Gold Rate Today: ಏಪ್ರಿಲ್ 25ರಂದು ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ,ಬೆಳ್ಳಿ ದರ ಹೀಗಿದೆ!

Gold Price Today: ಮದುವೆ ಅಂದತಕ್ಷಣ ಖರೀದಿಗಳು ಹೆಚ್ಚು. ಅದರಲ್ಲಿಯೂ ಚಿನ್ನ ಕೊಳ್ಳದೇ ಇರಲು ಸಾಧ್ಯವೆ? ಸಮಾರಂಭದಲ್ಲಿ ರಂಗುರಂಗಿನ ಉಡುಪು ಧರಿಸಿ, ಚಿನ್ನಗಳನ್ನು ತೊಟ್ಟು ಅಲಂಕಾರಗೊಳ್ಳುವುದರಲ್ಲಿ ಏನೋ ಒಂದು ರೀತಿಯ ಖುಷಿ. ಹಾಗಿದ್ದಾಗ ಇಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ.

Gold Rate Today: ಏಪ್ರಿಲ್ 25ರಂದು ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ,ಬೆಳ್ಳಿ ದರ ಹೀಗಿದೆ!
ಚಿನ್ನದ ಆಭರಣ
Follow us
shruti hegde
|

Updated on:Apr 25, 2021 | 9:02 AM

ಬೆಂಗಳೂರು: ಮನೆಯಲ್ಲಿ ಮದುವೆ ಸಮಾರಂಭಗಳು ಏರ್ಪಟ್ಟಿರುತ್ತವೆ. ಕೊರೊನಾ ಸಾಂಕ್ರಾಮಿಕ ಎಲ್ಲೆಡೆ ತನ್ನ ಆರ್ಭಟ ತೋರುತ್ತಿದೆ. ಹೀಗಿರುವಾಗ ಸಮಾರಂಭಗಳಿಗೆ ಕಡಿಮೆ ಜನರ ಅನುಮತಿಯ ಮೇರೆಗೆ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ.‌ ಮದುವೆ ಅಂದತಕ್ಷಣ ಖರೀದಿಗಳು ಹೆಚ್ಚು. ಅದರಲ್ಲಿಯೂ ಚಿನ್ನ ಕೊಳ್ಳದೇ ಇರಲು ಸಾಧ್ಯವೆ? ಸಮಾರಂಭದಲ್ಲಿ ರಂಗುರಂಗಿನ ಉಡುಪು ಧರಿಸಿ, ಚಿನ್ನಗಳನ್ನು ತೊಟ್ಟು ಅಲಂಕಾರಗೊಳ್ಳುವುದರಲ್ಲಿ ಏನೋ ಒಂದು ರೀತಿಯ ಖುಷಿ. ಹಾಗಿದ್ದಾಗ ಇಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ.

ಬೆಂಗಳೂರಿನಲ್ಲಿ ಚಿನ್ನದ ದರ ಇಂದು ಕೊಂಚ ಕುಸಿದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,600 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 48,660 ರೂಪಾಯಿ ಆಗಿದೆ. ಅದೇ ರೀತಿ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ, ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 44,770 ರೂಪಾಯಿಗೆ ನಿನ್ನೆ ಮಾರಾಟವಾಗಿದೆ. ಇಂದು 180 ರೂ. ಇಳಿಕೆ ಕಂಡಿದ್ದು 44,770 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,040 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 48,840 ರೂಪಾಯಿ ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 46,360 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ ಇಳಿದಿದ್ದು, 46,250 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 50,580 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 50,470 ರೂಪಾಯಿಗೆ ಇಳಿಕೆಯಾಗಿದೆ.

