AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

YES bank: ಶೇ. 20 ಯೆಸ್ ಬ್ಯಾಂಕ್ ಷೇರುಗಳನ್ನು 13,483 ಕೋಟಿ ರೂಗೆ ಖರೀದಿಸಲಿರುವ ಜಪಾನ್​​ನ ಎಸ್​​​ಎಂಬಿಸಿ ಬ್ಯಾಂಕ್

Various Indian banks to offload large shares to Sumitomo Mitsui Banking Corporation: ಯೆಸ್ ಬ್ಯಾಂಕ್​ನ ಶೇ. 51ರಷ್ಟು ಷೇರುಗಳನ್ನು ಖರೀದಿಸಲು ಜಪಾನ್​​ನ ಎಸ್​​ಎಂಬಿಸಿ ಬ್ಯಾಂಕ್​​ಗೆ ಆರ್​​ಬಿಐ ಅನುಮತಿ ನೀಡಿದೆ. ಯೆಸ್ ಬ್ಯಾಂಕ್​​ನಲ್ಲಿ ಭಾರತದ ವಿವಿಧ ಬ್ಯಾಂಕುಗಳು ಹೊಂದಿರುವ ಶೇ. 20ರಷ್ಟು ಷೇರುಗಳನ್ನು ಎಸ್​​ಎಂಬಿಸಿ 13,483 ಕೋಟಿ ರೂಗೆ ಖರೀದಿಸಬಹುದು. ಈ ಪೈಕಿ ಎಸ್​​​ಬಿಐ ಶೇ. 13.19ರಷ್ಟು ಷೇರುಗಳನ್ನು ಮಾರಲಿದೆ.

YES bank: ಶೇ. 20 ಯೆಸ್ ಬ್ಯಾಂಕ್ ಷೇರುಗಳನ್ನು 13,483 ಕೋಟಿ ರೂಗೆ ಖರೀದಿಸಲಿರುವ ಜಪಾನ್​​ನ ಎಸ್​​​ಎಂಬಿಸಿ ಬ್ಯಾಂಕ್
ಯೆಸ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2025 | 6:12 PM

Share

ನವದೆಹಲಿ, ಮೇ 9: ಯೆಸ್ ಬ್ಯಾಂಕ್​​ನಲ್ಲಿನ ತಮ್ಮ ಪಾಲಿನ ದೊಡ್ಡ ಮೊತ್ತದ ಷೇರುಗಳನ್ನು ಭಾರತೀಯ ಬ್ಯಾಂಕುಗಳು ಜಪಾನ್​​ನ ಸುಮಿಟೋಮೊ ಮಿಟ್ಸುಯ್ ಬ್ಯಾಂಕಿಂಗ್ ಕಾರ್ಪೊರೇಶನ್​​ಗೆ (SMBC- Sumitomo Mitsui Banking Corporation) ಮಾರುವ ಸಾಧ್ಯತೆ. ಯೆಸ್​ ಬ್ಯಾಂಕ್​​ನಲ್ಲಿ ಶೇ. 23.97 ರಷ್ಟು ಷೇರುಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದರಲ್ಲಿ ಶೇ. 13.19ರಷ್ಟನ್ನು ಜಪಾನ್ ಮೂಲದ ಬ್ಯಾಂಕಿಗೆ ಮಾರಲು ನಿರ್ಧರಿಸಿದೆ. ಒಟ್ಟು 413.44 ಕೋಟಿಯಷ್ಟು ಷೇರುಗಳನ್ನು, ಪ್ರತೀ ಷೇರಿಗೆ 21.50 ರೂ ಬೆಲೆಯಂತೆ ಒಟ್ಟು 8,889 ಕೋಟಿ ರೂಗೆ ಎಸ್​​ಬಿಐ ಮಾರಬಹುದು. ಈ ವಿಚಾರವನ್ನು ಎಸ್​​ಬಿಐ ಇವತ್ತು ಶುಕ್ರವಾರ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ.

ಎಸ್​​ಬಿಐ ಸೇರಿದಂತೆ ಒಟ್ಟು ಎಂಟು ಬ್ಯಾಂಕುಗಳು ಯೆಸ್ ಬ್ಯಾಂಕ್​​ನಲ್ಲಿನ ಶೇ. 20ರಷ್ಟು ಷೇರುಗಳನ್ನು ಜಪಾನ್​​ನ ಈ ಎಸ್​​ಎಂಬಿಸಿ ಬ್ಯಾಂಕಿಗೆ ನೀಡುವ ನಿರೀಕ್ಷೆ ಇದೆ. ಎಚ್​​ಡಿಎಫ್​​ಸಿ ಬ್ಯಾಂಕು, ಕೋಟಕ್ ಮಹೀಂದ್ರ ಬ್ಯಾಂಕು, ಐಸಿಐಸಿಐ, ಎಕ್ಸಿಸ್, ಐಡಿಎಫ್​​ಸಿ ಫಸ್ಟ್, ಫೆಡರಲ್ ಬ್ಯಾಂಕ್, ಬಂಧನ್ ಬ್ಯಾಂಕ್​ಗಳು ಶೇ. 6.81, ಅಂದರೆ, ಸುಮಾರು 213.68 ಕೋಟಿ ಯೆಸ್ ಬ್ಯಾಂಕ್ ಷೇರುಗಳನ್ನು ಮಾರಬಹುದು ಎನ್ನಲಾಗುತ್ತಿದೆ. ಎಸ್​​ಬಿಐದೂ ಸೇರಿಸಿದರೆ ಒಟ್ಟು ಶೇ. 20ರಷ್ಟು ಷೇರುಗಳನ್ನು ಎಸ್​​ಎಂಬಿಸಿ 13,483 ಕೋಟಿ ರೂಗೆ ಪಡೆಯಲಿದೆ.

