ಐಸಿಎಲ್ ಫಿನ್ ಕಾರ್ಪ್ ಕಂಪನಿಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ
ಐಸಿಎಲ್ ಫಿನ್ ಕಾರ್ಪ್ ಕಂಪನಿಯು ತನ್ನ ಗ್ರಾಹಕರಿಗೆ ಡಬಲ್ ರಿಟರ್ನ್ ಆಫರ್ ಅನ್ನು ಮತ್ತೊಮ್ಮೆ ಪರಿಚಯಿಸಿದೆ. 13, 24, 36, 60 ಮತ್ತು 70 ತಿಂಗಳ ಅವಧಿಗಳ ಹೂಡಿಕೆ ಯೋಜನೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಕಳೆದ ಐದು ವರ್ಷಗಳಿಂದ ಈ ಯೋಜನೆಯು ಗ್ರಾಹಕರ ವಿಶ್ವಾಸ ಗಳಿಸಿದೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಐಸಿಎಲ್ ಫಿನ್ ಕಾರ್ಪ್ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದೆ. ಕಳೆದ ಐದು ವರ್ಷದಿಂದಲೂ ರಿಟರ್ನ್ ಡಬಲ್ ಯೋಜನೆ ಮೂಲಕ ಹಾಕಿದ ಬಂಡವಾಳದ ಜೊತೆ ಡಬಲ್ ಲಾಭ ಹಿಂತಿರುಗಿಸುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಈಗ ಮತ್ತೊಮ್ಮೆ ರಿಟರ್ನ್ ಡಬಲ್ ಆಫರ್ ಉದ್ಘಾಟಿಸಿದ್ದು, ಶೇಕಡಾವಾರು ಬಡ್ಡಿ ನೀಡುವ ಮೂಲಕ ಜನರಿಗೆ ಅನುಕೂಲಕರ ಹೂಡಿಕೆ ಆರಂಭಿಸಿದೆ.
70 ತಿಂಗಳ ಹೂಡಿಕೆ, 60 ತಿಂಗಳ ಹೂಡಿಕೆ, 36 ತಿಂಗಳ ಹೂಡಿಕೆ, 24 ತಿಂಗಳ ಹೂಡಿಕೆ, 13 ತಿಂಗಳ ಹೂಡಿಕೆಯ ಯೋಜನೆ ಚಾಲ್ತಿಗೆ ತಂದಿದ್ದು, ಅದಕ್ಕೆ ತಕ್ಕಂತೆ ಬಡ್ಡಿ ಸೇರಿಸಿ ರಿಟರ್ನ್ ಕೊಡಲಿದೆ. ಈ ಕುರಿತು ಐಸಿಎಲ್ ಫಿನ್ ಕಾರ್ಪ್ ಸಂಸ್ಥೆಯ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು. ಐಸಿಎಲ್ನ ಸಂಸ್ಥಾಪಕ ಅನಿಲ್ ಕುಮಾರ್ ಸೇರಿ ಇಡೀ ತಂಡ ಭಾಗಿಯಾಗಿತ್ತು.
Published on: Aug 02, 2025 09:23 PM

