Hindustan Unilever Ltd: ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಮಾರುಕಟ್ಟೆ ಬಂಡವಾಳ 6 ಲಕ್ಷ ಕೋಟಿ ರೂ.
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಮಾರುಕಟ್ಟೆ ಬಂಡವಾಳ ಇದೇ ಮೊದಲ ಬಾರಿಗೆ 6 ಲಕ್ಷ ಕೋಟಿ ಕೋಟಿ ರೂಪಾಯಿ ದಾಟಿದೆ.
ಮುಂಬೈ: ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (Hindustan Unilever Ltd) ಕಳೆದ ವರ್ಷ ಶೇಕಡಾ 20ಕ್ಕಿಂತ ಹೆಚ್ಚು ಏರಿಕೆಯಾದ ನಂತರ, ಆಗಸ್ಟ್ 20ರ ಶುಕ್ರವಾರ 6 ಲಕ್ಷ ಕೋಟಿ ರೂಪಾಯಿಯ ಮಾರುಕಟ್ಟೆ ಬಂಡವಾಳವನ್ನು ಮುಟ್ಟಿದ್ದು, ಈ ಮೈಲುಗಲ್ಲನ್ನು ಸಾಧಿಸಿದ ಐದನೇ ಭಾರತೀಯ ಸಂಸ್ಥೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಬಿಎಸ್‌ಇಯಲ್ಲಿ ಈ ಷೇರು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 2,628.85 ರೂಪಾಯಿಯನ್ನು ದಾಖಲಿಸಿ, 2,617 ರೂಪಾಯಿಗೆ ದಿನಾಂತ್ಯಕ್ಕೆ ಮುಕ್ತಾಯ ಕಂಡಿತು. ಹಿಂದಿನ ದಿನಕ್ಕಿಂತ ಶೇ 5.4ರಷ್ಟು ಹೆಚ್ಚಾಗಿ, 6.15 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳದೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಈ ಸ್ಕ್ರಿಪ್ ಸತತ ಏಳನೇ ಸೆಷನ್‌ಗೆ ಹೆಚ್ಚಿನ ದರಕ್ಕೆ ವಹಿವಾಟು ನಡೆಸುತ್ತಿದ್ದು, ಈ ಅವಧಿಯಲ್ಲಿ ಶೇ 10ಕ್ಕಿಂತ ಹೆಚ್ಚು ಲಾಭ ಗಳಿಸಿತು.
ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಇನ್ಫೋಸಿಸ್ ಈ ಮೈಲುಗಲ್ಲನ್ನು ಸಾಧಿಸಿವೆ. ಕಳೆದ ತಿಂಗಳು, ಸಂಸ್ಥೆಯು ತನ್ನ ಜೂನ್ ತ್ರೈಮಾಸಿಕ ಗಳಿಕೆಯನ್ನು ವರದಿ ಮಾಡಿತು ಮತ್ತು ಅದರ ಟಾಪ್‌ಲೈನ್ ಲಾಕ್‌ಡೌನ್‌ನಿಂದಾಗಿ ಒಂದರ ನಂತರ ಒಂದರ ತ್ರೈಮಾಸಿಕದಲ್ಲಿ (ಶೇ -1.8 QoQ) ಅಲ್ಪ ಪ್ರಮಾಣದಲ್ಲಿ ಕಳೆದುಕೊಂಡಿತು. ಆದರೆ ವರ್ಷದಿಂದ ವರ್ಷಕ್ಕೆ ಶೇ 12.8ಕ್ಕೆ ಬಂದು, ಸುಧಾರಿಸಿತು. ಶೇ 9ರ ವಾಲ್ಯೂಮ್ಗಳಲ್ಲಿ ಬೆಳವಣಿಗೆಗೆ ನೆರವಾಯಿತು.
ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ Ebitda ಮಾರ್ಜಿನ್ ಒತ್ತಡಕ್ಕೆ ಸಿಲುಕಿ, ಉತ್ಪನ್ನಗಳ ಗುಣಮಟ್ಟದ ಮಿಶ್ರಣ ಇಳಿಕೆ ಮತ್ತು ಹೆಚ್ಚಿನ ವೆಚ್ಚದ ಕಾರಣಕ್ಕೆ 50 ಬಿಪಿಎಸ್ ಕುಸಿದು, ಶೇ 23.9ಕ್ಕೆ ಕುಗ್ಗಿದೆ. ತೆರಿಗೆಯ ನಂತರ ಸರಿಹೊಂದಿಸಲಾದ ಲಾಭವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡಾ 6.7 ಕುಸಿದಿದೆ.
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
(Hindustan Unilever Limited Market Capitalisation Crossed Rs 6 Lakh Crores For The First Time)