Gold Silver Rate Today: ಬೆಂಗಳೂರು ನಗರದಲ್ಲಿ ಚಿನ್ನದ ದರ 50,090 ರೂಪಾಯಿ! ವಿವಿಧ ನಗರಗಳಲ್ಲಿ ಆಭರಣ ಬೆಲೆ ಎಷ್ಟಿದೆ?
ಒಂದು ಕಡೆ ಕೊರೊನಾ ಸಂಕಷ್ಟದಿಂದ ಚೇತರಿಸುಕೊಳ್ಳುತ್ತಿರುವ ಜನರಿಗೆ ಇಂಧನ ದರ ಏರಿಕೆಯಿಂದ ಜನರು ಆಗ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಚಿನ್ನದ ಬೆಲೆಯೂ ಏರಿಕೆ ಕಾಣುತ್ತಿರುವುದು ಚಿನ್ನ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
ಕಳೆದ ಒಂದು ವಾರದಿಂದಲೂ ಚಿನ್ನದ ದರ ಏರಿಕೆ ಕಾಣುತ್ತಲೇ ಇದೆ. ಇಂದು (ಜೂನ್ 7) ಮತ್ತೆ ಚಿನ್ನದ ದರ ಬೆಲೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,090 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೂ 100 ಗ್ರಾಂ ಚಿನ್ನದ ದರ 5,00,900 ರೂಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಲ ನಾಲ್ಕೈದು ದಿನಗಳಿಂದ ಏರಿಕೆಯತ್ತ ಸಾಗಿತ್ತು. ಇಂದು ಸ್ಥಿರತೆಯನ್ನು ಕಾಪಾಡಿಕೊಂಡಿದೆ. ನೀವು ಚಿನ್ನ ಕೊಳ್ಳುವತ್ತ ಯೋಚಿಸುತ್ತಿದ್ದೀರಿ ಎಂದಾದರೆ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಹಾಗೂ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ವಿವರ ಗಮನಿಸಿ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,920 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನಕ್ಕೆ 4,59,200 ರೂಪಾಯಿ ನಿಗದಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರ ಸ್ಥಿರವಾಗಿದ್ದು 1ಕೆಜಿ ಬೆಳ್ಳಿ ಬೆಲೆ 71,600 ರೂಪಾಯಿ ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 46,170 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,61,700 ರೂಪಾಯಿ ದಾಖಲಾಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,370 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,03,700 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 1ಕೆಜಿ ಬೆಳ್ಳಿಗೆ 76,300 ರೂಪಾಯಿ ನಿಗದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನಕ್ಕೆ 47,120 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,71,200 ರೂಪಾಯಿ ನಿದಿಯಾಗಿದೆ. ಹಾಗೆಯೇ ಕೆ.ಜಿ ಬೆಳ್ಳಿಗೆ 71,600 ರೂಪಾಯಿ ಆಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,320 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,83,200 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,320 ರೂಪಾಯಿ ಹಾಗೂ 100 ಗರಾಂ ಚಿನ್ನಕ್ಕೆ 4,93,200 ರೂಪಾಯಿ ನಿಗದಿ ಮಾಡಲಾಗಿದೆ. ಕೆಜಿ ಬೆಳ್ಳಿ ದರ 71,600 ರೂಪಾಯಿ ಇದೆ.
ಕೇವಲ ಮದುವೆ ಸಮಾರಂಭಗಳಿಗೆ ಚಿನ್ನ ತೊಟ್ಟು ಸಂಭ್ರಮಿಸುವುದಲ್ಲದೇ ಹೂಡಿಕೆ ದೃಷ್ಟಿಯಿಂದ ಚಿನ್ನವನ್ನು ಖರೀದಿಸುವುದು ಈಗಿನ ಪದ್ಧತಿಯಲ್ಲ. ಮೊದಲಿನಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುವ ಲೆಕ್ಕಚಾರವಿದೆ. ಹಾಗಾಗಿ ಹಣ ಕೈಯಲ್ಲಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಕಷ್ಟದ ಸಂದರ್ಭದಲ್ಲಿ ನೆರವಾಗುವ ಚಿನ್ನಕ್ಕೆ ಇಂದಿಗೂ ಭಾರತದಲ್ಲಿ ಬಾರೀ ಬೇಡಿಕೆಯಿದೆ.
ಒಂದು ಕಡೆ ಕೊರೊನಾ ಸಂಕಷ್ಟದಿಂದ ಚೇತರಿಸುಕೊಳ್ಳುತ್ತಿರುವ ಜನರಿಗೆ ಇಂಧನ ದರ ಏರಿಕೆ ಗಮನಿಸಿದ ಜನರು ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಚಿನ್ನದ ಬೆಲೆಯೂ ಏರಿಕೆ ಕಾಣುತ್ತಿರುವುದು ಚಿನ್ನ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
Gold Silver Rate Today: ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?
Published On - 9:23 am, Mon, 7 June 21