ಇನ್ನು, ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ಇಂದು 44,800 ರೂ.ಗೆ ಮಾರಾಟವಾಗಿದ್ದು, ಇಂದು ದರ 44,600 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 48,870 ರೂ.ಗೆ ಮಾರಾಟವಾಗಿದ್ದು, ಇಂದು ದರ 48,660 ರೂಪಾಯಿಗೆ ಇಳಿಕೆಯಾಗಿದೆ. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ನಿನ್ನೆ 45,060 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ ಇಳಿಕೆಯ ನಂತರ 44,950 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 46,060 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,950 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಮಾಹಿತಿ 1 ಗ್ರಾಂ ಚಿನ್ನದ ನಿನ್ನೆ 4,480 ರೂ.ಗೆ ಮಾರಾಟವಾಗಿತ್ತು. ಇಂದು ಕೊಂಚ ದರ ಇಳಿಕೆಯ ನಂತರದಲ್ಲಿ 4,460 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 35,840 ರೂ.ಗೆ ಮಾರಾಟವಾಗಿತ್ತು. ಇಂದು ದರ ಇಳಿದಿದ್ದು, 35,680 ರೂ. ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 44,800 ರೂಪಅಯಿ ಆಗಿದ್ದು, ಇಂದು ದರ 35,680 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ನಿನ್ನೆ 44,800 ರೂಪಾಯಿ ಅಗಿದ್ದು, ಇಂದು ದರ 44,600 ರೂ.ಗೆ ಇಳಿದಿದೆ. ಅಂತೆಯೇ 100 ಗ್ರಾಂ ಚಿನ್ನ ನಿನ್ನೆ 4,48,000 ರೂ.ಗೆ ಮಾರಾಟವಾಗಿದ್ದು ಇಂದು ದರ 4,46,000 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು 2,000 ರೂಪಾಯಿ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ಮಾಹಿತಿ 1 ಗ್ರಾಂ ಚಿನ್ನ ನಿನ್ನೆ 4,887 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,866 ರೂಪಾಯಿಗೆ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ನಿನ್ನೆ 39,096 ರೂ.ಗೆ ಮಾರಾಟವಾಗಿದ್ದು ಇಂದು ದರ 38,928 ರೂ. ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 48,870 ರೂ.ಗೆ ಮಾರಾಟವಾಗಿದ್ದು ಇಂದು ದರ 48,660 ರೂಪಾಯಿ ಅಗಿದೆ. 100 ಗ್ರಾಂ ಚಿನ್ನದ ರ ನಿನ್ನೆ 4,88,700 ರೂ.ಗೆ ಗ್ರಾಹಕರು ಖರೀದಿಸಿದ್ದು, ಇಂದು 2,100 ರೂಪಾಯಿಯಷ್ಟು ಇಳಿಕೆಯ ನಂತರ 4,86,600 ರೂ. ಇಳಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ದರವೂ ಕೊಂಚ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ನಿನ್ನೆ 68.90 ರೂ.ಗೆ ಮಾರಾಟವಾಗಿದ್ದು, ಇಂದು ದರ 68.70 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 551.20 ರೂ.ಗೆ ಮಾರಾಟವಾಗಿದ್ದು ಇಂದು ದರ 549.60 ರೂ. ಆಗಿದೆ. 10 ಗ್ರಾಂ ಬೆಳ್ಳಿ ನಿನ್ನೆ 689 ರೂ.ಗೆ ಮಾರಾಟವಾಗಿದೆ. ಇಂದು ದರ 687 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,880 ರೂ. ಇದ್ದು, ಇಂದು ದರ 6,870 ರೂ. ಆಗಿದೆ. ಹಾಗೆಯೇ 1ಕೆಜಿ ಬೆಳ್ಳಿ ನಿನ್ನೆ 68,900 ರೂಪಾಯಿಗೆ ಮಾರಾಟವಾಗಿದ್ದು, ಇಂದು  68,700 ರೂ. ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 200 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಚೆನ್ನೈ, ದೆಹಲಿ, ಹೈದರಾಬಾದ್​ ಮತ್ತು ಮುಂಬೈ ನಗರಗಳಲ್ಲಿ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ಪರಿಶೀಲಿಸಿದಾಗ, ಮುಂಬೈನಲ್ಲಿ 1ಕೆಜಿ ಬೆಳ್ಳಿ ದರ 68,700 ರೂಪಾಯಿ ಇದೆ. ಹಾಗೆಯೇ ಹೈದರಾಬಾದ್​ನಲ್ಲಿ 74,000 ರೂಪಾಯಿ ಇದೆ. ದೆಹಲಿಯಲ್ಲಿ ಇಂದು 1ಕೆಜಿ ಬೆಳ್ಳಿ ದರ 68,700 ರೂಪಾಯಿ ಇದೆ. ಚೆನ್ನೈನಲ್ಲಿ ಬೆಳ್ಳಿ ದರ ಇಂದು ಇಳಿಕೆಯ ನಂತರದಲ್ಲಿ 1 ಕೆಜಿ ಬೆಳ್ಳಿ 74,000 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ವಿವಿಧ ನಗರಗಳಲ್ಲಿ ಚಿನ್ನದ ದರ ಹೀಗಿದೆ; ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ

(Gold Rate Today in Delhi Bangalore hyderabad chennai and Mumbai silver price in 2021 April 25)

Published On - 8:27 am, Sun, 25 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