Best Performing Cryptocurrencies: ಬಿಟ್​ಕಾಯಿನ್, ಎಥೆರಮ್, ಶಿಬು ಇನು ಹೇಗಿದೆ ಇವುಗಳ ರಿಟರ್ನ್?

ಕಳೆದ ಎರಡು ತಿಂಗಳಲ್ಲಿ ಕ್ರಿಪ್ಟೋಕರೆನ್ಸಿಗಳು ಹೇಗೆ ಪ್ರದರ್ಶನ ನೀಡುತ್ತಿವೆ ಮತ್ತು ಯಾವ ಕ್ರಿಪ್ಟೋ ಅತ್ಯುತ್ತಮ ರಿಟರ್ನ್ಸ್ ನೀಡಿವೆ ಎಂಬುದರ ವಿವರ ಇಲ್ಲಿದೆ.

Best Performing Cryptocurrencies: ಬಿಟ್​ಕಾಯಿನ್, ಎಥೆರಮ್, ಶಿಬು ಇನು ಹೇಗಿದೆ ಇವುಗಳ ರಿಟರ್ನ್?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 12, 2021 | 8:23 PM

ಎರಡು ತಿಂಗಳ ಹಿಂದೆ ನೀವು ಬಿಟ್‌ಕಾಯಿನ್‌ನಲ್ಲಿ ರೂ. 10,000 ಹೂಡಿಕೆ ಮಾಡಿದ್ದರೆ ನಿವ್ವಳ ಹೂಡಿಕೆಗಳು ಇಂದು ಕೇವಲ 14,000 ರೂಪಾಯಿ ಆಗಿರುತ್ತಿತ್ತು. ಎಥೆರಮ್​ನಲ್ಲಿ ಹೂಡಿಕೆಯು ಬಹುತೇಕ ಇದೇ ರೀತಿಯ ರಿಟರ್ನ್ ನೀಡಿದೆ. ಆದರೆ ಹೆಚ್ಚು ಪ್ರಚಾರ ಪಡೆದ ಶಿಬಾ ಇನುವಿನಲ್ಲಿ ಹೂಡಿಕೆಯು ಈ 60 ದಿನಗಳಲ್ಲಿ ಒಟ್ಟು 74,000 ರೂಪಾಯಿ ಆಗಿದೆ. ನೀವು ಈ ಹಣವನ್ನು ಟಾಪ್-ಪರ್ಫಾರ್ಮಿಂಗ್ ಕ್ರಿಪ್ಟೋ ಕಡೇನಾ ಒಂದಕ್ಕೆ ಹಾಕಿದ್ದರೆ ನಿಮ್ಮ ಮೂಲ 10,000 ರೂಪಾಯಿ ಮೊತ್ತವು 1,57,000 ರೂಪಾಯಿ ಸಮೀಪಕ್ಕೆ ಬರುತ್ತಿತ್ತು. ಇವು ಕನಸುಗಳಲ್ಲಿ ಕಂಡ ವಿಷಯದಂತೆ ಅನಿಸಬಹುದು. ಆದರೆ ಇವು ಕಳೆದ ಎರಡು ತಿಂಗಳಲ್ಲಿ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಕಾರ್ಯಕ್ಷಮತೆಯಿಂದ ನಿಜವಾದ ಸಂಖ್ಯೆಗಳಾಗಿವೆ. ಅಂದರೆ ಸೆಪ್ಟೆಂಬರ್ 11ರಿಂದ ನವೆಂಬರ್ 11 ಮಧ್ಯದ ಬೆಳವಣಿಗೆ ಇದಾಗಿ. ಕ್ರಿಪ್ಟೋಕರೆನ್ಸಿಗಳ ಜಗತ್ತು ಪ್ರತಿ ದಿನ ಹೊಸ ಅನುಯಾಯಿಗಳನ್ನು ಪಡೆಯುತ್ತಿದೆ.

