೆ ಇತರ ತೆರಿಗೆ ಸಂಬಂಧಿತ ಪಾವತಿಗೆ ಅವಧಿಯನ್ನು ಜೂನ್ ತಿಂಗಳ ಕೊನೆ ತನಕ ವಿಸ್ತರಿಸಲಾಗಿದೆ.

CBDTಯಿಂದ ವಿವಾದ್ ಸೇ ವಿಶ್ವಾಸ್ ಸೇರಿ ವಿವಿಧ ತೆರಿಗೆ ಸಂಬಂಧಿತ ಪಾವತಿಗೆ ಜೂನ್ ತನಕ ಅವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರ
Srinivas Mata
|

Updated on: Apr 24, 2021 | 4:46 PM

Share

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಶನಿವಾರ ಹೇಳಿರುವ ಪ್ರಕಾರ, ನೇರ ತೆರಿಗೆ ವ್ಯಾಜ್ಯ ವಿಲೇವಾರಿ ಯೋಜನೆಯಾದ ವಿವಾದ್ ಸೇ ವಿಶ್ವಾಸ್ ಪಾವತಿಯೂ ಸೇರಿದಂತೆ ಕೆಲವಕ್ಕೆ ಅಂತಿಮ ಗಡುವಿನ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಇನ್ನೂ ಎರಡು ತಿಂಗಳ ಕಾಲ ಅವಧಿಯನ್ನು ವಿಸ್ತರಣೆ ಮಾಡಿರುವುದಾಗಿ ಸಿಬಿಡಿಟಿ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಲಾಗಿದ್ದು, ಈ ಹಿಂದೆ ಏಪ್ರಿಲ್ 30, 2021ರ ತನಕ ಗಡುವನ್ನು ವಿಸ್ತರಿಸಲಾಗಿತ್ತು. ಅದೀಗ ಜೂನ್ 30, 2021ರ ತನಕ ಮುಂದುವರಿಸಲಾಗಿದೆ ಎಂದು ತಿಳಿಸಲಾಗಿದೆ.

ಅದರ ಪ್ರಕಾರ, ಯಾವ ತೆರಿಗೆದಾರರು ವಿವಾದ್ ಸೇ ವಿಶ್ವಾಸ್ ಯೋಜನೆ ಅಡಿಯಲ್ಲಿ ನೇರ ತೆರಿಗೆ ವ್ಯಾಜ್ಯ ಪರಿಹಾರಕ್ಕೆ ಸಹಿ ಹಾಕಿರುತ್ತಾರೋ ಅಂಥವರು ಹೆಚ್ಚುವರಿಯಾಗಿ ಶೇ 10ರಷ್ಟು ನೀಡುವ ಅಗತ್ಯ ಇಲ್ಲದೆ ಜೂನ್ ಕೊನೆ ಹೊತ್ತಿಗೆ ತೆರಿಗೆ ಪಾವತಿಸಬಹುದು. ಅಸೆಸ್​ಮೆಂಟ್​ನಿಂದ ತಪ್ಪಿಸಿಕೊಂಡ ಪ್ರಕರಣಗಳಲ್ಲಿ ಆದಾಯವನ್ನು ಪುನಃ ಲೆಕ್ಕ ಹಾಕುವುದಕ್ಕೆ, ಅಸೆಸ್​ಮೆಂಟ್ ಪೂರ್ತಿಗೊಳಿಸುವುದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ನೀಡುವುದಕ್ಕೆ, ಇತರ ಕಲಾಪಗಳಿಗೆ ಹೆಚ್ಚುವರಿಯಾಗಿ ಸಮಯ ನೀಡಲಾಗುತ್ತದೆ.

ದೇಶದಾದ್ಯಂತ ಕೋವಿಡ್- 19 ಪ್ರಕರಣಗಳಲ್ಲಿ ಹೆಚ್ಚಳ ಆಗಿರುವುದರಿಂದ ಸಿಬಿಡಿಟಿಯಿಂದ ದಿನಾಂಕ ವಿಸ್ತರಣೆ ಮಾಡಲಾಗಿದೆ. ಇನ್ನು ತೆರಿಗೆ ಪಾವತಿದಾರರು, ತೆರಿಗೆ ಕನ್ಸಲ್ಟೆಂಟ್​ಗಳು ಮತ್ತು ಇತರರು ದಿನಾಂಕ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದರು. ವ್ಯಾಜ್ಯ ವಿಲೇವಾರಿ ಸಮಿತಿ ನೀಡುವ ನಿರ್ದೇಶನದ ಅನ್ವಯ ಆದೇಶ ಹೊರಡಿಸುವ ಸಮಯ ಕೂಡ ವಿಸ್ತರಿಸಲಾಗಿದೆ. ಇದರ ಜತೆಗೆ ತೆರಿಗೆಯ ಈಕ್ವಲೈಸೇಷನ್​ನ ಸ್ಟೇಟ್​ಮೆಂಟ್​ ಪ್ರಕ್ರಿಯೆಗೆ ತೆರಿಗೆ ಇಲಾಖೆಯಿಂದ ಉದ್ಯಮಗಳಿಗೆ ತಿಳಿಸುವ ಸಮಯದ ಮಿತಿಯನ್ನು ಕೂಡ ಜೂನ್ ಕೊನೆ ತನಕ ವಿಸ್ತರಿಸಲಾಗಿದೆ. ಈ ವಿಸ್ತರಣೆ ದಿನಾಂಕಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಶೀಘ್ರದಲ್ಲಿ ಹೊರಡಿಸಲಾಗುವುದು ಎಂದು ಸಿಬಿಡಿಟಿ ಹೇಳಿದೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸಿಬ್ಬಂದಿ ದೊರೆಯುವುದು ಕಷ್ಟವಾಗುತ್ತಿದೆ. ಈ ಕಾರಣದಿಂದ ಉದ್ಯಮಗಳು, ವೃತ್ತಿಪರ ಸೇವಾ ಸಂಸ್ಥೆಗಳು ಮತ್ತು ತೆರಿಗೆ ಅಧಿಕಾರಿಗಳು ಎಲ್ಲರಿಗೂ ಈಗ ಸಮಸ್ಯೆ ಎದುರಾಗಿದೆ. ಜಿಎಸ್​ಟಿ ಫೈಲಿಂಗ್ ದಿನಾಂಕದ ಗಡುವನ್ನು ಸಹ ವಿಸ್ತರಣೆ ಮಾಡಬೇಕು ಎಂದು ಉದ್ಯಮಗಳು ನಿರೀಕ್ಷೆ ಮಾಡುತ್ತಿವೆ.

ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ

(Central Board Of Direct Tax (CBDT) extends Vivad Se Vishwas and othe tax related payment deadline till June 2021, because of surge in covid numbers in India)

ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?