ವೈದ್ಯಕೀಯ ಆಮ್ಲಜನಕ ಕೊರತೆ ನಿಭಾಯಿಸಲು ಕೇಂದ್ರ ಸರ್ಕಾರ ಏಪ್ರಿಲ್ ಮೊದಲ ವಾರದಲ್ಲೇ ಕಾರ್ಯೋನ್ಮುಖಗೊಂಡಿತ್ತು

ಔದ್ಯೋಗಿಕ ಆಕ್ಸಿಜನ್ ಉತ್ಪಾದಕರಿಂದ ತಯಾರಾದ ವೈದ್ಯಕೀಯ ಆಕ್ಸಿಜನ್ ಸರಬರಾಜು ಆರಂಭಿಸುವುದನ್ನು ಖಾತ್ರಿಪಡಿಸಲು ಸದರಿ ಆದೇಶವನ್ನು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಕೂಡಲೇ ರವಾನಿಸಲಾಗಿತ್ತು.

ವೈದ್ಯಕೀಯ ಆಮ್ಲಜನಕ ಕೊರತೆ ನಿಭಾಯಿಸಲು ಕೇಂದ್ರ ಸರ್ಕಾರ ಏಪ್ರಿಲ್ ಮೊದಲ ವಾರದಲ್ಲೇ ಕಾರ್ಯೋನ್ಮುಖಗೊಂಡಿತ್ತು
ಆಮ್ಲಜನಕ ತಯಾರಿಕಾ ಘಟಕ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 24, 2021 | 9:50 PM

ನವದೆಹಲಿ: ಪ್ರಾಯಶಃ ಇದು ಬಹಳ ಜನರಿಗೆ ಗೊತ್ತಿರಲಿಲ್ಲ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗುವ ಮೊದಲೇ ಕೇಂದ್ರ ಸರ್ಕಾರ ಇಂಥ ಸ್ಥಿತಿ ಎದುರಾಗಬಹುದೆಂಬ ಅಂಶವನ್ನು ಮನಗಂಡು ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿತ್ತು. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜಿಸುವ ಇಲಾಖೆ (ಡಿಪಿಐಐಟಿ) ಏಪ್ರಿಲ್​ 6ರಂದು ಸಭೆಯೊಂದನ್ನು ಏರ್ಪಡಿಸಿತ್ತು. ಆ ಸಭೆಯಲ್ಲಿ ಅಖಿಲ ಭಾರತ ಅನಿಲ ಉತ್ಪಾದಕರ ಸಂಸ್ಥೆ (ಎಐಐಜಿಎಮ್​ಎ) ಮತ್ತು ಭಾರತದ ಪ್ರಧಾನ ಔಷಧ ನಿಯಂತ್ರಕ ಸಹ ಪಾಲ್ಗೊಂಡಿದ್ದರು. ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಔದ್ಯೋಗಿಕ ಬಳಕೆಗಾಗಿ ಆಮ್ಲಜನಕವನ್ನು ಉತ್ಪಾದಿಸುವ ಕೈಗಾರಿಕೆಗಳಿಗೆ; ವೈದ್ಯಕೀಯ ಆಮ್ಲಜನಕಕ್ಕಾಗಿ ಮನವಿ ಸಲ್ಲಿಸಿದಲ್ಲಿ ಅದನ್ನು 24 ಗಂಟೆಯೊಳಗೆ ತಯಾರಿಸುವ ಅನುಮತಿ ನೀಡಲಾಗಿತ್ತು.

ಈ ಪ್ರಸ್ತಾಪವನ್ನು ಮುಂದಿಟ್ಟ ಎಐಐಗಜಿಎಮ್​ಎ ಅಧ್ಯಕ್ಷ ಸಾಕೆತ್ ಟಿಕು ಅವರು, ಜರ್ಮನಿಯಲ್ಲಿ ಔದ್ಯೋಗಿಕ ಬಳಕೆಯ ಆಕ್ಸಿಜನ್​ ಅನ್ನು ವೈದ್ಯಕೀಯ ಆಕ್ಸಿಜನ್​ ಆಗಿ ಪರಿವರ್ತಿಸುವ ಪ್ರಯೋಗ ಅರಂಭಗೊಂಡಿದೆಯೆಂದು ಸಭೆಯಲ್ಲಿ ಹೇಳಿದ್ದರು. ಮರುದಿನವೇ ಅಂದರೆ ಏಪ್ರಿಲ್ 7ರಂದು ಟಿಕು ಅವರ ಸಲಹೆಯನ್ನು ಡಿಪಿಐಐಟಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿತು ಮತ್ತು ಔದ್ಯೋಗಿಕ ಬಳಕೆಯ ಆಕ್ಸಿಜನ್​ ಅನ್ನು ಉತ್ಪಾದಿಸುವ ಕೈಗಾರಿಕೆಗಳಿಗೆ ವೈದ್ಯಕೀಯ ಆಮ್ಲಜನಕ ತಯಾರಿಸಲು ಅನುಮತಿ ನೀಡುವ ಹಾಗೆ ಒಂದು ಆದೇಶವನ್ನೂ ಜಾರಿಗೊಳಿಸಲಾಯಿತು.

