Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit Card: ಮೊದಲ ಸಲ ಕ್ರೆಡಿಟ್​ ಕಾರ್ಡ್​ ಬಳಸುತ್ತಿರುವವರು ಈ 6 ಶುಲ್ಕಗಳ ಬಗ್ಗೆ ತಿಳಿದಿರಬೇಕು

ಕ್ರೆಡಿಟ್​ ಕಾರ್ಡ್ ಬಳಸುವುದಕ್ಕೆ ಆರಂಭಿಸುವ ಮೊದಲಿಗೆ ಗೊತ್ತಿರಬೇಕಾದ ಆರು ಶುಲ್ಕಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ. ಆದ್ದರಿಂದ ವಿವೇಚನೆಯಿಂದ ಈ ಕ್ರೆಡಿಟ್ ಕಾರ್ಡ್ ಬಳಸಬೇಕು.

Credit Card: ಮೊದಲ ಸಲ ಕ್ರೆಡಿಟ್​ ಕಾರ್ಡ್​ ಬಳಸುತ್ತಿರುವವರು ಈ 6 ಶುಲ್ಕಗಳ ಬಗ್ಗೆ ತಿಳಿದಿರಬೇಕು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 20, 2021 | 3:05 PM

ಕ್ರೆಡಿಟ್ ಕಾರ್ಡ್ ತುಂಬ ಉಪಯುಕ್ತವಾದದ್ದು. ಆದರೆ ಅದನ್ನು ವಿವೇಚನೆಯಿಂದ ಬಳಸಿದರೆ ಮಾತ್ರ. ಒಂದು ವೇಳೆ ಅಜಾಗರೂಕತೆಯಿಂದ ಉಪಯೋಗಿಸಿದರೆ ಹಲವು ನ್ಯೂನತೆಗಳನ್ನು ಹೊಂದಿವೆ. ಕ್ರೆಡಿಟ್ ಕಾರ್ಡ್‌ಗಳು ಬಹು ಬಗೆಯಲ್ಲಿ ಶುಲ್ಕಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಚೆನ್ನಾಗಿ ತಿಳಿದಿರುತ್ತವೆ ಮತ್ತು ಕೆಲವು ವ್ಯಾಪಕವಾಗಿ ತಿಳಿದಿಲ್ಲ. ಆದರೆ ಆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವ ಮೊದಲು ಶುಲ್ಕಗಳನ್ನು ತಿಳಿದಿರಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು. ಯಾವುದೇ ದಂಡಗಳನ್ನು ತಪ್ಪಿಸಲು ಕಡಿಮೆ ತಿಳಿದಿರುವ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಜ್ಞರು ಸೂಚಿಸುತ್ತಾರೆ. ಗ್ರಾಹಕರು ಸಾಮಾನ್ಯವಾಗಿ ಆರು ವಿಭಿನ್ನ ಶುಲ್ಕಗಳನ್ನು ಪಾವತಿಸುತ್ತಾರೆ. ಆ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

1) ವಾರ್ಷಿಕ ಶುಲ್ಕ ಕ್ರೆಡಿಟ್ ಕಾರ್ಡ್‌ಗಳು ಸೇರ್ಪಡೆ (ಜಾಯಿನಿಂಗ್) ಶುಲ್ಕ ಮತ್ತು ವಾರ್ಷಿಕ ಶುಲ್ಕದೊಂದಿಗೆ ಬರುತ್ತವೆ. ಕ್ರೆಡಿಟ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗಿದ್ದರೂ ಸಹ ಖಚಿತವಾಗಿ ವಾರ್ಷಿಕ ಇರುತ್ತದೆ. ಹೊಸದನ್ನು ಆಯ್ಕೆ ಮಾಡುವ ಮೊದಲು ದಯವಿಟ್ಟು ಅದನ್ನು ಪರಿಶೀಲಿಸಿ.

2) ವಿಳಂಬ ಪಾವತಿ ಶುಲ್ಕ ಒಬ್ಬ ವ್ಯಕ್ತಿಯು ಸಕಾಲದಲ್ಲಿ ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸದಿದ್ದಲ್ಲಿ ಬ್ಯಾಂಕ್​ಗಳು ಹೆಚ್ಚುವರಿ ವಿಳಂಬ ಪಾವತಿ ಶುಲ್ಕಗಳನ್ನು ವಿಧಿಸುತ್ತವೆ. ಈ ಶುಲ್ಕಗಳು ನಿಗದಿತ ದಿನಾಂಕದ ನಂತರ ಅನ್ವಯಿಸುತ್ತವೆ.

3) ಬಡ್ಡಿ ಶುಲ್ಕ ಸಾಮಾನ್ಯವಾಗಿ ಬ್ಯಾಂಕ್‌ಗಳು ಬಾಕಿ ಮೊತ್ತದ ಮೇಲೆ ಸುಮಾರು ಶೇ 35ರಿಂದ 40ರ ವಾರ್ಷಿಕ ದರದಲ್ಲಿ ಶುಲ್ಕವನ್ನು ವಿಧಿಸುತ್ತವೆ. ಇದು ಸಾಕಷ್ಟು ಹೆಚ್ಚಿನ ಪ್ರಮಾಣದ್ದಾಗಿದೆ. ಬಡ್ಡಿ ರಹಿತ ಅವಧಿಯ ನಂತರ ಬ್ಯಾಂಕ್​ಗಳು ಸಾಮಾನ್ಯವಾಗಿ ಬಡ್ಡಿಯನ್ನು ವಿಧಿಸುತ್ತವೆ. ಆದ್ದರಿಂದ ಯಾವಾಗಲೂ ಕೊನೆಯ ಪಾವತಿ ದಿನಾಂಕವನ್ನು ನೆನಪಿಟ್ಟುಕೊಂಡು, ಆ ದಿನಾಂಕದ ಮೊದಲು ಪಾವತಿಸಬೇಕು.

4) ನಗದು ನಿರ್ವಹಣೆ ಶುಲ್ಕ ಕ್ರೆಡಿಟ್ ಕಾರ್ಡ್ ಹೊಂದಿರುವವರು ಎಟಿಎಂಗಳಿಂದ ಹಣವನ್ನು ಹಿಂಪಡೆಯಬಹುದು. ಅಂತಹ ವಹಿವಾಟುಗಳು ಹೆಚ್ಚುವರಿ ಶುಲ್ಕಗಳೊಂದಿಗೆ ಬರುತ್ತವೆ. ಹಿಂಪಡೆಯಲಾದ ಮೊತ್ತಕ್ಕೆ ಸುಮಾರು ಶೇ 2.5ರಿಂದ ಶೇ 3ರಷ್ಟು ವಿಧಿಸಲಾಗುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ಹಿಂಪಡೆಯದಿರಲು ಪ್ರಯತ್ನಿಸಬೇಕು.

5) ಜಿಎಸ್‌ಟಿ ಸರ್ಕಾರದ ನಿಯಮದ ಪ್ರಕಾರ, ಎಲ್ಲ ಕ್ರೆಡಿಟ್ ಕಾರ್ಡ್ ವಹಿವಾಟುಗಳು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ. ಸದ್ಯಕ್ಕೆ ಈ ಶುಲ್ಕವು ಬಿಲ್ ಮಾಡಿದ ಮೌಲ್ಯದ ಮೇಲೆ ಶೇ 18 ಆಗಿದೆ.

6) ಓವರ್‌ಡ್ರಾಫ್ಟ್ ಶುಲ್ಕ ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಮಾಸಿಕ ಕ್ರೆಡಿಟ್ ಮಿತಿಯನ್ನು ಕಾರ್ಡ್‌ನಲ್ಲಿ ಅನ್ವಯಿಸುವ ಮಿತಿಯನ್ನು ಮೀರಿದಾಗ ಓವರ್‌ಡ್ರಾಫ್ಟ್ ಶುಲ್ಕಗಳನ್ನು ಅನ್ವಯಿಸಲಾಗುತ್ತದೆ.

ತಜ್ಞರ ಅಭಿಪ್ರಾಯ ಕ್ರೆಡಿಟ್ ಕಾರ್ಡ್‌ಗಳು ಸಾಮಾನ್ಯವಾಗಿ ವಿವಿಧ ಶುಲ್ಕಗಳೊಂದಿಗೆ ಬರುತ್ತವೆ, ಅವುಗಳು ಸ್ವಲ್ಪ ಹೆಚ್ಚಿರುತ್ತವೆ. ಅದನ್ನು ವಿವೇಚನೆಯಿಂದ ಬಳಸಿದರೆ ತುಂಬಾ ಉಪಯುಕ್ತವಾಗಿರುತ್ತದೆ. ಆದರೆ ಕ್ರೆಡಿಟ್ ಕಾರ್ಡ್‌ಗಳ ವಿವೇಚನಾರಹಿತ ಬಳಕೆಯು ಸಾಲದ ಬಲೆಗೆ ಬೀಳಿಸಬಹುದು.

“ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವ ಮೊದಲು ಎಲ್ಲ ವಿವರವಾದ ಶುಲ್ಕಗಳ ಮೂಲಕ ಹೋಗಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಬಹುದು. ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವ ಮೊದಲು ಯಾವಾಗಲೂ ಎಲ್ಲ ಶುಲ್ಕಗಳನ್ನು ಪರಿಶೀಲಿಸಿ,” ಎಂದು ವಯಕ್ತಿಕ ಹಣಕಾಸು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