Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಡಿಸೆಂಬರ್​ ತಿಂಗಳ ಕೊನೆಯೊಳಗೆ ಇಪಿಎಫ್ ಚಂದಾದಾರರು ಈ ಜವಾಬ್ದಾರಿ ಪೂರ್ಣಗೊಳಿಸಿ​

ಇಪಿಎಫ್​ಒದ ಈ ಜವಾಬ್ದಾರಿಯನ್ನು ಡಿಸೆಂಬರ್ ಕೊನೆಗೂ ಮುಂಚಿತವಾಗಿ ಮುಗಿಸಿಕೊಳ್ಳಬೇಕು. ಮತ್ತು ಅದು ಹೇಗೆ ಮಾಡುವುದು ಎಂಬುದರ ವಿವರ ಇಲ್ಲಿದೆ.

EPFO: ಡಿಸೆಂಬರ್​ ತಿಂಗಳ ಕೊನೆಯೊಳಗೆ ಇಪಿಎಫ್ ಚಂದಾದಾರರು ಈ ಜವಾಬ್ದಾರಿ ಪೂರ್ಣಗೊಳಿಸಿ​
ಸಾಂದರ್ಭಿ ಚಿತ್ರ
Follow us
TV9 Web
| Updated By: Srinivas Mata

Updated on: Dec 19, 2021 | 8:44 AM

ಭವಿಷ್ಯ ನಿಧಿ ಸಂಸ್ಥೆ- ಇಪಿಎಫ್​ಒ ನೀಡುವ ಹಲವಾರು ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು, ಇಪಿಎಫ್ ಚಂದಾದಾರರಿಗೆ ಡಿಸೆಂಬರ್ ಅಂತ್ಯದೊಳಗೆ ನಾಮಿನಿಯನ್ನು ಸೇರಿಸಲು ಕೇಳಲಾಗಿದೆ. ಹೊಸ ನಿಯಮಗಳು ಜನವರಿ 1, 2022ರಿಂದ ಜಾರಿಗೆ ಬರಲಿದೆ. ಹಾಗಾಗಿ, ನೀವು ಇನ್ನೂ ನಿಮ್ಮ ಇಪಿಎಫ್ ಖಾತೆಗೆ ನಾಮಿನಿಯನ್ನು ಸೇರಿಸದಿದ್ದರೆ ಗಡುವಿನ ಮುಂಚೆಯೇ ಮಾಡಿ. ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ? ನಿಮ್ಮ ಇಪಿಎಫ್​ ಖಾತೆಯ ವಿರುದ್ಧ ಇ-ನಾಮನಿರ್ದೇಶನವನ್ನು ಸಲ್ಲಿಸಲು ಪಟ್ಟಿ ಮಾಡಲಾದ ಹಂತಗಳನ್ನು ಕೆಳಗೆ ನೀಡಲಾಗಿದೆ. ಆದರೆ ನಿಮ್ಮ ಪ್ರೊಫೈಲ್ ಭಾವಚಿತ್ರವನ್ನು ಸೇರಿಸುವಂತಹ ಕೆಲವು ಇತರ ಕಾರ್ಯಗಳನ್ನು ಪೂರ್ಣಗೊಳಿಸಲು ಸಂಸ್ಥೆಯು ನಿಮ್ಮನ್ನು ನೆನಪಿಸುತ್ತದೆ ಎಂಬುದನ್ನು ನೆನಪಿಡಿ.

