Gold Rate Today: ದೇಶದ ಪ್ರಮುಖ ನಗರಗಳಲ್ಲಿ ಬುಧವಾರ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ದರ ವಿವರ ಮಾಹಿತಿ ಇಲ್ಲಿದೆ
Gold Silver Price: ಚೆನ್ನೈನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನ 250 ರೂ. ಏರಿಕೆ ಕಂಡಿದ್ದು, ಇಂದಿನ ದರ 46,300 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರವನ್ನು 2,500 ರೂಪಾಯಿ ಏರಿಕೆ ಮಾಡಲಾಗಿದೆ. ಆ ಮೂಲಕ 4,63,000 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ, ಮತ್ತು ಬೆಳ್ಳಿ ಮತ್ತೆ ಹಾವು-ಏಣಿ ಆಟ ಆರಂಭಿಸಿದೆ. ನಿನ್ನೆ (ಬುಧವಾರ) ಆಭರಣದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಇಂದು ಮತ್ತೆ ಏರಿಕೆಯತ್ತ ಸಾಗಿದೆ. ಬೆಂಗಳೂರಿನಲ್ಲಿ ಅಪರಂಜಿ ಚಿನ್ನ ಬರೋಬ್ಬರಿ 1,000 ರೂಪಾಯಿಯಷ್ಟು ಏರಿಕೆ ಕಂಡಿದೆ. ಆ ಬಳಿಕ 100 ಗ್ರಾಂ ಚಿನ್ನಕ್ಕೆ 5,00,700 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ದರ ಕಳೆದೆರಡು ದಿನಗಳಿಂದ ಇಳಿಕೆ ಕಂಡಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದೆ. 1ಕೆಜಿ ಬೆಳ್ಳಿಯಲ್ಲಿ 5,300 ರೂಪಾಯಿ ಏರಿಕೆ ಕಂಡಿದೆ. ಆ ಮೂಲಕ 76,300 ರೂಪಾಯಿಗೆ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 100 ರೂಪಾಯಿ ಏರಿಕೆ ಕಂಡ ಬಳಿಕ 45,900 ರೂಪಾಯಿ ನಿಗದಿ ಮಾಡಲಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನ 250 ರೂ. ಏರಿಕೆ ಕಂಡಿದ್ದು, ಇಂದಿನ ದರ 46,300 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರವನ್ನು 2,500 ರೂಪಾಯಿ ಏರಿಕೆ ಮಾಡಲಾಗಿದೆ. ಆ ಮೂಲಕ 4,63,000 ರೂಪಾಯಿ ನಿಗದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್10 ಗ್ರಾಂ ಚಿನ್ನ 100 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 48,050 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೂ 100 ಗ್ರಾಂ ಚಿನ್ನದ ದರದಲ್ಲಿ 1,000 ರೂಪಾಯಿ ಏರಿಕೆ ಕಂಡು ಬಂದಿದ್ದು, 4,80,500 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 52,420 ರೂಪಾಯಿಗೆ ಏರಿಕೆಯಾಗಿದೆ. ಹಾಗೂ 100 ಗ್ರಾಂ ಚಿನ್ನದ ದರ 1,200 ರೂಪಾಯಿ ಏರಿಕೆ ಬಳಿಕ 5,24,200 ರೂಪಾಯಿ ಆಗಿದೆ. ಕೆಜಿ ಬೆಳ್ಳಿ ಬೆಲೆ 700 ರೂಪಾಯಿ ಏರಿಕೆ ಬಳಿಕ 71,700 ರೂಪಾಯಿ ನಿಗದಿಯಾಗಿದೆ.
ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನಕ್ಕೆ 47,680 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನದ ದರದಲ್ಲಿ 1,700 ರೂಪಾಯಿ ಏರಿಕೆಯಾಗಿದ್ದು, 4,76,800 ರೂಪಾಯಿ ನಿದಿಯಾಗಿದೆ. ಅದೇರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 170 ರೂಪಾಯಿ ಏರಿಕೆ ಕಂಡ ಬಳಿಕ 48,680 ರೂಪಾಯಿಗೆ ಏರಿಕೆ ಆಗಿದೆ. ಹಾಗೂ 100 ಗ್ರಾಂ ಚಿನ್ನದಲ್ಲಿ 1,700 ರೂಪಾಯಿ ಏರಿಕೆ ಬಳಿಕ 4,86,800 ರೂಪಾಯಿಗೆ ಏರಿಕೆಯಾಗಿದೆ. ಕೆಜಿ ಬೆಳ್ಳಿ 700 ರೂಪಾಯಿ ಏರಿಕೆ ಕಂಡಿದೆ. ಆ ಮೂಲಕ 71,700 ರೂಪಾಯಿ ನಿಗದಿ ಮಾಡಲಾಗಿದೆ.
ಒಟ್ಟಾರೆಯಾಗಿ ಗಮನಿಸಿದಾಗ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಆಭರಣಗಳ ಬೆಲೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ದರ ವಿವರ ಗಮನಿಸಿದಾಗ ಮತ್ತೆ ಹಾವು-ಏಣಿ ಆಟ ಪ್ರಾರಂಭಿಸಿದೆ. ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕದ ಮೌಲ್ಯದ ಆಧಾರದ ಮೇಲೆ ಆಭರಣದ ಬೆಲೆಯನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: