Gold Silver Rate Today: ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?

Gold Silver Price in Bangalore: ಪ್ರಸ್ತುತ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಕೊಂಚ ಕಷ್ಟವಾದರೂ ಕೂಡಾ ಚಿನ್ನದ ಎಷ್ಟಿದೆ ಎಂಬುದರ ಕುತೂಹಲ ಇದ್ದೇ ಇರುತ್ತದೆ. ಆಭರಣವನ್ನು ಕೇವಲ ತೊಟ್ಟು ಖುಷಿ ಪಡುವುದಕ್ಕಿಂತ ಹೆಚ್ಚಾಗಿ ಕಷ್ಟ ಕಾಲದಲ್ಲಿ ಸಹಾಯವಾಗುವ ಉದ್ದೇಶದಿಂದ ಖರೀದಿಸುತ್ತೇವೆ. ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಹಾಗೂ ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ದಾಖಲಾಗಿದೆ ಎಂಬುದನ್ನು ನೋಡೋಣ.

Gold Silver Rate Today: ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?
ಸಾಂದರ್ಭಿಕ ಚಿತ್ರ
Follow us
shruti hegde
|

Updated on: May 30, 2021 | 8:27 AM

ಬೆಂಗಳೂರು: ಸತತ ಎರಡು ದಿನಗಳ ಕಾಲ ಚಿನ್ನದ ದರ ಇಳಿಕೆಯತ್ತ ಸಾಗಿತ್ತು. ಆದರೆ ನಿನ್ನೆ (ಶನಿವಾರ) ಆಭರಣದ ಬೆಲೆ ಕೊಂಚ ಏರಿಕೆ ಕಂಡಿದೆ. ಅದಾದ ಬಳಿಕ ಇಂದು ರವಿವಾರವೂ (ಮೇ 30) ಕೂಡಾ ಚಿನ್ನದ ಬೆಲೆ ಏರಿಕೆಯತ್ತ ಸಾಗಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಅದ್ದೂರಿ ಮದುವೆ ಸಮಾರಂಭಗಳಿಗೆ ಬ್ರೇಕ್​ ಬಿದ್ದಿದ್ದರೂ ಕೂಡಾ ಕೇವಲ ಆಭರಣಗಳನ್ನು ತೊಟ್ಟು ಖುಷಿ ಪಡುವುದಕ್ಕಿಂತ ಹೆಚ್ಚಾಗಿ, ಚಿನ್ನ ಖರೀದಿಸಿದರೆ ಮುಂದೊಂದು ದಿನ ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂಬ ಉದ್ದೇಶ ಗ್ರಾಹಕರದ್ದು. ಹಾಗಾದರೆ ಇಂದಿನ ಮಾರುಕಟ್ಟೆಯಲ್ಲಿ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟೆಷ್ಟು ಏರಿಕೆ ಆಗಿದೆ ಎಂಬುದರ ವಿವರ ಇಲ್ಲಿದೆ.

ಪ್ರಸ್ತುತ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಕೊಂಚ ಕಷ್ಟವಾದರೂ ಕೂಡಾ ಚಿನ್ನದ ಎಷ್ಟಿದೆ ಎಂಬುದರ ಕುತೂಹಲ ಇದ್ದೇ ಇರುತ್ತದೆ. ಆಭರಣವನ್ನು ಕೇವಲ ತೊಟ್ಟು ಖುಷಿ ಪಡುವುದಕ್ಕಿಂತ ಹೆಚ್ಚಾಗಿ ಕಷ್ಟ ಕಾಲದಲ್ಲಿ ಸಹಾಯವಾಗುವ ಉದ್ದೇಶದಿಂದ ಖರೀದಿಸುತ್ತೇವೆ. ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಹಾಗೂ ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ದಾಖಲಾಗಿದೆ ಎಂಬುದನ್ನು ನೋಡೋಣ.

ಚಿನ್ನದ ಬೆಲೆ ಮಾಹಿತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 45,800 ರೂಪಾಯಿ ಆಗಿದೆ. ಇಂದು ಸರಿಸುಮಾರು 100 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 49,950 ರೂಪಾಯಿಗೆ ಏರಿಕೆ ಆಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 46,110 ರೂಪಾಯಿ ದಾಖಲಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,300 ರೂಪಾಯಿಗೆ ಏರಿಕೆ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 46,750 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,750 ರೂಪಾಯಿಗೆ ಏರಿದೆ. ಇನ್ನು ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,800 ರೂ. ಹಾಗೂ 24 ಕ್ಯಾರೆಟ್ 10ಗ್ರಾಂ ಚಿನ್ನಕ್ಕೆ 49,950 ರೂಪಾಯಿ ಏರಿಕೆಯಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,580 ರೂಪಾಯಿಗೆ ಏರಿಕೆ ಆಗಿದೆ. ಇಂದು ಸುಮಾರು 90 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ47,580 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮೈಸೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,800 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,950 ರೂಪಾಯಿ ದಾಖಲಾಗಿದೆ.

ವಿವಿಧ ನಗರಗಳಲ್ಲಿ ಬೆಳ್ಳಿ ದರ ಕೆಲವೆಡೆ ಬೆಳ್ಳಿ ದರ ಇಳಿಕೆ ಕಂಡು ಬಂದಿದ್ದರೆ, ಇನ್ನು ಕೆಲವು ನಗರದಲ್ಲಿ ಬೆಳ್ಳಿ ದರ ಕೊಂಚ ಏರಿಕೆ ಕಂಡಿದೆ. ಮೈಸೂರು ನಗರದಲ್ಲಿ 1 ಕೆಜಿ ಬೆಳ್ಳಿಗೆ 71,600 ರೂಪಾಯಿ ದಾಖಲಾಗಿದೆ. ಮುಂಬೈ ನಗರದಲ್ಲಿ 1ಕೆಜಿ ಬೆಳ್ಳಿ 71,600 ರೂಪಾಯಿಗೆ ಕುಸಿದಿದೆ. ಇಂದು ಸರಿಸುಮಾರು 400 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅಂದ ಹಾಗೇ ಹೈದರಾಬಾದ್​ನಲ್ಲಿ ಬೆಳ್ಳಿದ ದರ ಕೊಂಚ ಏರಿಕೆ ಕಂಡಿದ್ದು ಇಂದು 1ಕೆಜಿ ಬೆಳ್ಳಿ ದರ 76,200 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಅದೇ ರೀತಿ ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 400 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದ್ದು, 1ಕೆಜಿ ಬೆಳ್ಳಿ ದರ 71,600 ರೂಪಾಯಿಗೆ ಕುಸಿದಿದೆ. ಬೆಂಗಳೂರು ನಗರದಲ್ಲಿಯೂ ಕೂಡಾ ಬೆಳ್ಳಿ ದರ ಕೊಂಚ ಇಳಿಕೆ ಕಂಡು ಬಂದಿದೆ. 1ಕೆಜಿ ಬೆಳ್ಳಿ ದರದಲ್ಲಿ 400 ರೂಪಾಯಿಯಷ್ಟು ಕುಸಿತ ಕಂಡು ಬಂದಿದ್ದು, ಇಂದು ದರ 71,600 ರೂಪಾಯಿ ಆಗಿದೆ.

ಇದನ್ನೂ ಓದಿ: 

Gold Silver Rate Today: ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆ; ಆಭರಣ ಬೇಡಿಕೆಯಲ್ಲಿ ಇಳಿಕೆ

Gold Silver Rate Today: ಆಭರಣ ಪ್ರಿಯರೇ ಗಮನಿಸಿ; ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ

ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!