ಇಷ್ಟು ಎತ್ತರಕ್ಕೆ ಅವು ಏರಿಕೆ ಕಾಣುತ್ತಿರುವುದು ದೀರ್ಘಕಾಲದವರೆಗೆ ಮಾರುಕಟ್ಟೆಯನ್ನು ಗಮನಿಸುತ್ತಿರುವ ಯಾರಿಗಾದರೂ ಆಶ್ಚರ್ಯವೇನಲ್ಲ. ಆದರೆ ಹೊಸ ಹೂಡಿಕೆದಾರರಿಗೆ ಯಾವ ಕ್ರಿಪ್ಟೋ ಕರೆನ್ಸಿ ಅಥವಾ ಟೋಕನ್ ಅನ್ನು ಪಡೆಯುವುದು ಎಂಬುದು ನಿಜವಾದ ಸಂದಿಗ್ಧವಾಗಿದೆ. ಈ ಆಯ್ಕೆಯು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಬದಲಾಗುವ ಬಹಳಷ್ಟು ಅಂಶಗಳ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ ನೀವು ನೋಡಬೇಕಾಗಿರುವುದು ಕಾರ್ಯಕ್ಷಮತೆಯ ಚಾರ್ಟ್‌ಗಳು ಮತ್ತು ಅದು ಪ್ರಾರಂಭಿಸಲು ತುಂಬ ಸುಲಭದ ಕೆಲಸವಾಗಿದೆ.

ಇಲ್ಲಿ ನಾವು ಕೆಲವು ಕ್ರಿಪ್ಟೋಕರೆನ್ಸಿಗಳ ಮೇಲೆ ಕೇಂದ್ರೀಕರಿಸಿದ್ದೇವೆ, ಇದು ಎರಡು ತಿಂಗಳ ಉತ್ತಮ ಅವಧಿಯನ್ನು ಹೊಂದಿವೆ ಮತ್ತು ಹೂಡಿಕೆದಾರರಿಗೆ ಗಮನಾರ್ಹ ಆರ್ಥಿಕ ಫಲಿತಾಂಶಗಳನ್ನು ನೀಡಿವೆ. ಈ ವಿಶ್ಲೇಷಣೆಯು ಮಾರುಕಟ್ಟೆಯ ಮುನ್ಸೂಚನೆ ಅಲ್ಲ. ಆದರೆ ಕ್ರಿಪ್ಟೋಕರೆನ್ಸಿಗಳ ಕಾರ್ಯಕ್ಷಮತೆಯ ಕೇವಲ ಅವಲೋಕನ ಮತ್ತು ಹೂಡಿಕೆದಾರರಿಗೆ ಅವುಗಳ ಸಾಮರ್ಥ್ಯ ಏನೆಂಬುದರ ಸುಳಿವು ಎಂಬುದನ್ನು ಗಮನಿಸಬೇಕು. ಇನ್ನು ತಡ ಮಾಡದೆ ಪ್ರಾರಂಭಿಸೋಣ –

