AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್​ ಆಯೋಜಿಸಲು ಮುಂದೆ ಬಂದ ಇಸಿಬಿ

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 58 ಪಂದ್ಯಗಳು ಪಂದ್ಯಗಳು ಮುಗಿದಿವೆ. ಲೀಗ್ ಹಂತದಲ್ಲಿ ಇನ್ನೂ ಕೇವಲ 12 ಮ್ಯಾಚ್​ಗಳು ಮಾತ್ರ ಉಳಿದಿದ್ದು, ಇದಾದ ಬಳಿಕ 4 ಪಂದ್ಯಗಳ ಪ್ಲೇಆಫ್ ಜರುಗಬೇಕಿದೆ. ಈ ಪಂದ್ಯಗಳು ಒಂದು ವಾರದ ಬಳಿಕ ನಡೆಯುವ ಸಾಧ್ಯತೆಯಿದ್ದು, ಅದನ್ನು ಎಲ್ಲಿ ಆಯೋಜಿಸಲಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ಈ ವಾರದೊಳಗೆ ದೊರೆಯಲಿದೆ.

IPL 2025: ಐಪಿಎಲ್​ ಆಯೋಜಿಸಲು ಮುಂದೆ ಬಂದ ಇಸಿಬಿ
Ipl 2025
ಝಾಹಿರ್ ಯೂಸುಫ್
|

Updated on: May 10, 2025 | 7:24 AM

Share

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಉಳಿದ ಪಂದ್ಯಗಳಿಗೆ ಆತಿಥ್ಯವಹಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಸಕ್ತಿ ತೋರಿದೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಯುದ್ಧದ ಭೀತಿ ಹಿನ್ನಲೆಯಲ್ಲಿ ಒಂದು ವಾರ ಸ್ಥಗಿತಗೊಂಡಿರುವ ಐಪಿಎಲ್​ ಪಂದ್ಯಗಳನ್ನು ಇಂಗ್ಲೆಂಡ್​ನಲ್ಲಿ ನಡುವಂತೆ ಇಸಿಬಿ, ಭಾರತೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ಇಂಗ್ಲಿಷ್ ನಿಯತಕಾಲಿಕೆ ದಿ ಕ್ರಿಕೆಟರ್ ವರದಿ ಪ್ರಕಾರ, ಮೇ 9 ರಂದೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಬಗ್ಗೆ ಚರ್ಚಿಸಿದೆ. ಅಲ್ಲದೆ​ ಐಪಿಎಲ್​ನ ಉಳಿದ 16 ಪಂದ್ಯಗಳಿಗೆ ಆತಿಥ್ಯವಹಿಸಲು ಸಿದ್ಧವಿರುವುದಾಗಿ ತಿಳಿಸಿದೆ. ಈ ಬಗ್ಗೆ ಬಿಸಿಸಿಐ ಜೊತೆ ಕೂಡ ಚರ್ಚಿಸಿದ್ದು, ಈ ಮಾತುಕತೆ ಫಲಪ್ರದವಾದರೆ ಐಪಿಎಲ್​ 2025ರ ಉಳಿದ ಪಂದ್ಯಗಳು ಇಂಗ್ಲೆಂಡ್​ನಲ್ಲಿ ನಡೆಯಬಹುದು.

ಭಾರತ ಮತ್ತು ಪಾಕಿಸ್ತಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಐಪಿಎಲ್ 2025 ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದೆ. ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ಮೇ 8 ರಂದು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಹಠಾತ್ತನೆ ಸ್ಥಗಿತಗೊಳಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಟೂರ್ನಿ ಆಯೋಜನೆ ಆಸಕ್ತಿ ತೋರಿಸಿದೆ.

ಇದನ್ನೂ ಓದಿ
Image
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
Image
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
Image
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
Image
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಇದಾಗ್ಯೂ ಬಿಸಿಸಿಐ ಕಡೆಯಿಂದ ಸ್ಪಷ್ಟ ಉತ್ತರ ದೊರೆತಿಲ್ಲ ಎಂದು ತಿಳಿದು ಬಂದಿದೆ. ಏಕೆಂದರೆ ಒಂದು ವಾರದ ಬಳಿಕ ಭಾರತದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕವಷ್ಟೇ ಐಪಿಎಲ್​ ಟೂರ್ನಿಯ ಉಳಿದ ಪಂದ್ಯಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಅಂದರೆ ಯುದ್ಧ ಪರಿಸ್ಥಿತಿಯು ತಿಳಿಗೊಂಡರೆ, ಹೊಸ ವೇಳಾಪಟ್ಟಿಯಂತೆ ಭಾರತದಲ್ಲೇ ಟೂರ್ನಿ ನಡೆಯಲಿದೆ.

ಒಂದು ವೇಳೆ ಈ ವಾರದೊಳಗೆ ಇದೇ ಪರಿಸ್ಥಿತಿ ಮುಂದುವರೆದರೆ, 16 ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ಆಯೋಜನೆಗೊಳ್ಳಲಿದೆ. ಇದಕ್ಕಾಗಿ ಭಾರತದ ಮುಂದೆ ಯುಎಇ ಹಾಗೂ ಸೌತ್ ಆಫ್ರಿಕಾ ಆಯ್ಕೆಗಳಿವೆ. 2009 ರಲ್ಲಿ ಭಾರತದಲ್ಲಿನ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಐಪಿಎಲ್​ನ ಕೆಲ ಪಂದ್ಯಗಳನ್ನು ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2021 ರಲ್ಲಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಐಪಿಎಲ್​ನ 31 ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ: IPL 2025: ಈ 4 ತಂಡಗಳು ಪ್ಲೇಆಫ್​ ಆಡುವುದು ಖಚಿತ ಎಂದ ಮಾರ್ಕ್​ ಬೌಚರ್

ಇದೀಗ ಐಪಿಎಲ್​ ತಾತ್ಕಾಲಿಕ ಸ್ಥಗಿತಗೊಂಡಿದ್ದು, ಇದರ ಬೆನ್ನಲ್ಲೇ 16 ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದೆ ಬಂದಿದೆ. ಅತ್ತ ಬಿಸಿಸಿಐ ಮುಂದೆ ಯುಎಇ ಹಾಗೂ ಸೌತ್ ಆಫ್ರಿಕಾ ಆಯ್ಕೆಗಳೂ ಕೂಡ ಇದೆ. ಹೀಗಾಗಿ ಭಾರತದಲ್ಲಿ ಟೂರ್ನಿ ನಡೆಯದಿದ್ದರೆ, ಈ ಮೂರು ದೇಶಗಳಲ್ಲಿ  ಒಂದನ್ನು ಬಿಸಿಸಿಐ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

Follow Us
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!
Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು