ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್ನಲ್ಲಿ ಮೊದಲನೇ ದಿನ ತಾಂತ್ರಿಕ ಸಮಸ್ಯೆ; ನಿಲೇಕಣಿಯನ್ನು ಟ್ಯಾಗ್ ಮಾಡಿದ ನಿರ್ಮಲಾ
ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್ನಿಂದ ಮೊದಲ ದಿನ ಸಮಸ್ಯೆಗಳ ದೂರು ಬಂದಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ವೆಬ್ಸೈಟ್ ಬಗ್ಗೆ ಅಪಾರ ಪ್ರಮಾಣದಲ್ಲಿ ದೂರುಗಳು ಬಂದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್, ಅದರ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಸೋಮವಾರವಷ್ಟೇ ಈ ಪೋರ್ಟಲ್ ಆರಂಭವಾಗಿತ್ತು. ಇನ್ಫೋಸಿಸ್ ಹಾಗೂ ನಿಲೇಕಣಿ ಗುಣಮಟ್ಟದ ಸೇವೆ ಒದಗಿಸುವುದರಲ್ಲಿ ತೆರಿಗೆ ಪಾವತಿದಾರರಿಗೆ ನಿರಾಸೆ ಉಂಟು ಮಾಡಲ್ಲ ಎಂದು ನಿರ್ಮಲಾ ಹೇಳಿದ್ದಾರೆ. “ಬಹು ನಿರೀಕ್ಷಿತ ಇ- ಫೈಲಿಂಗ್ ಪೋರ್ಟಲ್ ಕಳೆದ ರಾತ್ರಿ 20.45 ಗಂಟೆ (ರಾತ್ರಿ 8.45ಕ್ಕೆ) ಆರಂಭವಾಗಿತ್ತು. ಕೊರತೆ ಮತ್ತು ದೂರು- ದುಮ್ಮಾನಗಳನ್ನು ನೋಡಿದೆ. ಇನ್ಫೋಸಿಸ್ ಹಾಗೂ ನಂದನ್ ನಿಲೇಕಣಿ ಗುಣಮಟ್ಟದ ಸೇವೆ ಒದಗಿಸುತ್ತಾರೆ. ತೆರಿಗೆದಾರರಿಗೆ ನಿಯಮಾವಳಿಗಳು ಸುಲಭ ಮಾಡುವುದು ನಮ್ಮ ಆದ್ಯತೆ,” ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಮುಂದಿನ ತಲೆಮಾರಿನ ಆದಾಯ ತೆರಿಗೆ ಫೈಲಿಂಗ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಸಲುವಾಗಿ 2019ರಲ್ಲಿ ಇನ್ಫೋಸಿಸ್ಗೆ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಆ ಮೂಲಕ ರಿಟರ್ನ್ಸ್ ಪ್ರಕ್ರಿಯೆ ಸಮಯವನ್ನು 63 ದಿನದಿಂದ 1 ದಿನಕ್ಕೆ ಇಳಿಸಲು ಹಾಗೂ ರೀಫಂಡ್ಗಳನ್ನು ವೇಗಗೊಳಿಸಲು ತೀರ್ಮಾನಿಸಲಾಯಿತು. ಬೆಂಗಳೂರು ಮೂಲದ ಇನ್ಫೋಸಿಸ್ನಿಂದ ಸರ್ಕಾರದ ಜಿಎಸ್ಟಿ ನೆಟ್ವರ್ಕ್ (ಜಿಎಸ್ಟಿಎನ್) ಪೋರ್ಟಲ್ ಅಭಿವೃದ್ಧಿ ಮಾಡಲಾಯಿತು. ಈ ವೆಬ್ಸೈಟ್ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದರಿಂದ 2017ರಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಹೊಸ ವೆಬ್ಸೈಟ್ ಯುಆರ್ಎಲ್- https://www.incometaxindiaefiling.gov.in/home ಇದಕ್ಕೆ ಭಾರೀ ಪ್ರಮಾಣದಲ್ಲಿ ದಟ್ಟಣೆ ಕಂಡುಬಂತು. ಬಳಕೆದಾರರಿಗೆ ತಾಂತ್ರಿಕ ಸಮಸ್ಯೆಗಳು ಎದುರಾದವು. ಕೆಲವು ಫೀಚರ್ಗಳು ಹೆಚ್ಚಿನ ಸಮಸ್ಯೆ ತೆಗೆದುಕೊಳ್ಳುತ್ತಿವೆ ಎಂದು ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ದೂರಿದ್ದಾರೆ. ಇನ್ನೂ ಕೆಲವರು ಹೊಸ ವ್ಯವಸ್ಥೆಯನ್ನು ಹೊಗಳಿದ್ದಾರೆ.
ಹೊಸ ಪೋರ್ಟಲ್ ತಕ್ಷಣವೇ ಐಟಿಆರ್ ಪ್ರೊಸೆಸಿಂಗ್ ಮಾಡುವುದಕ್ಕೆ ಇಂಟಿಗ್ರೇಟ್ ಆಗಿದೆ. ಇದರಿಂದ ಶೀಘ್ರ ರೀಫಂಡ್ ಆಗುತ್ತದೆ. ಎಲ್ಲ ಇಂಟರಾಕ್ಷನ್ಗಳು ಮತ್ತು ಅಪ್ಲೋಡ್ಗಳು ಅಥವಾ ಬಾಕಿ ಕಾರ್ಯಗಳು ಸಿಂಗಲ್ ಡ್ಯಾಶ್ಬೋರ್ಡ್ನಲ್ಲಿ ಕಾಣಿಸುತ್ತದೆ. ಆ ಮೂಲಕ ತೆರಿಗೆದಾರರಿಗೆ ಅನುಕೂಲ ಆಗುತ್ತದೆ ಎಂದು ಸಿಬಿಡಿಟಿ ಹೇಳಿದೆ. ತೆರಿಗೆ ಪಾವತಿದಾರರು ಎಲ್ಲ ಮೂಲಗಳಿಂದ ಬರುವ ತಮ್ಮ ಎಲ್ಲ ಆದಾಯವನ್ನು ಅಪ್ಡೇಟ್ ಮಾಡಬಹುದು. ಸಿಬಿಡಿಟಿ ತಿಳಿಸಿರುವಂತೆ, ಆನ್ಲೈನ್ ತೆರಿಗೆ ಪಾವತಿ ಮತ್ತು ಮೊಬೈಲ್ ಆ್ಯಪ್ ಜೂನ್ 18ರಂದು ಆ್ಯಕ್ಟಿವೇಟ್ ಆಗುತ್ತದೆ.
The much awaited e-filing portal 2.0 was launched last night 20:45hrs.
I see in my TL grievances and glitches.
Hope @Infosys & @NandanNilekani will not let down our taxpayers in the quality of service being provided.
Ease in compliance for the taxpayer should be our priority. https://t.co/iRtyKaURLc
— Nirmala Sitharaman (@nsitharaman) June 8, 2021
ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು