AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಯಾವಾಗ ಮತ್ತು ಯಾಕೆ ಇಎಂಐಗೆ ಕನ್ವರ್ಟ್ ಮಾಡಿಸಬೇಕು ಗೊತ್ತಾ?

ಕ್ರೆಡಿಟ್​ ಕಾರ್ಡ್ ಬಳಸುತ್ತಿದ್ದೀರಿ ಅಂತಾದರೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಕಡ್ಡಾಯವಾಗಿ ಮಾಡಬೇಕು. ಒಂದು ವೇಳೆ ಆಗದಿದ್ದಲ್ಲಿ ಬಾಕಿ ಮೊತ್ತವನ್ನು ಇಎಂಐ ಆಗಿ ಬದಲಾಯಿಸಿಕೊಳ್ಳುವ ಅವಕಾಶ ಇರುತ್ತದೆ. ಆ ಬಗ್ಗೆ ವಿವರಗಳು ಹೀಗಿವೆ.

Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಯಾವಾಗ ಮತ್ತು ಯಾಕೆ ಇಎಂಐಗೆ ಕನ್ವರ್ಟ್ ಮಾಡಿಸಬೇಕು ಗೊತ್ತಾ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 24, 2021 | 11:17 AM

Share

ಜನರ ಖರೀದಿ ಸಾಮರ್ಥ್ಯ ಮುಂಚಿಗಿಂತ ಈಗ ಬಹಳ ಅಂದರೆ ಬಹಳ ಹೆಚ್ಚಾಗಿದೆ. ದುಡಿಮೆ ಜಾಸ್ತಿ ಆಗಿದೆ, ಆದ್ದರಿಂದ ಇದೂ ಹೆಚ್ಚಾಗಿದೆ ಅಂತೀರಾ? ಉತ್ತರ ಅಷ್ಟೇನಾ? ಇಲ್ಲ. ಈಗ ಅತಿ ಮುಖ್ಯವಾಗಿ ತಕ್ಷಣವೇ ಖರೀದಿಸಿ, ನಂತರ ಪಾವತಿಸಿ ಎಂಬ ಟ್ರೆಂಡ್ ಹೆಚ್ಚಾಗಿದೆ. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡುವವರ ಪ್ರಮಾಣ ತುಂಬ ಜಾಸ್ತಿ ಆಗಿದೆ. ತಮ್ಮ ಅಳತೆಗೂ ಮೀರಿ ಖರ್ಚು ಮಾಡಿದ ಮೇಲೆ ಕ್ರೆಡಿಟ್ ಬಿಲ್ ಪಾವತಿ ಮಾಡದೆ ತಪ್ಪಿಸೋದು ಅಥವಾ ಕನಿಷ್ಠ ಮೊತ್ತವನ್ನು ಸಹ ಪಾವತಿಸದಿರುವುದು ಇವೆಲ್ಲ ಉಂಟು. ಯಾವಾಗ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದಿಲ್ಲವೋ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರಿಂದ ಕ್ರೆಡಿಟ್ ಸ್ಕೋರ್​​ಗೆ ಪೆಟ್ಟು ಬೀಳುವುದಷ್ಟೇ ಅಲ್ಲ, ಲೇಟ್ ಫೀ ಅಂತ ಕೂಡ ತಲೆ ಮೇಲೆ ಬೀಳುತ್ತದೆ.

ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಿಲ್​ನ ಪೂರ್ತಿ ಮೊತ್ತವನ್ನೂ ಕಟ್ಟುವುದಕ್ಕೆ ಸಾಧ್ಯವಾಗದಿದ್ದಲ್ಲಿ ಬಾಕಿ ಉಳಿಸಿಕೊಂಡ ಬಿಲ್ ಮೇಲೆ ಹಣಕಾಸು ಶುಲ್ಕ ಬೀಳುತ್ತದೆ. ಸಾಮಾನ್ಯವಾಗಿ ಇದು ವಾರ್ಷಿಕವಾಗಿ ಶೇ 30ರಿಂದ ಶೇ 49ರಷ್ಟಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ, ಆ ನಂತರದ ಹೊಸ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಬಡ್ಡಿರಹಿತ ಅವಧಿಯನ್ನೇ ತೆಗೆಯಲಾಗುತ್ತದೆ. 60 ದಿನಗಳ ಅವಧಿಯನ್ನು ಮೀರುತ್ತಿದ್ದಂತೆ ನಿಮ್ಮ ಬಡ್ಡಿ ದರವೂ ಹೆಚ್ಚುತ್ತದೆ. ಬರೀ ದಂಡ ಶುಲ್ಕವನ್ನೇನೋ ಹಾಕಿ ಸುಮ್ಮನಾಗುತ್ತಾರೆ ಎನ್ನುವಂತಿಲ್ಲ. ಆ ಬಡ್ಡಿ ದರವು ದಂಡದ ದರಕ್ಕೆ ಸಮವಾಗಿಯೇ ಹೆಚ್ಚಳವಾಗುತ್ತದೆ. ಇದು ಕ್ರೆಡಿಟ್ ಕಾರ್ಡ್ ಮೇಲೆ ವಿಧಿಸುವ ಅತಿ ಹೆಚ್ಚಿನ ಬಡ್ಡಿ ದರ. ಕ್ರೆಡಿಟ್ ಕಾರ್ಡ್ ಬಿಲ್​ ಅನ್ನು ಸಂಪೂರ್ಣವಾಗಿ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದು ಮೊದಲೇ ಗೊತ್ತಾಗಿಬಿಟ್ಟರೆ ಅಥವಾ ಆ ಪೈಕಿ ಸ್ವಲ್ಪ ಮೊತ್ತವನ್ನು ಕಟ್ಟುವುದಕ್ಕೆ ಆಗಲ್ಲ ಅಂತಾದರೆ ಇಎಂಐ (ಈಕ್ವೇಟೆಡ್ ಮಂತ್ಲಿ ಇನ್​ಸ್ಟಾಲ್​ಮೆಂಟ್ಸ್) ಆಗಿ ಬದಲಿಸಿಕೊಳ್ಳಬಹುದು.

ನೆನಪಿರಲಿ, ಇಂಥ ಇಎಂಐ ಮೇಲಿನ ಬಡ್ಡಿ ದರವು ಹಣಕಾಸು ಶುಲ್ಕಕ್ಕಿಂತ ಕಡಿಮೆ ಇರುತ್ತದೆ. ಈ ಮೂಲಕ ಬಡ್ಡಿ ಹೊರೆ ಕೂಡ ಇಳಿಯುತ್ತದೆ. ಹೀಗೆ ಇಎಂಐಗೆ ಬದಲಿಸಿಕೊಂಡ ಮೇಲೆ ಆ ಅವಧಿಯು ಮೂರು ತಿಂಗಳಿಂದ 5 ವರ್ಷದ ತನಕ ದೊರೆಯುತ್ತದೆ. ಯಾವ ರೀತಿಯಲ್ಲಿ ಪಾವತಿಗೆ ಅನುಕೂಲವೋ ಅದನ್ನು ಆರಿಸಿಕೊಳ್ಳಬಹುದು. ಕ್ರೆಡಿಟ್ ಸ್ಕೋರ್​ ಮೇಲೂ ಪರಿಣಾಮ ಬೀರದಂತೆ ಬಾಕಿ ಬಿಲ್ ಮೊತ್ತವನ್ನು ಕಂತು ಕಂತಿನಲ್ಲಿ ಕಟ್ಟಿಕೊಂಡು ಹೋಗಬಹುದು. ಕ್ರೆಡಿಟ್ ಕಾರ್ಡ್ ವಿತರಿಸುವವರ ಪೈಕಿ ಹಲವು ಕಂಪೆನಿಗಳು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಸ್​ಫರ್​ಗೂ ಅವಕಾಶ ಮಾಡಿಕೊಡುತ್ತವೆ. ಈ ಮೂಲಕವಾಗಿ ಬೇರೆ ಸಂಸ್ಥೆಯ ಕ್ರೆಡಿಟ್ ಕಾರ್ಡ್​ನಿಂದ ಮತ್ತೊಂದಕ್ಕೆ ಬಾಕಿ ಮೊತ್ತದ ವರ್ಗಾವಣೆ ಮಾಡಬಹುದು. ಆ ನಂತರ ಬಾಕಿ ಮೊತ್ತವನ್ನು ಇಎಂಐ ಆಗಿ ಬದಲಿಸಿಕೊಳ್ಳಬಹುದು.

ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?

ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?

(Why and when can you opt for credit card EMI? Here is an explainer)

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