ಟಾಪ್-ಪರ್ಫಾರ್ಮಿಂಗ್ ಕ್ರಿಪ್ಟೋ ಕರೆನ್ಸಿಗಳು ಮೊದಲಿಗೆ, ಕಳೆದ ಎರಡು ತಿಂಗಳುಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವು ಕ್ರಿಪ್ಟೋ ಕರೆನ್ಸಿಗಳ ಮೇಲೆ ಮೊದಲು ಗಮನಹರಿಸೋಣ. ಇದು ಮಾರುಕಟ್ಟೆ ಮೌಲ್ಯದ ವಿಷಯದಲ್ಲಿ ಹೆಚ್ಚು ಬೆಳೆದ ಕರೆನ್ಸಿಗಳನ್ನು ಒಳಗೊಂಡಿರಬೇಕು ಎಂಬುದನ್ನು ಗಮನಿಸಿ, ಆದರೆ ನೀವು ಆ ರೀತಿಯಲ್ಲಿ ನೋಡಿದರೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಸ್ವಲ್ಪ ವಿಭಿನ್ನವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಸರಳವಾದ ಸತ್ಯ – 10ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳು ಕಳೆದ ಎರಡು ತಿಂಗಳೊಳಗೆ ಮೌಲ್ಯದಲ್ಲಿ ಶೇಕಡಾ 1,000ಕ್ಕಿಂತ ಹೆಚ್ಚಿನ ಏರಿಕೆಯನ್ನು ಕಂಡಿವೆ. ಅಂದರೆ ನಿಮ್ಮ 10,000 ರೂಪಾಯಿಗಳ ಹೂಡಿಕೆಯ ಮೇಲೆ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭ. ಇದು ಆಕರ್ಷಕವಾಗಿ ತೋರುತ್ತದೆಯಾದರೂ ಈ ಕರೆನ್ಸಿಗಳು ಸಾಮಾನ್ಯವಾಗಿ ಹೆಚ್ಚಿನ ಹೂಡಿಕೆದಾರರನ್ನು ಹೊಂದಿದ್ದು, ಸಾರ್ವಜನಿಕ ವಹಿವಾಟಿಗಾಗಿ ಕೆಲವೇ ಪ್ಲಾಟ್​ಫಾರ್ಮ್​ಗಳಲ್ಲಿ ಲಿಸ್ಟ್​ ಮಾಡಲಾಗಿದೆ. ಅಲ್ಲದೆ, ಇಂತಹ ಬುಲ್ ರನ್​ಗಳು ಈ ಕರೆನ್ಸಿಗಳಲ್ಲಿ ಹೆಚ್ಚಿನವುಗಳಿಗೆ ಜೀವಿತಾವಧಿಯಲ್ಲಿ ಒಮ್ಮೆ ನಡೆಯುವ ಘಟನೆಗಳು.

ಹೀಗಾಗಿ, ನಾವು ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಹೊಂದಿರುವ ಕ್ರಿಪ್ಟೋಕರೆನ್ಸಿಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಅಂತಹ ಒಂದು-ಶಾಟ್ ಅದ್ಭುತಗಳಿಗಿಂತ ಹೆಚ್ಚು ಸ್ಥಿರವಾಗಿರುತ್ತದೆ. ಈ ನಿಟ್ಟಿನಲ್ಲಿ ಉನ್ನತ-ಕಾರ್ಯನಿರ್ವಹಣೆಯ ಕೆಲವು ಕ್ರಿಪ್ಟೋ ಕರೆನ್ಸಿಗಳು ಇಲ್ಲಿವೆ.

ಫ್ಯಾಂಟಮ್ – ವಿಕೇಂದ್ರೀಕೃತ ಅಪ್ಲಿಕೇಷನ್‌ಗಳನ್ನು ರಚಿಸಲು ಡೆವಲಪರ್‌ಗಳನ್ನು ಸಕ್ರಿಯಗೊಳಿಸುವ ಸ್ಕೇಲೆಬಲ್ ಸ್ಮಾರ್ಟ್-ಕಾಂಟ್ರಾಕ್ಟ್ ಪ್ಲಾಟ್‌ಫಾರ್ಮ್ ಫ್ಯಾಂಟಮ್ ಕಳೆದ ಎರಡು ತಿಂಗಳಲ್ಲಿ ಬಹಳ ಚರ್ಚಿತ ಕರೆನ್ಸಿಯಾಗಿದೆ. ಮೇಲೆ ತಿಳಿಸಿದ ಎರಡು ತಿಂಗಳ ಆರಂಭದಲ್ಲಿ ಕ್ರಿಪ್ಟೋಕರೆನ್ಸಿ ಸುಮಾರು 100 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿತ್ತು. 60 ದಿನಗಳ ನಂತರ, ಈಗ ಅದು ಈ ವರದಿ ಆಗುವ ಹೊತ್ತಿಗೆ 213 ರೂಪಾಯಿ ಮೌಲ್ಯದಲ್ಲಿ ನಿಂತಿದೆ. ಶೇ 79ರಷ್ಟು ಅದ್ಭುತ ಬೆಳವಣಿಗೆಯನ್ನು ದಾಖಲಿಸಿದೆ.

Polkadot – ಹಲವಾರು ಬ್ಲಾಕ್‌ಚೈನ್‌ಗಳನ್ನು ಇಂಟರ್‌ ಆಪರೇಬಲ್ ಮಾಡಲು ವಿನ್ಯಾಸಗೊಳಿಸಲಾಗಿದೆ, Polkadot ಸೆಪ್ಟೆಂಬರ್ ಎರಡನೇ ವಾರದಲ್ಲಿ ಸುಮಾರು 2,500 ರೂಪಾಯಿಗಳಿಂದ ಇಂದು 3900 ರೂಪಾಯಿಗೆ ಬೆಳೆದಿದೆ. ಇದು ಕೇವಲ ಶೇ 52ರಷ್ಟು ಮತ್ತೊಂದು ಗೂಳಿ ಓಟಕ್ಕೆ ಸಮನಾಗಿರುತ್ತದೆ.

Binance Coin – ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯದ ವಯಕ್ತಿಕ ಕ್ರಿಪ್ಟೋ ಕರೆನ್ಸಿ, Binance Coin ಕಳೆದ 60 ದಿನಗಳಲ್ಲಿ ಶೇ 51.63ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ಸುಮಾರು 29,000 ರೂಪಾಯಿ ಬೆಲೆಯಲ್ಲಿ ಪ್ರಾರಂಭಿಸಿತು ಮತ್ತು ಸದ್ಯಕ್ಕೆ ಒಂದು ನಾಣ್ಯಕ್ಕೆ ರೂ. 50,000ಕ್ಕಿಂತ ಹೆಚ್ಚಿನ ಮೌಲ್ಯವನ್ನು ದಾಖಲಿಸಿದೆ.

ಬಿಟ್‌ಕಾಯಿನ್ – ಬಿಟ್‌ಕಾಯಿನ್ ಮಾರುಕಟ್ಟೆ ಬಂಡವಾಳ ವಿಷಯದಲ್ಲಿ ಎಲ್ಲ ಕ್ರಿಪ್ಟೋಕರೆನ್ಸಿಗಳ ಗಾಡ್‌ಫಾದರ್. ಕಳೆದ 60 ದಿನಗಳ ಅವಧಿಯಲ್ಲಿ ಶೇಕಡಾ 42.43ರಷ್ಟು ಬೆಳೆದಿದೆ. ವಿಶ್ವದ ಅತ್ಯಂತ ಬೆಲೆಬಾಳುವ ಕ್ರಿಪ್ಟೋಕರೆನ್ಸಿ ಸೆಪ್ಟೆಂಬರ್‌ನಲ್ಲಿ ಅದರ ಮೌಲ್ಯದಲ್ಲಿ ಕುಸಿತವನ್ನು ಕಂಡಿತು. ಇದು ಅಕ್ಟೋಬರ್‌ನ ಆರಂಭದ ದಿನಗಳವರೆಗೂ ಇತ್ತು. ಅಂದಿನಿಂದ ಬಿಟ್‌ಕಾಯಿನ್ ಹೂಡಿಕೆದಾರರಿಗೆ ಪ್ರಬಲ ಆದಾಯವನ್ನು ನೀಡುತ್ತಿದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಅದರ ಮಾರುಕಟ್ಟೆ ಮೌಲ್ಯ ಸುಮಾರು 52 ಲಕ್ಷ ರೂಪಾಯಿ. ಸೆಪ್ಟೆಂಬರ್ 11ರಂದು ಬಿಟ್‌ಕಾಯಿನ್ ವಹಿವಾಟು ನಡೆಸುತ್ತಿದ್ದದ್ದು 33 ಲಕ್ಷ ರೂಪಾಯಿಗಳಿಂದ. ಇದು ಗಮನಾರ್ಹ ಲಾಭವಾಗಿದೆ.

Ethereum – ಎಥೆರಮ್ ಕಳೆದ ಎರಡು ತಿಂಗಳಲ್ಲಿ ಸುಮಾರು ಶೇ 37ರಷ್ಟು ಬೆಳೆದಿದೆ. ಈ ಅವಧಿಯ ಆರಂಭದಲ್ಲಿ ಎಥೆರಮ್​ ಸುಮಾರು 2.43 ಲಕ್ಷ ರೂಪಾಯಿಗಳಲ್ಲಿ ವ್ಯಾಪಾರ ಮಾಡಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ 3.77 ಲಕ್ಷ ರೂಪಾಯಿಗಳಷ್ಟಿದೆ.

ಇವುಗಳು ಪ್ರಬಲವಾದ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿರುವ ಕ್ರಿಪ್ಟೋಕರೆನ್ಸಿಗಳಾಗಿವೆ ಮತ್ತು ಕಳೆದ ಎರಡು ತಿಂಗಳಲ್ಲಿ ತಮ್ಮ ಮೌಲ್ಯವನ್ನು ಗಮನಾರ್ಹವಾಗಿ ಬೆಳವಣಿಗೆ ಕಂಡಿವೆ. ಸಾಮಾನ್ಯರ ಪರಿಭಾಷೆಯಲ್ಲಿ, ಇವು ಕ್ರಿಪ್ಟೋಕರೆನ್ಸಿಯ ಜಗತ್ತಿನಲ್ಲಿ “ಸೇಫ್ ಬೆಟ್​ಗಳು”. ಇದನ್ನು ಹೂಡಿಕೆ ಸಲಹೆಯಾಗಿ ತೆಗೆದುಕೊಳ್ಳಬೇಡಿ ಮತ್ತು ಇವುಗಳಲ್ಲಿ ಯಾವುದಾದರೂ ಹೂಡಿಕೆ ಮಾಡುವ ಮೊದಲು ನಿಮ್ಮ ಸ್ವಂತ ಸಂಶೋಧನೆಯನ್ನು ಖಚಿತಪಡಿಸಿಕೊಳ್ಳಿ.

ಸಹಜವಾಗಿ, ಯಾವುದೇ ರೀತಿಯಲ್ಲಿ ಇವುಗಳು ಅತ್ಯಧಿಕ ಬೆಳವಣಿಗೆ ಕಂಡ ಕ್ರಿಪ್ಟೋಕರೆನ್ಸಿಗಳಲ್ಲ. ಮೇಲೆ ಹೇಳಿದಂತೆ, ಇಂತಹ ಅಸಹಜ ಬೆಲೆಯ ಜಿಗಿತಗಳು ಹೆಚ್ಚಾಗಿ ಹೊಸ ಕರೆನ್ಸಿಗಳಲ್ಲಿ ಕಂಡುಬರುತ್ತವೆ ಮತ್ತು ಅವುಗಳು ಹೆಚ್ಚು ಅಪಾಯ-ಮುಕ್ತ ಹೂಡಿಕೆಯಲ್ಲ. ನೀವು ಇನ್ನೂ ಆಸಕ್ತಿ ಹೊಂದಿದ್ದರೆ, ಕಳೆದ ಎರಡು ತಿಂಗಳಲ್ಲಿ ಭಾರೀ ಏರಿಕೆ ಕಂಡಿರುವುದೆಂದರೆ ಕಡೇನಾ, ಸುಧಾರಿತ ತಂತ್ರಜ್ಞಾನ ಕರೆನ್ಸಿ. ಪೆಗ್ನೆಟ್, ಅಕ್ರೋಮಾ, Rabbit Coin ಮತ್ತು ಇನ್ನಷ್ಟು. DotDown ಮತ್ತು TRXDown ಏಳು-ಅಂಕಿಯ ಶೇಕಡಾವಾರು ಮೌಲ್ಯಗಳಲ್ಲಿ ದಿಗ್ಭ್ರಮೆಗೊಳಿಸುವ ಏರಿಕೆ ಕಂಡಿವೆ. ನಿಮ್ಮ ಗಮನದಲ್ಲಿರಲಿ, TRXDownನಲ್ಲಿ ನಿಮ್ಮ ರೂ. 10,000 ಹೂಡಿಕೆ ಎರಡು ತಿಂಗಳಲ್ಲಿ ರೂ. 52,68,26,200 ಆಗುತ್ತಿತ್ತು.