ಆನ್‌ಲೈನ್‌ನಲ್ಲಿ ಇ-ನಾಮನಿರ್ದೇಶನವನ್ನು ಸೇರಿಸಲು ಕ್ರಮಗಳು: – epfindia.gov.inಗೆ ತೆರಳಬೇಕು. – services ಮೆನು ಅಡಿಯಲ್ಲಿ For employees ಆಯ್ಕೆಯನ್ನು ಕ್ಲಿಕ್ ಮಾಡಬೇಕು. – ಆ ನಂತರ ಮತ್ತೊಮ್ಮೆ ‘services’ ಆಯ್ಕೆಯ ಅಡಿಯಲ್ಲಿ- ‘member UAN/ಆನ್‌ಲೈನ್ ಸೇವೆ (OCS/OTCP)’ ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. – 4ನೇ ಹಂತದಲ್ಲಿ ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಇಪಿಎಫ್​ ಖಾತೆ ಲಾಗ್-ಇನ್ ಮಾಡಿ. ನಿಮ್ಮ ಉದ್ಯೋಗದಾತರು ಪ್ರತಿ ತಿಂಗಳು ಒದಗಿಸುವ ಮಾಸಿಕ ಸಂಬಳದ ಸ್ಲಿಪ್‌ನಿಂದ UAN ಸಂಖ್ಯೆಯನ್ನು ಸುಲಭವಾಗಿ ಕಂಡುಹಿಡಿಯಬಹುದು. – ಯಶಸ್ವಿಯಾಗಿ ಖಾತೆಗೆ ಲಾಗ್ ಇನ್ ಮಾಡಿದ ನಂತರ, ಇ-ಸೈನ್‌ನೊಂದಿಗೆ ಇ-ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ ಎಂದು ಸಂದೇಶವು ಕಾಣಿಸುತ್ತದೆ. ಇಪಿಎಫ್​ಒ ಕಚೇರಿಗಳಿಗೆ ಭೌತಿಕವಾಗಿ ಭೇಟಿ ನೀಡದೆ ಅತ್ಯಂತ ಅನುಕೂಲಕರ ರೀತಿಯಲ್ಲಿ ಸಾಮಾಜಿಕ ಭದ್ರತೆಗೆ ಸುಗಮ ಪ್ರವೇಶಕ್ಕೆ ಕುಟುಂಬದ ಸದಸ್ಯರಿಗೆ ಅಧಿಕಾರ ನೀಡಲು ನಿಮ್ಮ ನಾಮನಿರ್ದೇಶನವನ್ನು ತಕ್ಷಣವೇ ಸಲ್ಲಿಸಿ. – ಈಗ ನಿಮ್ಮ ಇಪಿಎಫ್ ಆನ್‌ಲೈನ್ ಖಾತೆಯಲ್ಲಿ ‘Manage’ ಎಂಬ ಟ್ಯಾಬ್ ಅನ್ನು ಕಾಣಬಹುದು ಮತ್ತು ಅದರ ಅಡಿಯಲ್ಲಿ ‘ಇ-ನಾಮಿನೇಷನ್’ ಆಯ್ಕೆಗೆ ತೆರಳಬೇಕು. – ‘provide details’ ಎಂಬುದು ಪರದೆಯ ಮೇಲೆ ಮಿನುಗುತ್ತದೆ, ಇಲ್ಲಿ ‘ಸೇವ್’ ಕ್ಲಿಕ್ ಮಾಡಬೇಕು. – ಆ ನಂತರ ಕುಟುಂಬ ಘೋಷಣೆ ಅಪ್‌ಡೇಟ್‌ಗಾಗಿ, Yes ಮೇಲೆ ಕ್ಲಿಕ್ ಮಾಡಿ – ಈಗ ‘ಕುಟುಂಬ ವಿವರಗಳ ಮೇಲೆ ಕ್ಲಿಕ್ ಮಾಡಿ’ ಮತ್ತು ಅಗತ್ಯ ಮಾಹಿತಿಯನ್ನು ಸೇರಿಸಿ. ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು ಎಂಬುದನ್ನು ಇಲ್ಲಿ ನೆನಪಿಡಿ. – ಮುಂದಿನ ಹಂತದಲ್ಲಿ, ಇಪಿಎಫ್​ ಖಾತೆಗೆ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ನಿಯೋಜಿಸಿದ್ದರೆ ಹಂಚಿಕೆಯ ಮೊತ್ತವನ್ನು ಘೋಷಿಸಲು ‘ನಾಮನಿರ್ದೇಶನ ವಿವರಗಳು’ ಕ್ಲಿಕ್ ಮಾಡಿ. – ಇದನ್ನು ಮಾಡಿದ ನಂತರ, ‘ಸೇವ್ ಇಪಿಎಫ್ ಆಯ್ಕೆ’ ಮೇಲೆ ಕ್ಲಿಕ್ ಮಾಡಿ. – ಕೊನೆಯ ಹಂತದಲ್ಲಿ ನಿಮ್ಮ ಇಪಿಎಫ್ ಖಾತೆ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಒಟಿಪಿ ಜನರೇಟ್ ಇ-ಸೈನ್ ಕ್ಲಿಕ್ ಮಾಡಿ.

ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಇ-ಸಹಿ ಮಾಡಿದ ನಂತರ, ನಿಮ್ಮ ಇ-ನಾಮನಿರ್ದೇಶನವನ್ನು ಇಪಿಎಫ್ಒದಲ್ಲಿ ನೋಂದಾಯಿಸಲಾಗುತ್ತದೆ. ಮತ್ತು ನಿಮ್ಮ ಉದ್ಯೋಗದಾತರಿಗೆ ಅಥವಾ ಇಪಿಎಫ್​ಒಗೆ ಭೌತಿಕವಾಗಿ ಯಾವುದೇ ದಾಖಲೆಗಳನ್ನು ಕಳುಹಿಸುವ ಅಗತ್ಯವಿಲ್ಲ.

ಇದನ್ನೂ ಓದಿ: LIC Premium: ಇಪಿಎಫ್​ನಿಂದ ಎಲ್​ಐಸಿ ಪ್ರೀಮಿಯಂ ಪಾವತಿಸುವುದು ಹೇಗೆ ಎಂಬ ವಿವರ ಇಲ್ಲಿದೆ