ಎಚ್ಚರಿಕೆಯಿಂದ ಮಾತಾಡಿ; ಅಪ್ಪನ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ರೋಹನ್ ಜೇಟ್ಲಿ ತಿರುಗೇಟು
ಅರುಣ್ ಜೇಟ್ಲಿಯವರ ನಿಧನದ ಸುಮಾರು ಒಂದು ವರ್ಷದ ನಂತರ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿದ್ದಕ್ಕಾಗಿ ರಾಹುಲ್ ಗಾಂಧಿ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ ನಂತರ ರೋಹನ್ ಜೇಸ್ಲಿ ಈ ಹೇಳಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವ 13 ತಿಂಗಳ ಮೊದಲು ಅಂದರೆ 2019ರಲ್ಲಿ ನಮ್ಮ ತಂದೆ ನಿಧನರಾದರು. ಅವರು ಹೇಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಾಧ್ಯ? ಎಂದು ರೋಹನ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ, ಆಗಸ್ಟ್ 2: ಅರುಣ್ ಜೇಟ್ಲಿ (Arun Jaitely) ಅವರ ನಿಧನದ ಒಂದು ವರ್ಷದ ನಂತರ ಪರಿಚಯಿಸಲಾದ 2020ರಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ಕುರಿತು ಬಿಜೆಪಿ ನಾಯಕ ಅರುಣ್ ಜೇಟ್ಲಿ ತಮಗೆ ಬೆದರಿಕೆ ಹಾಕಿದ್ದರು ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದರು. ಆದರೆ, 2019ರಲ್ಲೇ ಅರುಣ್ ಜೇಟ್ಲಿ ಸಾವನ್ನಪ್ಪಿದ್ದರು. ಹೀಗಾಗಿ, ಅರುಣ್ ಜೇಟ್ಲಿ ಕುರಿತು ಈ ರೀತಿ ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿಗೆ ಅರುಣ್ ಜೇಟ್ಲಿಯ ಮಗ ರೋಹನ್ ಜೇಟ್ಲಿ (Rohan Jaitely) ತಿರುಗೇಟು ನೀಡಿದ್ದಾರೆ. ಈಗ ರದ್ದುಗೊಂಡಿರುವ ಕೃಷಿ ಕಾನೂನುಗಳನ್ನು ವಿರೋಧಿಸುವುದನ್ನು ನಿಲ್ಲಿಸುವಂತೆ ಹಿರಿಯ ರಾಜಕಾರಣಿ ರಾಹುಲ್ ಗಾಂಧಿ ಅವರನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿಯನ್ನು ರೋಹನ್ ಜೇಟ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವ 13 ತಿಂಗಳ ಮೊದಲು ಅಂದರೆ 2019ರಲ್ಲಿ ನಮ್ಮ ತಂದೆ ನಿಧನರಾದರು. ಅವರು ಹೇಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಾಧ್ಯ? ಅದಕ್ಕಿಂತ ಮುಖ್ಯವಾಗಿ ತಮ್ಮ ಎದುರಾಳಿಗಳನ್ನು ಅಥವಾ ಬೇರೆ ಪಕ್ಷದವರನ್ನು ಬೆದರಿಸುವುದು ನನ್ನ ತಂದೆಯ ಸ್ವಭಾವದಲ್ಲಿಯೇ ಇರಲಿಲ್ಲ. ಅವರು ಕಟ್ಟಾ ಪ್ರಜಾಪ್ರಭುತ್ವವಾದಿ ಮತ್ತು ಯಾವಾಗಲೂ ಒಮ್ಮತವನ್ನು ನಿರ್ಮಿಸುವಲ್ಲಿ ನಂಬಿಕೆ ಇಟ್ಟಿದ್ದರು. ಅಂತಹ ವ್ಯಕ್ತಿ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ದಾರೆ ಎಂದರೆ ನಂಬುವುದು ಹೇಗೆ? ಅವರು ಹೇಗಿದ್ದರು ಎಂಬುದು ಇಂದಿಗೂ ಅವರ ಪರಂಪರೆಯಾಗಿ ಉಳಿದಿದೆ. ಅಂತಹ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಿ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ. ಮೃತಪಟ್ಟವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮದು” ಎಂದು ರೋಹನ್ ಜೇಟ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

