AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂತೆಂಥಾ ಜನರಪ್ಪ! ಚರಂಡಿಗೆ ಮುಚ್ಚಿದ್ದ ಕಬ್ಬಿಣದ ಸರಳನ್ನೂ ಕದ್ದ ಕಳ್ಳರು

ಎಂತೆಂಥಾ ಜನರಪ್ಪ! ಚರಂಡಿಗೆ ಮುಚ್ಚಿದ್ದ ಕಬ್ಬಿಣದ ಸರಳನ್ನೂ ಕದ್ದ ಕಳ್ಳರು

ಸುಷ್ಮಾ ಚಕ್ರೆ
|

Updated on: Aug 02, 2025 | 10:13 PM

Share

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಚರಂಡಿಯ ಮುಚ್ಚಳವನ್ನು ಕದಿಯುತ್ತಿದ್ದ ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಬ್ಬರು ವ್ಯಕ್ತಿಗಳು ಚರಂಡಿಯ ಮುಚ್ಚಳವನ್ನು ಎತ್ತುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಇ-ರಿಕ್ಷಾದಲ್ಲಿ ಬಂದ. ಇಬ್ಬರೂ ಕಳ್ಳರು ಕಬ್ಬಿಣದ ಮುಚ್ಚಳವನ್ನು ರಿಕ್ಷಾಕ್ಕೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಆಗಸ್ಟ್ 1 ಮತ್ತು ಆಗಸ್ಟ್ 2ರ ಮಧ್ಯರಾತ್ರಿ ಭಾರತ್ ಗ್ಯಾಸ್ ಏಜೆನ್ಸಿ ಬಳಿಯ ಲಾಲ್ ಕುಯಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಾಜಿಯಾಬಾದ್, ಆಗಸ್ಟ್ 2: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಿಂದ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಕಳ್ಳರು ಚರಂಡಿಗೆ ಮುಚ್ಚಿದ್ದ ಕಬ್ಬಿಣದ ಮುಚ್ಚಳವನ್ನು ಕದ್ದಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ (CCTV) ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಬ್ಬರು ವ್ಯಕ್ತಿಗಳು ಚರಂಡಿಯ ಮುಚ್ಚಳವನ್ನು ಎತ್ತುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಇ-ರಿಕ್ಷಾದಲ್ಲಿ ಬಂದ. ಇಬ್ಬರೂ ಕಳ್ಳರು ಕಬ್ಬಿಣದ ಮುಚ್ಚಳವನ್ನು ರಿಕ್ಷಾಕ್ಕೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಆಗಸ್ಟ್ 1 ಮತ್ತು ಆಗಸ್ಟ್ 2ರ ಮಧ್ಯರಾತ್ರಿ ಭಾರತ್ ಗ್ಯಾಸ್ ಏಜೆನ್ಸಿ ಬಳಿಯ ಲಾಲ್ ಕುಯಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