Gold Silver Rate Today: ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆ; ಆಭರಣ ಬೇಡಿಕೆಯಲ್ಲಿ ಇಳಿಕೆ

Gold Silver Price in Bangalore: ಆಭರಣಗಳನ್ನು ಕೊಳ್ಳಬೇಕು ಎಂಬುದು ಎಲ್ಲರ ಆಸೆ. ಅದರಲ್ಲಿಯೂ ಮಹಿಳೆಯರಂತೂ ಚಿನ್ನ, ಬೆಳ್ಳಿ ಕೊಳ್ಳಲು ಹಾತೊರೆಯುತ್ತಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಚಿನ್ನ ಕೊಳ್ಳುವತ್ತ ಗ್ರಾಹಕರು ಅಷ್ಟಾಗಿ ಗಮನಹರಿಸುತ್ತಿಲ್ಲ. ಇದರಿಂದ ಚಿನ್ನದ ಬೇಡಿಕೆ ಕುಸಿದಿದೆ. ಆದರೂ ಕೂಡಾ ಚಿನ್ನದ ದರ ಮಾತ್ರ ಏರಿಕೆಯತ್ತ ಸಾಗಿದೆ.

Gold Silver Rate Today: ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ  ಬೆಲೆ ಏರಿಕೆ; ಆಭರಣ ಬೇಡಿಕೆಯಲ್ಲಿ ಇಳಿಕೆ
ಚಿನ್ನದ ಬಳೆಗಳು
Follow us
shruti hegde
|

Updated on:May 27, 2021 | 8:21 AM

ಬೆಂಗಳೂರು: ನಗರದಲ್ಲಿ ಇಂದು ಆಭರಣದ ಬೆಲೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,100 ರೂ. ನಿಗದಿಯಾಗಿದೆ. ಸುಮಾರು 500 ರೂಪಾಯಿಯಷ್ಟು ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 540 ರೂಪಾಯಿ ಏರಿಕೆ ಕಂಡು ಬಂದಿದ್ದು, 50,300 ರೂಪಾಯಿಗೆ ಏರಿಕೆ ಆಗಿದೆ. ಬೆಳ್ಳಿ ದರದಲ್ಲಿಯೂ ಕೂಡ ಕೊಂಚ ಏರಿಕೆ ಕಂಡು ಬಂದಿದೆ. 1ಕೆಜಿ ಬೆಳ್ಳಿ ದರದಲ್ಲಿ 1,500 ರೂಪಾಯಿ ಹೆಚ್ಚಳವಾಗಿದ್ದು, 72,700 ರೂ. ದಾಖಲಾಗಿದೆ.

ಆಭರಣಗಳನ್ನು ಕೊಳ್ಳಬೇಕು ಎಂಬುದು ಎಲ್ಲರ ಆಸೆ. ಅದರಲ್ಲಿಯೂ ಮಹಿಳೆಯರಂತೂ ಚಿನ್ನ, ಬೆಳ್ಳಿ ಕೊಳ್ಳಲು ಹಾತೊರೆಯುತ್ತಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಚಿನ್ನ ಕೊಳ್ಳುವತ್ತ ಗ್ರಾಹಕರು ಅಷ್ಟಾಗಿ ಗಮನಹರಿಸುತ್ತಿಲ್ಲ. ಕೊರೊನಾ ಸೋಂಕು ವ್ಯಾಪಿಸುತ್ತಿದ್ದಂತೆಯೇ ಜನರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು. ಜನರ ಮಾನಸಿಕ ನೆಮ್ಮದಿಯನ್ನು ಕಿತ್ತುಕೊಂಡಿತು ಈ ಮಹಾಮಾರಿ. ಹೊಡೆದೋಡಿಸಲು ನಾನಾ ಪ್ರಯತ್ನಗಳು ನಡೆಯುತ್ತಲೇ ಇದೆ. ಹೀಗುರುವಾಗ ಆಭರಣ ಪ್ರಿಯರು ಚಿನ್ನ ಮತ್ತು ಬೆಳ್ಳಿ ಕೊಳ್ಳುವತ್ತ ಅಷ್ಟಾಗಿ ಗಮನಹರಿಸುತ್ತಿಲ್ಲ. ಇದರಿಂದ ಚಿನ್ನದ ಬೇಡಿಕೆ ಕುಸಿದಿದೆ. ಆದರೂ ಕೂಡಾ ಚಿನ್ನದ ದರ ಮಾತ್ರ ಏರಿಕೆಯತ್ತ ಸಾಗಿದೆ. ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಿನಲ್ಲೇ ಚಿನ್ನದ ದರ ಅತಿ ಹೆಚ್ಚಾಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 550 ರೂಪಾಯಿ ಏರಿಕೆ ಬಳಿಕ 46,500 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,700 ರೂಪಾಯಿ ಆಗಿದ್ದು, ನಿನ್ನೆಯ ದರಕ್ಕಿಂತ 600 ರೂ. ಏರಿಕೆ ಕಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದಲ್ಲಿ 170 ರೂ. ಏರಿಕೆಯಾಗಿದ್ದು, ಇಂದಿನ ದರ 47,100 ರೂಪಾಯಿಗೆ ಹೆಚ್ಚಳವಾಗಿದೆ. ಅದೇ ರೀತಿ 24 ಕ್ಯಾರೆಟ್​ 10 ಗ್ರಾಂ ಚಿನ್ನ 51,000 ರೂಪಾಯಿಗೆ ಹೆಚ್ಚಳವಾಗಿದೆ.

ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,100 ರೂಪಾಯಿ ದಾಖಲಾಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ 50,300 ರೂಪಾಯಿಗೆ ಏರಿಕೆಯಾಗಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 800 ರೂ. ಏರಿಕೆ ಆಗಿದ್ದು, 46,800 ರೂಪಾಯಿ ದಾಖಲಾಗಿದೆ. ಹಾಗೂ 24 ಕ್ಯಾರೆಟ್​ 10 ಗ್ರಾಂ ಚಿನ್ನದ ದರ 47,800 ರೂಪಾಯಿ ಆಗಿದೆ.

ವಿವಿಧ ನಗರಗಳಲ್ಲಿ ಬೆಳ್ಳಿ ದರ ಮಾಹಿತಿ ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ದರವೂ ಸಹ ಏರಿಕೆಯತ್ತ ಸಾಗಿದೆ. ಮುಂಬೈನಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 1,500 ರೂಪಾಯಿ ಏರಿಕೆ ಆಗಿದ್ದು, ಇಂದು 72,700 ರೂಪಾಯಿಗೆ ದರ ಹೆಚ್ಚಳ ಮಾಡಲಾಗಿದೆ. ಹೈದರಾಬಾದ್​ನಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 1,300 ರೂಪಾಯಿ ಹೆಚ್ಚಳದ ಬಳಿಕ 77,300 ರೂಪಾಯಿ ನಿಗದಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರ 72,700 ರೂಪಾಯಿ ದಾಖಲಾಗಿದ್ದು, ಚೆನ್ನೈನಲ್ಲಿ 1ಕೆ.ಜಿ ಬೆಳ್ಳಿ 1,100 ರೂಪಾಯಿ ಏಳಿಕೆ ಕಂಡಿದೆ. ಈ ಮೂಲಕ ಇಂದಿನ ದರ 77,300 ರೂಪಾಯಿಗೆ ಹೆಚ್ಚಳವಾಗಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿ 1ಕೆಜಿ ಬೆಳ್ಳಿ 1,500 ರೂ. ಏರಿಕೆ ಕಂಡಿದ್ದು ಇಂದಿನ ಮಾರುಕಟ್ಟೆಯ ದರ 72,700 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ: 

Gold Silver Rate Today: ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಬೆಂಗಳೂರು, ದೆಹಲಿ, ಚೆನ್ನೈನಲ್ಲಿ ಆಭರಣದ ದರ ವಿವರ ಹೀಗಿದೆ!

Gold Silver Rate Today: ಆಭರಣ ಪ್ರಿಯರಿಗೆ ನಿರಾಸೆ; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ,ಬೆಳ್ಳಿ ದರ?

Published On - 8:20 am, Thu, 27 May 21

ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