ಇದನ್ನೂ ಓದಿ: ಮೂರು ದಿನ ಎಟಿಎಂ, ಆನ್​ಲೈನ್ ಟ್ರಾನ್ಸಾಕ್ಷನ್ಸ್ ಬಂದ್ ಆಗುತ್ತವಾ? ಸರ್ಕಾರ ನೀಡಿದ ಸ್ಪಷ್ಟನೆ

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಯೆಸ್ ಬ್ಯಾಂಕ್​ಗೆ ಆರ್​​ಬಿಐ ಸೂಚನೆ ಮೇರೆಗೆ ಭಾರತದ ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೆರವಿನ ಹಸ್ತ ಚಾಚಿದವು. 2020ರಲ್ಲಿ ಈ ಸಂಸ್ಥೆಗಳು 10,000 ಕೋಟಿ ರೂ ಹೂಡಿಕೆ ಒದಗಿಸಿ ಯೆಸ್ ಬ್ಯಾಂಕ್​​ನನ ಷೇರುಗಳನ್ನು ಖರೀದಿಸಿದ್ದುವು. ಎಸ್​​ಬಿಐ ಬ್ಯಾಂಕ್ ಶೇ. 23.97ರಷ್ಟು ಷೇರು ಪಡೆದಿದೆ. ಐಸಿಐಸಿಐ ಬ್ಯಾಂಕ್, ಎಚ್​​ಡಿಎಫ್​​ಸಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕು, ಎಕ್ಸಿಸ್ ಬ್ಯಾಂಕ್ ಮತ್ತು ಎಲ್​​ಐಸಿ ಒಟ್ಟು ಸೇರಿ 11.34 ಪ್ರತಿಶತದಷ್ಟು ಷೇರುಗಳನ್ನು ಹೊಂದಿವೆ.

ಈಗ ಎಸ್​​ಬಿಐ ಹಾಗೂ ಇತರ ಬ್ಯಾಂಕುಗಳು ನಿರೀಕ್ಷೆಯಂತೆ ಷೇರು ಮಾರಿದರೆ ಎಸ್​​ಎಂಬಿಸಿ ಬ್ಯಾಂಕ್​​ಗೆ ಯೆಸ್ ಬ್ಯಾಂಕ್​​ನ ಶೇ. 20ರಷ್ಟು ಷೇರುಪಾಲು ಸಿಗಲಿದೆ. ಯೆಸ್ ಬ್ಯಾಂಕ್ ಅನ್ನು ಪೂರ್ಣವಾಗಿ ಖರೀದಿಸಲು ಎಸ್​​ಎಂಬಿಸಿ ಮುಂದೆ ಎರಡು ಆಯ್ಕೆಗಳಿವೆ. ಷೇರು ಬದಲಾವಣೆ ಮೂಲಕ ವಿಲೀನ ಮಾಡುವುದು ಒಂದು ಮಾರ್ಗ. ಹಾಗೆಯೇ, ಶೇ. 26ರಷ್ಟು ಷೇರುಗಳನ್ನು ಖರೀದಿಸಿ, ನಂತರ ಓಪನ್ ಆಫರ್ ಮೂಲಕ ಷೇರುಪಾಲನ್ನು ಶೇ. 51ಕ್ಕೆ ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: ನೆಲ ಒರೆಸುವ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಉನ್ನತ ಪದವಿಗೆ ಏರಿದ ಮಹಿಳೆಯ ಕಥೆ; ಇದು ಪ್ರತೀಕ್ಷಾ ಫಲ

ಜಪಾನ್ ಮೂಲದ ಎಸ್​​ಎಂಬಿಸಿ ಬ್ಯಾಂಕು ಸುಮಿಟೊಮೊ ಮಿಟ್ಸುಯ್ ಫೈನಾನ್ಷಿಯಲ್ ಗ್ರೂಪ್​​ಗೆ ಸೇರಿದ್ದು, ಅದರ ಮಾರುಕಟ್ಟೆ ಬಂಡವಾಳ 7.6 ಲಕ್ಷ ಕೋಟಿ ರೂ ಇದೆ. 39 ದೇಶಗಳಲ್ಲಿ ಇದರ ಬ್ಯಾಂಕಿಂಗ್ ಬ್ಯುಸಿನೆಸ್ ಹರಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!