‘ಔದ್ಯೋಗಿಕ ಬಳಕೆಗೆ ಆಕ್ಸಿಜನ್ ಉತ್ಪಾದಿಸುವ ಸೌಲಭ್ಯಹೊಂದಿರುವ ಕೈಗಾರಿಕೆಗಳಿಗೆ, ವೈದ್ಯಕೀಯ ಸೇವೆಗಳಿಗೆ ಬಳಸುವ ಆಮ್ಲಜನಕ ತಯಾರಿಸಿ ಒದಗಿಸುವ ಮನವಿ ಬಂದಲ್ಲಿ ಅದನ್ನು 24 ಗಂಟೆಯೊಳಗೆ ತಯಾರಿಸಿ ಪೂರೈಸುವ ಅನುಮತಿಯನ್ನು ಸದರಿ ಕೈಗಾರಿಕೆಗಳಿಗೆ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಅನ್ವಯ ನೀಡಬೇಕು’, ಎಂದು ಆದೇಶದಲ್ಲಿ ಹೇಳಲಾಗಿತ್ತು.

DCGI Letter

ಪ್ರಧಾನ ಔಷದ ನಿಯಂತ್ರಕರ (ಭಾರತ) ಪತ್ರ

ಔದ್ಯೋಗಿಕ ಆಕ್ಸಿಜನ್ ಉತ್ಪಾದಕರಿಂದ ತಯಾರಾದ ವೈದ್ಯಕೀಯ ಆಕ್ಸಿಜನ್ ಸರಬರಾಜು ಆರಂಭಿಸುವುದನ್ನು ಖಾತ್ರಿಪಡಿಸಲು ಸದರಿ ಆದೇಶವನ್ನು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಕೂಡಲೇ ರವಾನಿಸಲಾಗಿತ್ತು.

ಸರ್ಕಾರದ ಈ ಆದೇಶದ ಅನ್ವಯವೇ, ಔದ್ಯೋಗಿಕ ಆಕ್ಸಿಜನ್ ಉತ್ಪಾದಿಸುವ ಹಲವಾರು ಕೈಗಾರಿಕೆಗಳು ವೈದ್ಯಕೀಯ ಆಕ್ಸಿಜನ್ ಉತ್ಪಾದಿಸಲು ಆರಂಭಿಸಿದ್ದು ಇದು ಆಕ್ಸಿಜನ್ ಅಭಾವದ ಸಮಸ್ಯೆಯನ್ನು ನೀಗಿಸಲು ಮತ್ತು ಕೊವಿಡ್-19 ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ನೆರವಾಗುತ್ತಿದೆ. ಆಕ್ಸಿಜನ್ ಸಿಲಿಂಡರ್​ಗಳ ತೀವ್ರ ಅಭಾವ ಎದುರಿಸುತ್ತಿರುವ ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಿಗೆ ಅದರ ಸರಬರಾಜು ಶುರುವಾಗಿದ್ದು ಪರಿಸ್ಥಿತಿ ಕ್ರಮೇಣವಾಗಿ ಸುಧಾರಿಸುತ್ತಿದೆ. ಅದರೆ, ಕೊವಿಡ್ ಸೋಂಕಿನ ಪ್ರಕರಣಗಳು ಎಲ್ಲೆ ಮೀರಿ ಹಬ್ಬುತ್ತಿರುವುದರಿಂದ ಹಲವು ಆಸ್ಪತ್ರೆಗಳಲ್ಲಿ ಅದರ ಅಭಾವ ಅಗಾಗ್ಗೆ ತಲೆದೋರುತ್ತಿದೆ.

ಆಕ್ಸಿಜನ್ ಸಿಲಿಂಡರ್​ಗಳ ಅಭಾವದ ಸಮಸ್ಯೆಯನ್ನು ನಿಭಾಯಿಸಲು ಮತ್ತು ಸರಬರಾಜನ್ನು ಜಾರಿಯಲ್ಲಿಡಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ರೇಲ್ವೆ ಸಚಿವಾಲಯವು ಆಕ್ಸಿಜನ್ ಎಕ್ಸ್​ಪ್ರೆಸ್ ಸೇವೆಯನ್ನು ಆರಂಭಿಸಿ ಆಕ್ಸಿಜನ್ ತುಂಬಿದ ಟ್ಯಾಂಕರ್​ಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ತಲುಪಿಸುತ್ತಿದೆ. ಭಾರತೀಯ ವಾಯು ಸೇನೆಯು ತನ್ನು ಕಾರ್ಗೊ ವಿಮಾನಗಳ ಮೂಲಕ ಆಕ್ಸಿಜನ್ ಟ್ಯಾಂಕರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಅಗತ್ಯ ಪ್ರದೇಶಗಳಿಗೆ ತಲುಪಿಸುತ್ತಿದೆ. ಹಾಗೆಯೇ ಪಿಎಮ್ ಕೇರ್ಸ್ ಯೋಜನೆಯಡಿ ಆಕ್ಸಿಜನ್ ಉತ್ಪಾದಿಸುವ ಘಟಕಗಳನ್ನು ದೇಶದ ವಿವಿಧ ಭಾಗಗಳಲ್ಲಿನ 100 ಆಸ್ಪತ್ರೆಗಳಲ್ಲಿ ನಿಯೋಜಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅಲ್ಲದೆ, ಕೇಂದ್ರವು 50,000 ಮೆಟ್ರಿಕ್ ಟನ್​ಗಳಷ್ಟು ಆಮ್ಲಜನಕವನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಸಹ ತೆಗೆದುಕೊಂಡಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ಟ್ರೆಂಡ್​ ಆಗ್ತಿದೆ #IndiaNeedsOxygen.. ನಾವು ಸಹ ಭಾರತೀಯರಿಗಾಗಿ ಪ್ರಾರ್ಥಿಸುತ್ತಿದ್ದೇವೆ: ಶೋಯೆಬ್ ಅಖ್ತರ್

Published On - 4:49 pm, Sat, 24 April 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್