JioPhone Next: ಗೂಗಲ್- ಜಿಯೋ ಸ್ಮಾರ್ಟ್​ಫೋನ್ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಘೋಷಿಸಿದ ಮುಕೇಶ್ ಅಂಬಾನಿ

Google Jio Smartphone: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪೆನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಅದರ ಬಗೆಗಿನ ವಿವರಗಳು ಹೀಗಿವೆ.

JioPhone Next: ಗೂಗಲ್- ಜಿಯೋ ಸ್ಮಾರ್ಟ್​ಫೋನ್ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಘೋಷಿಸಿದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ
Follow us
TV9 Web
| Updated By: Digi Tech Desk

Updated on:Jun 24, 2021 | 5:58 PM

ರಿಲಯನ್ಸ್ ಇಂಡಿಯಾ ಲಿಮಿಟೆಡ್​ 44ನೇ ವಾರ್ಷಿಕ ಸಾಮಾನ್ಯ ಸಭೆ ಗುರುವಾರ ನಡೆಯಿತು. ಈ ಸಂದರ್ಭದಲ್ಲಿ ಕಂಪೆನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಪ್ರಮುಖ ಘೋಷಣೆಗಳನ್ನು ಮಾಡಿದರು. ಭಾರತವನ್ನು 2G ಮುಕ್ತ ಮಾಡುವುದು ಸೇರಿದಂತೆ ಇತರ ಪ್ರಮುಖ ವಿಷಯಗಳನ್ನು ಹೇಳಿದರು. ಇನ್ನು ಗೂಗಲ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಕೈಗೆಟುಕುವ ದರದ ಸ್ಮಾರ್ಟ್ ಫೋನ್ ತಯಾರಿಸುವ ಬಗ್ಗೆ ಕೂಡ ತಿಳಿಸಿದ್ದಾರೆ. 2021ರ ಸೆಪ್ಟೆಂಬರ್​ನಲ್ಲಿ ಈ ಸ್ಮಾರ್ಟ್​ಫೋನ್ ಲಭ್ಯವಾಗಲಿದೆ. ಭಾರತದಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ 4G ಸೇವೆಯನ್ನು ರಿಲಯನ್ಸ್​ ಜಿಯೋದಿಂದ ಒದಗಿಸುತ್ತಿದ್ದರೂ ಈಗಲೂ 30 ಕೋಟಿ ಮಂದಿ 2G ಬಳಕೆ ಮಾಡುತ್ತಿದ್ದಾರೆ. ಈ ಹೊಸ ಸ್ಮಾರ್ಟ್​ ಫೋನ್ ಮೂಲಕ ಭಾರತ್ 2G ಮುಕ್ತ್ ಆಗಲಿದೆ ಎಂದು ಅವರು ಹೇಳಿದರು.

ಬಿಡುಗಡೆ ಮಾಡುವಂಥದ್ದು ಸಂಪೂರ್ಣ ಫೀಚರ್​ಗಳನ್ನು ಒಳಗೊಂಡ ಸ್ಮಾರ್ಟ್​ಫೋನ್. ಗೂಗಲ್ ಮತ್ತು ಜಿಯೋದ ಎಲ್ಲ ಅಪ್ಲಿಕೇಷನ್​ಗಳನ್ನೂ ಸಪೋರ್ಟ್ ಮಾಡುತ್ತದೆ. ಜತೆಗೆ ಆಂಡ್ರಾಯಿಡ್ ಪ್ಲೇಸ್ಟೋರ್​ನ ಆ್ಯಪ್​ಗಳನ್ನೂ ಬಳಸಬಹುದು. ಈ ಫೋನ್​ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಜಿಯೋ ಹಾಗೂ ಗೂಗಲ್ ಎರಡೂ ಸೇರಿ ಈ ಫೋನ್ ಅನ್ನು ಅಭಿವೃದ್ಧಿ ಪಡಿಸಿವೆ. ಅದರಲ್ಲೂ ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ರೂಪಿಸಲಾಗಿದೆ. ತೀರಾ ಕೈಗೆಟುಕುವ ಬೆಲೆಯಲ್ಲಿ, ಜಿಯೋಫೋನ್ ನೆಕ್ಸ್ಟ್​ನಲ್ಲಿ ಫೀಚರ್​ಗಳಾದ ವಾಯ್ಸ್​ ಅಸಿಸ್ಟಂಟ್, ಆಟೋಮೆಟಿಕ್ ರೀಡ್- ಅಲೌಡ್ ಸ್ಕ್ರೀನ್ ಟೆಕ್ಸ್ಟ್, ಭಾಷಾಂತರ, ಸ್ಮಾರ್ಟ್ ಕ್ಯಾಮೆರಾ ಜತೆಗೆ ಆಗ್ಯುಮೆಂಟೆಡ್ ರಿಯಾಲ್ಟಿ ಫಿಲ್ಟರ್ಸ್ ಇನ್ನೂ ಸಾಕಷ್ಟಿದೆ ಎಂದು ಮುಕೇಶ್ ಅಂಬಾನಿ ಘೋಷಣೆ ಮಾಡಿದ್ದಾರೆ.

