AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT new e- portal: ಐ.ಟಿ. ಹೊಸ ಇ- ಪೋರ್ಟಲ್ ತಾಂತ್ರಿಕ ಸಮಸ್ಯೆ ಬಗೆಹರಿಸಲು ಐಸಿಎಐನಿಂದ 7 ಸದಸ್ಯರ ತಂಡ ರಚನೆ

ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್​ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ 7 ಸದಸ್ಯರ ಟಾಸ್ಕ್ ಫೋರ್ಸ್ ರಚಿಸುವಂತೆ ಇನ್​ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಅನ್ನು ಹಣಕಾಸು ಸಚಿವಾಲಯವು ಕೇಳಿದೆ.

IT new e- portal: ಐ.ಟಿ. ಹೊಸ ಇ- ಪೋರ್ಟಲ್ ತಾಂತ್ರಿಕ ಸಮಸ್ಯೆ ಬಗೆಹರಿಸಲು ಐಸಿಎಐನಿಂದ 7 ಸದಸ್ಯರ ತಂಡ ರಚನೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 24, 2021 | 2:00 PM

Share

ಇನ್​ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ದಿಂದ ಏಳು ಸದಸ್ಯರ ಟಾಸ್ಕ್ ಫೋರ್ಸ್ ರಚಿಸಿ, ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್​ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗ್ಗೆ ಪರಿಶೀಲಿಸುವಂತೆ ಹಣಕಾಸು ಸಚಿವಾಲಯದಿಂದ ಕೇಳಲಾಗಿದೆ. ಹಣಕಾಸು ಸಚಿವಾಲಯದ ಅಧಿಕಾರಿಗಳು, ಇನ್ಫೋಸಿಸ್ ಪ್ರತಿನಿಧಿಗಳು ಮತ್ತು ಐಸಿಎಐ ಸಭೆ ನಡೆದಿತ್ತು. ಅದರಲ್ಲಿ ಹೊಸ ಇ-ಫೈಲಿಂಗ್ ಪೋರ್ಟಲ್​ನ ವಿವಿಧ ಸಮಸ್ಯೆಗಳನ್ನು ಪ್ರದರ್ಶಿಸಲಾಯಿತು. ಐಸಿಎಐ ಮುಖ್ಯಸ್ಥರಾದ ನಿಹಾರ್ ಎನ್. ಜಂಬುಸರಿಯಾ ಅವರು ಏಳು ಸದಸ್ಯರ ತಂಡವೊಂದನ್ನು ರಚಿಸಿದ್ದು, ಸಮಸ್ಯೆಯ ವಿಶ್ಲೇಷಣೆ ಮಾಡುತ್ತಿದ್ದಾರೆ ಎಂದಿದ್ದಾರೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದಾರೆ ಹೊಸ ಪೋರ್ಟಲ್​ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರಿಂದ ಲಿಖಿತ ಉತ್ತರವನ್ನು ಸಚಿವಾಲಯದಿಂದ ಜೂನ್ 16ರಂದು ಕೇಳಲಾಗಿತ್ತು. ಇನ್ನು ಜೂನ್ 19ರಂದು ಇನ್ಫೋಸಿಸ್​ನ ವಾರ್ಷಿಕ ಷೇರುದಾರರ ಸಭೆಯಲ್ಲಿಮ ಸಮಸ್ಯೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದು, ಕೆಲವಷ್ಟನ್ನು ಈಗಾಗಲೇ ಸರಿಪಡಿಸಿರುವುದಾಗಿ ಹೇಳಲಾಗಿತ್ತು.

ಹೊಸ ಪೋರ್ಟಲ್​ ಬಗ್ಗೆ ಸಚಿವಾಲಯದ ಅಭಿಪ್ರಾಯ ಸಂಗ್ರಹ ಆಹ್ವಾನದ ಮೇರೆಗೆ ಉತ್ತರ ನೀಡಿರುವ ಕೆಲವರು, ಈ ಹಿಂದಿನ ಇ- ಫೈಲ್ಡ್ ರಿಟರ್ನ್ಸ್ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ, ವೆಬ್​ಪೇಜ್ ಲೋಡ್ ಆಗುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಯೂಸರ್ ಇಂಟರ್​ಫೇಸ್ ದುರ್ಬಲ ಮತ್ತು ಹಳೇ ಡಿಮ್ಯಾಂಡ್ ನೋಡಲು, ಕುಂದು-ಕೊರತೆ ಹಾಗೂ ಇಂಟಿಮೇಷನ್ ಆದೇಶ ನೋಡುವುದಕ್ಕೆ ಸಾಮರ್ಥ್ಯವಿಲ್ಲ ಎಂಬಿತ್ಯಾದಿ ದೂರುಗಳನ್ನು ಹೇಳಿಕೊಂಡಿದ್ದಾರೆ. ಇನ್ನು ಟ್ಯಾಕ್ಸ್ ಕನ್ಸಲ್ಟೆಂಟ್​ಗಳೂ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ತಾಂತ್ರಿಕ ಮತ್ತು ಪರ್ಫಾರ್ಮೆನ್ಸ್ ಸಮಸ್ಯೆಗಳಾದ ಡೇಟಾ ಮಿಸ್ಸಿಂಗ್ ಮತ್ತು ಮಾಡ್ಯುಲ್ಸ್ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದಿದ್ದಾರೆ. ಇನ್ನೂ ಕೆಲವರು, ಹೊಸ ಪೋರ್ಟಲ್ ಪೂರ್ತಿಯಾಗಿ ಸ್ಥಿರವಾಗುವ ತನಕ ಹಳೆ ಪೋರ್ಟಲ್ ಸಕ್ರಿಯವಾಗಿರಬೇಕು ಮತ್ತು ಆ ಮಧ್ಯ ಸಮಯದಲ್ಲಿ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬೇಟಾ ಟೆಸ್ಟಿಂಗ್ ನಡೆಸಿ, ಸರಿಪಡಿಸಬಹುದು ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೂನ್ 8ರಂದು ಟ್ವೀಟ್ ಮಾಡಿ, ಪೋರ್ಟಲ್​ನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ಅವರನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ನಿಲೇಕಣಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಕಾರ್ಯ ನಿರ್ವಹಿಸುತ್ತಿದೆ ಮತ್ತು ವ್ಯವಸ್ಥೆಯು ಇನ್ನೊಂದು ವಾರದೊಳಗೆ ಸ್ಥಿರವಾಗುವುದು ಎಂದಿದ್ದರು. ಅಂದಹಾಗೆ ಈಚೆಗಿನ ಸಭೆಯಲ್ಲಿ ನಿರ್ಮಲಾ ಸೀತಾರಾಮನ್, ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, ಸಿಬಿಡಿಟಿ ಅಧ್ಯಕ್ಷ ಜಗನ್ನಾಥ್ ಮೋಹಪಾತ್ರ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್​ನಲ್ಲಿ ಮೊದಲನೇ ದಿನ ತಾಂತ್ರಿಕ ಸಮಸ್ಯೆ; ನಿಲೇಕಣಿಯನ್ನು ಟ್ಯಾಗ್ ಮಾಡಿದ ನಿರ್ಮಲಾ

(Finance ministry asked ICAI to form 7 members task force to resolve Income Tax new e filing portal issue. Here is the details)

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!