Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

TV9 Digital Desk

| Edited By: Srinivas Mata

Updated on: Sep 15, 2021 | 11:17 PM

ಕ್ರೆಡಿಟ್​ ಕಾರ್ಡ್​ನಲ್ಲಿ ಹೆಚ್ಚಿನ ಕ್ರೆಡಿಟ್ ಮಿತಿಯಿದ್ದರೆ ಆಗುವಾ ಫಾಯಿದೆಗಳೇನು? ಈ ಬಗ್ಗೆ ವಿವರ ಲೇಖನದಲ್ಲಿದೆ.

Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ

ಹೊಸದಾಗಿ ಕ್ರೆಡಿಟ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಸುವವರಿಗೆ ಕಂಪೆನಿಗಳು ಕಡಿಮೆ ಕ್ರೆಡಿಟ್ ಮಿತಿ ನೀಡುತ್ತವೆ. ಕಾರ್ಡ್​ದಾರರು ಆ ನಂತರ ಸ್ಥಿರವಾದ ಖರ್ಚು ಮತ್ತು ಮರುಪಾವತಿ ಇತಿಹಾಸ ಸೃಷ್ಟಿಸುತ್ತಾ ಹೋದಂತೆ ಹೆಚ್ಚಿನ ಕ್ರೆಡಿಟ್ ಮಿತಿಯನ್ನು ನೀಡಲಾಗುತ್ತದೆ. ಕೆಲವರಿಗೆ ತಾವು ಸಾಲದ ಬಲೆಗೆ ಸಿಲುಕಬಹುದು ಎಂಬ ಭಯ ಇರುತ್ತದೆ. ಆ ಕಾರಣಕ್ಕೆ ಕಾರ್ಡ್ ಬಳಕೆದಾರರು ಹೆಚ್ಚಿನ ಕ್ರೆಡಿಟ್ ಮಿತಿ ಪಡೆಯುವುದನ್ನು ತಡೆಯುತ್ತದೆ. ಅಂದ ಹಾಗೆ ಜನರು ಸಾಲದ ಬಲೆಗೆ ಬೀಳಲು ಮುಖ್ಯ ಕಾರಣ ಏನೆಂದರೆ, ಸಾಲದ ಮಿತಿ ಹೆಚ್ಚಿರುತ್ತದೆ ಅಂತಲ್ಲ. ಆದರೆ ಕಾರ್ಡ್​ದಾರರು ತಮ್ಮ ಮರುಪಾವತಿ ಸಾಮರ್ಥ್ಯವನ್ನು ಗುರುತಿಸಿ, ಖರ್ಚು ಮಾಡುವಲ್ಲಿ ವಿಫಲರಾಗಿರುತ್ತಾರೆ. ಅಂದಹಾಗೆ ಕ್ರೆಡಿಟ್ ಕಾರ್ಡ್ ಹೆಚ್ಚಿನ ಮಿತಿಯು ಹೇಗೆ ಪ್ರಯೋಜನಕಾರಿ ಎಂಬುದನ್ನು ನೋಡೋಣ:

ಕ್ರೆಡಿಟ್ ಸ್ಕೋರ್‌ನಲ್ಲಿ ಸುಧಾರಣೆ ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಿ, ಖರ್ಚಿನ ಪ್ರಮಾಣವನ್ನು ಹಾಗೇ ಉಳಿಸಿಕೊಂಡಾಗ ಕಾರ್ಡ್​ದಾರರಿಗೆ ನಿಗದಿಪಡಿಸಿದ ಮಿತಿಗಿಂತ ಕಡಿಮೆ ಕ್ರೆಡಿಟ್ ಮಿತಿಯನ್ನು ಬಳಸುತ್ತಾರೆ. ಇದರಿಂದ ಕಾರ್ಡ್​ದಾರರ ಸಾಲಗಳು ಕಡಿಮೆ ಆಗುತ್ತವೆ, ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ. ತಮ್ಮ ಕ್ರೆಡಿಟ್ ಮಿತಿಗಿಂತ ಕಡಿಮೆ ಖರ್ಚು ಮಾಡುವ ಕಾರ್ಡ್​ದಾರರನ್ನು ಆರ್ಥಿಕವಾಗಿ ಸುರಕ್ಷಿತ ಮತ್ತು ಜವಾಬ್ದಾರಿಯುತ ಎಂದು ಹಣಕಾಸು ಸಂಸ್ಥೆಗಳು ಪರಿಗಣಿಸಲಾಗುತ್ತದೆ. ಈ ಅಂಶವು ಹಣಕಾಸು ಸಂಸ್ಥೆಗಳು ಸಮಯಕ್ಕೆ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಪಡೆಯುವುದನ್ನು ಖಾತ್ರಿಪಡಿಸುತ್ತದೆ.

ಅನೇಕ ಕಾರ್ಡ್‌ಗಳನ್ನು ಬಳಸುವ ಹೊರೆ ಕಡಿಮೆ ಕಡಿಮೆ ಕ್ರೆಡಿಟ್ ಮಿತಿ ಹೊಂದಿರುವ ಹಲವಾರು ಕಾರ್ಡ್‌ ಇರುವುದಕ್ಕಿಂತ ಹೆಚ್ಚಿನ ಕ್ರೆಡಿಟ್ ಮಿತಿಯೊಂದಿಗೆ ಒಂದೇ ಕ್ರೆಡಿಟ್ ಕಾರ್ಡ್ ಇರುವುದು ಉತ್ತಮ. ಒಂದೇ ಕಾರ್ಡ್ ಇರುವುದರಿಂದ ಅದರ ಚಟುವಟಿಕೆಗಳ ಮೇಲೆ ನಿಗಾ ಇಡುವುದನ್ನು ಸರಳಗೊಳಿಸುತ್ತದೆ. ಇದರಿಂದ ಪರಿಣಾಮಕಾರಿಯಾಗಿ ಬಜೆಟ್ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಹೆಚ್ಚುವರಿಯಾಗಿ ಕಾರ್ಡ್​ದಾರರು ಹಲವಾರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ಹೆಚ್ಚುವರಿ ಶುಲ್ಕ ತಪ್ಪಿಸಬಹುದು.

ಹೆಚ್ಚಿನ ಕ್ರೆಡಿಟ್ ಮಿತಿಯೊಂದಿಗೆ ಒಂದೇ ಕಾರ್ಡ್ ಇಟ್ಟುಕೊಂಡಿರುವುದು ಅನುಕೂಲಕರ ಕ್ರೆಡಿಟ್ ಸ್ಕೋರ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಬಹು ಕ್ರೆಡಿಟ್ ಕಾರ್ಡ್ ಖಾತೆಗಳು ಸರಿಯಾಗಿ ನಿರ್ವಹಿಸದಿದ್ದರೆ ಕ್ರೆಡಿಟ್ ಇತಿಹಾಸದ ಮೇಲೆ ಅಗಾಧ ಪರಿಣಾಮ ಬೀರಬಹುದು.

ಸಾಲ ಪಡೆಯುವುದು ಸುಲಭ ಹೆಚ್ಚಿನ ಪ್ರಮಾಣದ ಕ್ರೆಡಿಟ್​ ಮಿತಿಯನ್ನು ಹೊಂದಿರುವವರನ್ನು ಬ್ಯಾಂಕ್​ಗಳು ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂದು ಪರಿಗಣಿಸುತ್ತವೆ. ಇದರಿಂದ ಅವರಿಗೆ ಸಾಲ ಪಡೆಯುವುದು ಸುಲಭವಾಗುತ್ತದೆ. ಅವರ ಆ್ಯಡೆಡ್ ಕ್ರೆಡಿಟ್ ಮಿತಿಯು ಬ್ಯಾಂಕ್​ಗಳಿಗೆ ಹಣವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.