ಟಾಪ್-ಪರ್ಫಾರ್ಮಿಂಗ್ ಕ್ರಿಪ್ಟೋ ಟೋಕನ್‌ಗಳು ಕ್ರಿಪ್ಟೋ ಟೋಕನ್‌ಗಳು ಕ್ರಿಪ್ಟೋ ಕಾಯಿನ್​ಗಳಿಗಿಂತ ಭಿನ್ನವಾಗಿರುತ್ತವೆ ಮತ್ತು ಅಸ್ತಿತ್ವದಲ್ಲಿರುವ ಬ್ಲಾಕ್‌ಚೈನ್ ನೆಟ್‌ವರ್ಕ್‌ಗಳನ್ನು ಆಧರಿಸಿರಬಹುದು. ಆದ್ದರಿಂದ ಕ್ರಿಪ್ಟೋ ಕಾಯಿನ್​ಗಿಂತ ಇವುಗಳನ್ನು ತಯಾರಿಸಲು ಸುಲಭವಾಗಿದೆ. ಇದು ಕೆಲಸ ಮಾಡಲು ತನ್ನದೇ ಆದ ಬ್ಲಾಕ್‌ಚೈನ್ ಅಗತ್ಯವಿದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಕ್ರಿಪ್ಟೋ ಟೋಕನ್‌ಗಳ ಪ್ರವಾಹವಿದೆ. ಟೋಕನ್‌ಗಳು ಎಲ್ಲ ಅಲ್ಪಾವಧಿಯ ಹೂಡಿಕೆದಾರರು ಹುಡುಕುತ್ತಿರುವ ಭಾರೀ ಪ್ರಮಾಣದ ಏರಿಳಿತ ಆಗಿದೆ. ಆದ್ದರಿಂದ ನೀವು ಕಷ್ಟಪಟ್ಟು ದುಡಿದ ಹಣವನ್ನು ಇವುಗಳಲ್ಲಿ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಕಳೆದ ಎರಡು ತಿಂಗಳಲ್ಲಿ ಅಸಾಧಾರಣವಾಗಿ ಕಾರ್ಯನಿರ್ವಹಿಸಿದ ಕೆಲವು ಕ್ರಿಪ್ಟೋ ಟೋಕನ್‌ಗಳು ಇಲ್ಲಿವೆ.

ಶಿಬಾ ಇನು – ಶಿಬಾ ಇನು ಕಳೆದ ಒಂದು ತಿಂಗಳಲ್ಲಿ ಕ್ರಿಪ್ಟೋಕರೆನ್ಸಿಯ ಜಗತ್ತನ್ನು ಗಮನದಲ್ಲಿಟ್ಟುಕೊಳ್ಳಲು ಏಕಾಂಗಿಯಾಗಿ ಜವಾಬ್ದಾರ ಆಗಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ನಿರಂತರ ಮೀಮ್‌ಗಳು ಮತ್ತು ಟೋಕನ್‌ನ ಅಭಿಮಾನಿಗಳ ಬಳಗವು ರಾಬಿನ್‌ಹುಡ್‌ನಲ್ಲಿ ಅದರ ಲಿಸ್ಟಿಂಗ್​ ಬೆಂಬಲಿಸುವುದರೊಂದಿಗೆ, ಶಿಬಾ ಇನು ಈ ತಿಂಗಳ ಆರಂಭದಲ್ಲಿ ಮತ್ತೆ ಮೌಲ್ಯದಲ್ಲಿ ಇಳಿಯುವ ಮೊದಲು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತು. ನಿವ್ವಳ ಫಲಿತಾಂಶವೆಂದರೆ ಕಳೆದ ಎರಡು ತಿಂಗಳುಗಳಲ್ಲಿ ಟೋಕನ್ ಶೇಕಡಾ 638ಕ್ಕಿಂತ ಹೆಚ್ಚು ಗಳಿಸಿದೆ. ಸುಮಾರು ರೂ. 0.0005 ರಿಂದ ಪ್ರಸ್ತುತ ಬೆಲೆ ರೂ. 0.004 ಕ್ಕೆ ಏರಿತು.

ಕ್ರೋಮಿಯಾ – ವಿಕೇಂದ್ರೀಕೃತ ಅಪ್ಲಿಕೇಷನ್‌ಗಳಿಗಾಗಿ ಕ್ರೋಮಿಯಾ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್‌ನ ಟೋಕನ್, ಕ್ರೋಮಿಯಾ ಕಳೆದ ಎರಡು ವಾರಗಳಲ್ಲಿ ಮುಖ್ಯವಾಗಿ ರಿವಾಲ್ವ್ ಗೇಮ್‌ಗಳೊಂದಿಗಿನ ಸಹಯೋಗದ ಘೋಷಣೆಯ ನಂತರ ಭಾರಿ ಏರಿಕೆಯನ್ನು ದಾಖಲಿಸಿದೆ. ಟೋಕನ್ ಹಿಂದಿನ ಮೌಲ್ಯ ಸುಮಾರು ರೂ. 26ರಿಂದ ಪ್ರಸ್ತುತ ರೂ. 92ರ ವಹಿವಾಟಿನ ಮೌಲ್ಯಕ್ಕೆ ಏರಿದೆ. ಇದು ಶೇಕಡಾ 200ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ.

ಕಾರ್ಟೆಸಿ – ಕಾರ್ಟೆಸಿ ಕಳೆದ ವಾರದಲ್ಲಿ ಹಾಟ್ ಟೋಕನ್ ಆಗಿತ್ತು. ಏಳು ದಿನಗಳಲ್ಲಿ ಮೌಲ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಬೆಳೆಯಿತು. ಎರಡು ತಿಂಗಳಲ್ಲಿ ಟೋಕನ್ ಶೇಕಡಾ 131ರ ಏರಿಕೆಯನ್ನು ಕಂಡಿದೆ. ಪ್ರಾರಂಭದಲ್ಲಿ ಸುಮಾರು 46 ರೂಪಾಯಿಗಳಿಂದ ಎರಡು ತಿಂಗಳ ಅಂತ್ಯದ ವೇಳೆಗೆ ಸುಮಾರು 119 ರೂಪಾಯಿ ಆಗಿದೆ.

Enjin Coin – Enjin – ಬ್ಲಾಕ್‌ಚೈನ್ ಆಧಾರಿತ ಗೇಮಿಂಗ್ ಉತ್ಪನ್ನಗಳ ಸಂಸ್ಥೆ. Enjin Coin ಎರಡು ತಿಂಗಳಲ್ಲಿ ಕ್ರಮೇಣವಾಗಿ ಬೆಳೆಯಿತು. ಈ ಅವಧಿಯಲ್ಲಿ ಗರಿಷ್ಠ ಶೇ 73ರಷ್ಟು ಬೆಳೆದಿದೆ. ಎರಡು ತಿಂಗಳ ಹಿಂದೆ ಸುಮಾರು 120 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಟೋಕನ್ ಈಗ ಒಂದು ಘಟಕಕ್ಕೆ 236 ರೂಪಾಯಿ ಇದೆ.

ಇದನ್ನೂ ಓದಿ: Bitcoin: ಹೀಗೆ 6 ಲಕ್ಷ ರೂಪಾಯಿ ಹೂಡಿಕೆ 9 ವರ್ಷದಲ್ಲಿ 216 ಕೋಟಿ ರೂಪಾಯಿ ಆಗಿದ್ದು ಎಲ್ಲಾದರೂ ಉಂಟೇ?