ಜಿಯೋ- ಗೂಗಲ್ ಸಹಭಾಗಿತ್ವ ಮುಂದಿನ ಹಂತಕ್ಕೆ ಹೋಗಿದೆ. ಜಿಯೋದಿಂದ ಮುಂದೆ ಗೂಗಲ್ ಕ್ಲೌಡ್ ಬಳಸಲಾಗುತ್ತದೆ. ಮುಕೇಶ್ ಅಂಬಾನಿ ಮತ್ತು ಗೂಗಲ್​ನ ಸುಂದರ್ ಪಿಚೈ ಜಂಟಿಯಾಗಿ ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಘೋಷಣೆ ಮಾಡಿದ್ದಾರೆ.

ಮುಕೇಶ್ ಅಂಬಾನಿ ಘೋಷಣೆಯ ಪ್ರಮುಖಾಂಶಗಳು: * ಜಿಯೋಫೋನ್ ನೆಕ್ಸ್ಟ್ ಫೋನ್ ಭಾರತದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಆಗಲಿದೆ. * ರಿಲಯನ್ಸ್ ಸಮೂಹದ ಕನ್ಸಾಲಿಡೇಟೆಡ್ ಆದಾರ 5,40,000 ಕೋಟಿ. ಕನ್ಸಾಲಿಡೇಟೆಡ್ EBITDA 98,000 ಕೋಟಿ ರೂಪಾಯಿ. EBITDAನ ಶೇ 50ರಷ್ಟು ಗ್ರಾಹಕ ವ್ಯವಹಾರದಿಂದಲೇ ಬರುತ್ತದೆ. * ಈ ವರ್ಷದಲ್ಲಿ ರಿಲಯನ್ಸ್ ಜಿಯೋದಿಂದ ನಿವ್ವಳವಾಗಿ ಹೆಚ್ಚುವರಿ 3.79 ಕೋಟಿ ಚಂದಾದಾರರ ಸೇರ್ಪಡೆ ಆಗಿದೆ. * ರಿಲಯನ್ಸ್ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ಯಾಸಿರ್ ಅಲ್-ರುಮಾಯ್ಯನ್​ರನ್ನು ಸ್ವಾಗತಿಸಿದ ಮುಕೇಶ್ ಅಂಬಾನಿ. * ಜಿಯೋ ಇನ್​ಸ್ಟಿಟ್ಯೂಟ್​ ಈ ವರ್ಷ ನವೀ ಮುಂಬೈನಲ್ಲಿ ಕಾರ್ಯ ನಿರ್ವಹಣೆ ಆರಂಭಿಸಲಿದೆ ಎಂದು ಘೋಷಿಸಿದ ನೀತಾ ಅಂಬಾನಿ * ಕೋವಿಡ್​ನಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ಐದು ವರ್ಷಗಳ ವೇತನ ಪಾವತಿಸಲಾಗುವುದು. ಮೃತ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೂ ಹಣಕಾಸು ನೆರವು ಘೋಷಣೆ. ಜತೆಗೆ ಕಂಪೆನಿಯು ಮೃತರ ಕುಟುಂಬಸ್ಥರಿಗೆ ರೂ 10 ಲಕ್ಷ ನೀಡುತ್ತದೆ ಎಂದು ನೀತಾ ಅಂಬಾನಿ ಘೋಷಿಸಿದ್ದಾರೆ. ಇದು ರಿಲಯನ್ಸ್ ಮಿಷನ್ ಎಂಪ್ಲಾಯಿ ಕೇರ್ ಅಡಿಯಲ್ಲಿ ಘೋಷಣೆ ಮಾಡಿರುವ ಯೋಜನೆಗಳಾಗಿವೆ.

ಇದನ್ನೂ ಓದಿ: Mukesh Ambani salary: ರಿಲಯನ್ಸ್ ಇಂಡಸ್ಟ್ರೀಸ್​ನ ಒಂದೇ ಒಂದು ರೂಪಾಯಿ ವೇತನವೂ ಮುಟ್ಟದ ಮುಕೇಶ್ ಅಂಬಾನಿ

ಇದನ್ನೂ ಓದಿ: Reliance industries bonus | ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಎಲ್ಲ ಸಿಬ್ಬಂದಿಗೆ ಬೋನಸ್

(Reliance Industries chairman Mukesh Ambani announce Google- Jio smart phone launch in September at company’s 44th annual general meeting. Here is the highlights)

Published On - 4:54 pm, Thu, 24 June 21