ಜತೆಗೆ, ಹೆಚ್ಚಿನ ಕ್ರೆಡಿಟ್ ಮಿತಿಯು ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗೆ ಕಾರಣ ಆಗಬಹುದು (ಮೇಲೆ ಸೂಚಿಸಿದಂತೆ). ಹೆಚ್ಚಿನ ಕ್ರೆಡಿಟ್ ಸ್ಕೋರ್ ವ್ಯಕ್ತಿಗಳಿಗೆ ಸರಳವಾಗಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಹೀಗಾಗಿ, ಸಾಲಕ್ಕಾಗಿ ಚೌಕಾಶಿ ನಡೆಸುತ್ತಿರುವಾಗ ಕ್ರೆಡಿಟ್ ಕಾರ್ಡ್ ಹೊಂದಿರುವವರು ವಿಶಾಲ ಕ್ರೆಡಿಟ್ ಮಿತಿಯನ್ನು ಅನುಕೂಲಕರವಾದ ದರವನ್ನು ಪಡೆಯಲು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು.

ಗ್ರಾಹಕರ ರಕ್ಷಣೆ ಹೆಚ್ಚಿನ ಕ್ರೆಡಿಟ್ ಮಿತಿಯನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ಇರುವವರು ಕಾರ್ಡ್‌ಗಳನ್ನು ಗಣನೀಯ ಖರೀದಿಗಳನ್ನು ಮಾಡಲು, ರಿವಾರ್ಡ್ಸ್ ಪಡೆಯಲು ಬಳಸಬಹುದು. ಕ್ರೆಡಿಟ್ ಕಾರ್ಡ್‌ಗಳು ಗ್ರಾಹಕರ ರಕ್ಷಣೆಯ ವೈಶಿಷ್ಟ್ಯಗಳಾದ ಬೆಲೆ ರಕ್ಷಣೆ, ವಿಸ್ತೃತ ಖಾತರಿ ಮತ್ತು ಕಳುವಾದ ಅಥವಾ ಕದ್ದ ಉತ್ಪನ್ನಗಳಿಗೆ ಕವರೇಜ್ ನೀಡುತ್ತವೆ ಎಂದು ಕೆಲವೇ ಕಾರ್ಡ್​ದಾರರಿಗೆ ತಿಳಿದಿದೆ. ಕಾರ್ಡ್​ದಾರರು ಗಣನೀಯ ವಹಿವಾಟುಗಳನ್ನು ಮಾಡಿದರೆ ಸಮಸ್ಯೆ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಕಾರ್ಡ್‌ಗಳನ್ನು ಬಳಸಿಕೊಳ್ಳಬಹುದು.

ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುತ್ತದೆ ಕ್ರೆಡಿಟ್ ಕಾರ್ಡ್‌ನಲ್ಲಿ ದೊಡ್ಡ ಕ್ರೆಡಿಟ್ ಮಿತಿಯು ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಗ್ರಾಹಕರಿಗೆ ಸಹಾಯ ಮಾಡಬಹುದು. ಹೆಚ್ಚಿನ ಪ್ರಮಾಣದ ಕ್ರೆಡಿಟ್ ಮಿತಿಯನ್ನು ಹೊಂದಿದ್ದರೆ, ಇನ್ನೊಬ್ಬ ವ್ಯಕ್ತಿಯಿಂದ ಹಣವನ್ನು ಎರವಲು ಪಡೆಯುವ ಅಗತ್ಯವಿಲ್ಲ ಅಥವಾ ಸಾಲವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಜತೆಗೆ, ಸಾಲದ ಅಗತ್ಯವಿದ್ದಲ್ಲಿ ಅವರ ಮಿತಿಯು ಬ್ಯಾಂಕಿನಿಂದ ಸಮಂಜಸವಾದ ಬಡ್ಡಿದರದಲ್ಲಿ ಪಡೆಯುವುದನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ: Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಯಾವಾಗ ಮತ್ತು ಯಾಕೆ ಇಎಂಐಗೆ ಕನ್ವರ್ಟ್ ಮಾಡಿಸಬೇಕು ಗೊತ್ತಾ?

(What Are The Benefits Of Increased Credit Card Limit Here Is The Details)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada