ಬೆಳಗಾವಿ: ಪಿಸ್ಟಲ್ ಹಿಡಿದು ಚಿನ್ನದಂಗಡಿಗೆ ನುಗ್ಗಿದ ಕಳ್ಳರು ಮಾಲೀಕ ಕಿರುಚಿದೊಡೆ ಕಾಲಿಗೆ ಬುದ್ಧಿ ಹೇಳಿದರು!
ಅಂದಹಾಗೆ, ಚಿನ್ನಾಭರಣಗಳ ಅಂಗಡಿ ಮಹೇಶ್ ಪೋತದಾರ್ ಎನ್ನುವವರಿಗೆ ಸೇರಿದ್ದ್ದು ಅವರ ಸಮಯ ಪ್ರಜ್ಞೆಯಿಂದ ದರೋಡೆ ನಡೆಯುವುದು ತಪ್ಪಿದೆ. ಕಳ್ಳರು ಅಂಗಡಿಯನ್ನು ನುಗ್ಗಿದಾಗ ಅವರು ಪ್ಯಾನಿಕ್ ಆಗದೆ ಹೊರಗಿನ ಜನರಿಗೆ ಗೊತ್ತಾಗಲು ಜೋರಾಗಿ ಕಿರುಚಾಡಲು ಶುರುಮಾಡುತ್ತಾರೆ. ಕಳ್ಳರು ವಿಚಲಿತರಾಗಲು ಅಷ್ಟು ಸಾಕಿತ್ತು. ನಂತರ ಪೋತದಾರ್ ಪೊಲೀಸರನ್ನು ಅಲ್ಲಿಗೆ ಕರೆಸಿ ವಿವರಗಳನ್ನು ನೀಡುತ್ತಾರೆ.
ಬೆಳಗಾವಿ, ಆಗಸ್ಟ್ 26: ಹೆಲ್ಮೆಟ್ ಧರಿಸಿ ಕೈಯಲ್ಲೊಂದು ಪಿಸ್ಟಲ್ ಹಿಡಿದುಕೊಂಡು (pistol wielding) ಹೋದರೆ ಸುಲಭವಾಗಿ ಚಿನ್ನದಂಗಡಿಯನ್ನು ದೋಚಬಹುದು ಅಂತ ಭಾವಿಸಿದ್ದ ಇಬ್ಬರು ಕಳ್ಳರು ಅಂಗಡಿಯ ಮಾಲೀಕ ಕಿರುಚಿದೊಡನೆ ಬಿದ್ನೋ ಸತ್ನೋ ಅನ್ನುತ್ತಾ ಓಡಿಹೋದ ಸ್ವಾರಸ್ಯಕರ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಪ್ರಾಯಶಃ ಕಳ್ಳರು ಕಸುಬಿಗೆ ಹೊಸಬರಿರಬಹುದು ಅನಿಸುತ್ತದೆ. ಪಲಾಯನಗೈಯುವ ಕಳ್ಳರು ತಮ್ಮ ಬೈಕ್ ಹತ್ತಿ ಅಂಗಡಿ ಮುಂದಿನಿಂದಲೇ ಪರಾರಿಯಾಗುತ್ತಾರೆ. ಸಿಸಿಟಿವಿ ಕೆಮೆರಾಗಳಲ್ಲಿ ಅವರು ದ್ವಿಚಕ್ರ ವಾಹನದ ಮೇಲೆ ಪರಾರಿಯಾಗುವುದು ಸೇರಿದಂತೆ ಎಲ್ಲ ದೃಶ್ಯಗಳು ಸೆರೆಯಾಗಿರುವುದರಿಂದ ಅವರನ್ನು ಸೆರೆ ಹಿಡಿಯುವುದು ಪೊಲೀಸರಿಗೆ ಕಷ್ಟವೇನೂ ಆಗಲಾರದು.
ಇದನ್ನೂ ಓದಿ: ಎಂತೆಂಥಾ ಜನರಪ್ಪ! ಚರಂಡಿಗೆ ಮುಚ್ಚಿದ್ದ ಕಬ್ಬಿಣದ ಸರಳನ್ನೂ ಕದ್ದ ಕಳ್ಳರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

