AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Premium: ಇಪಿಎಫ್​ನಿಂದ ಎಲ್​ಐಸಿ ಪ್ರೀಮಿಯಂ ಪಾವತಿಸುವುದು ಹೇಗೆ ಎಂಬ ವಿವರ ಇಲ್ಲಿದೆ

ಎಲ್​ಐಸಿ ಪ್ರೀಮಿಯಂ ಅನ್ನು ಇಪಿಎಫ್​ ಬ್ಯಾಲೆನ್ಸ್​ನಿಂದ ಪಾವತಿ ಮಾಡುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ. ಕೊವಿಡ್​19 ಬಿಕ್ಕಟ್ಟಿನ ಸಂದರ್ಭದಲ್ಲಿ ಇದರಿಂದ ನೆರವಾಗಲಿದೆ.

LIC Premium: ಇಪಿಎಫ್​ನಿಂದ ಎಲ್​ಐಸಿ ಪ್ರೀಮಿಯಂ ಪಾವತಿಸುವುದು ಹೇಗೆ ಎಂಬ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Dec 09, 2021 | 1:35 PM

Share

ಇಪಿಎಫ್​ಒ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ಭವಿಷ್ಯ ನಿಧಿಗಳು, ಪಿಂಚಣಿಗಳು ಮತ್ತು ಕಡ್ಡಾಯ ಜೀವ ವಿಮೆಯ ನಿಯಂತ್ರಣ ಮತ್ತು ನಿರ್ವಹಣೆಯನ್ನು ನಿಗಾ ಮಾಡುತ್ತದೆ. ಅಂದಹಾಗೆ ಇಪಿಎಫ್​ಒ ಸದಸ್ಯರ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಜೀವ ವಿಮಾ ನಿಗಮ ಅಥವಾ ಎಲ್​ಐಸಿ ಪ್ರೀಮಿಯಂ ಅನ್ನು ಪಾವತಿಸಬಹುದು ಎಂಬ ಸಂಗತಿ ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅದು ಹೇಗೆ ಎಂದು ತಿಳಿದುಕೊಳ್ಳುವುದು ಆಸಕ್ತಿಕರವಾಗಿದೆ. ತೆರಿಗೆ ಮತ್ತು ಹೂಡಿಕೆ ತಜ್ಞರ ಪ್ರಕಾರ, ಇಪಿಎಫ್​ ಖಾತೆಯಿಂದ ಎಲ್​ಐಸಿ ಪ್ರೀಮಿಯಂ ಪಾವತಿಗಾಗಿ ಇಪಿಎಫ್​ಒ​​ನಲ್ಲಿ ಫಾರ್ಮ್ 14 ಅನ್ನು ಸಲ್ಲಿಸಬೇಕಾಗುತ್ತದೆ. ಮತ್ತು ಫಾರ್ಮ್ 14 ಸಲ್ಲಿಕೆ ಸಮಯದಲ್ಲಿ ಇಪಿಎಫ್​ ಬ್ಯಾಲೆನ್ಸ್ ಕನಿಷ್ಠ ಎರಡು ವರ್ಷಗಳ ಎಲ್​ಐಸಿ ಪ್ರೀಮಿಯಂ ಮೊತ್ತಕ್ಕೆ ಸಮನಾಗಿರಬೇಕಾಗುತ್ತದೆ.

ಇಪಿಎಫ್ ಖಾತೆಯಿಂದ ಎಲ್ಐಸಿ ಪ್ರೀಮಿಯಂ ಪಾವತಿ ಸೌಲಭ್ಯದ ಕುರಿತು ತಜ್ಞರು ಹೇಳುವಂತೆ: “ಇಪಿಎಫ್‌ಒನಲ್ಲಿ ಫಾರ್ಮ್ 14 ಅನ್ನು ಸಲ್ಲಿಸುವ ಮೂಲಕ ಇಪಿಎಫ್‌ಒ ಸದಸ್ಯರು ಭವಿಷ್ಯ ನಿಧಿ (ಪಿಎಫ್) ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಅನ್ನು ಪಾವತಿಸಲು ಅನುಮತಿಸಲಾಗಿದೆ. ಆದರೂ ಈ ಫಾರ್ಮ್ 14 ಅನ್ನು ಇಪಿಎಫ್‌ಒನಲ್ಲಿ ಸಲ್ಲಿಸುವಾಗ ಎರಡು ವರ್ಷಗಳ ಎಲ್ಐಸಿ ಪ್ರೀಮಿಯಂ ಮೊತ್ತದ ಬ್ಯಾಲೆನ್ಸ್ ಹೊಂದಿರಬೇಕು.” ಎಲ್ಐಸಿ ಪಾಲಿಸಿಯನ್ನು ಖರೀದಿಸುವಾಗ ಅಥವಾ ಎಲ್ಐಸಿ ಪ್ರೀಮಿಯಂ ಪಾವತಿಯ ನಂತರದ ಹಂತದಲ್ಲಿ ಈ ಸೌಲಭ್ಯವನ್ನು ಪಡೆಯಬಹುದು.

ಇಪಿಎಫ್ ಖಾತೆಯಿಂದ ಎಲ್ಐಸಿ ಪಾವತಿ ಕುರಿತು ಮತ್ತೊಬ್ಬ ವಿಷಯ ತಜ್ಞರು ತಿಳಿಸುವಂತೆ: “ಸೌಲಭ್ಯವನ್ನು ಪಡೆಯಲು ಈ ಫಾರ್ಮ್ ಅನ್ನು ಸಲ್ಲಿಸಬೇಕು ಮತ್ತು ಎಲ್ಐಸಿ ಮತ್ತು ಇಪಿಎಫ್‌ಒ ಎರಡಕ್ಕೂ ಎಲ್ಐಸಿ ಪಾಲಿಸಿ ಮತ್ತು ಇಪಿಎಫ್ ಖಾತೆಯನ್ನು ಜೋಡಣೆ ಮಾಡಲು ಅನುಮತಿಸಬೇಕು. ಆದರೂ ಈ ಇಪಿಎಫ್‌ಒ ಸೌಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಎಲ್ಐಸಿ ಪ್ರೀಮಿಯಂ ಪಾವತಿಗೆ ಮಾತ್ರ ಲಭ್ಯವಿದೆ ಮತ್ತು ಇಪಿಎಫ್ಒ ಸದಸ್ಯರು ಯಾವುದೇ ಇತರ ವಿಮಾ ಪ್ರೀಮಿಯಂ ಪಾವತಿಗೆ ಈ ಸೌಲಭ್ಯವನ್ನು ಬಳಸಲು ಆಗುವುದಿಲ್ಲ.”

ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಇಪಿಎಫ್​ಒ ​​ನಿಯಮವನ್ನು ಬಹಳ ಉತ್ತಮ ಅಂತಲೇ ಕರೆಯಲಾಗುತ್ತದೆ. “ಎಲ್‌ಐಸಿ ಪಾವತಿಗೆ ಸಂಬಂಧಿಸಿದಂತೆ ಈ ಇಪಿಎಫ್‌ಒ ನಿಯಮವು ಸದ್ಯಕ್ಕೆ ಕೊವಿಡ್ -19 ಬಿಕ್ಕಟ್ಟಿನಲ್ಲಿ ಆರ್ಥಿಕ ಒತ್ತಡದಲ್ಲಿ ಇರುವವರಿಗೆ ವರದಾನ ಆಗಬಹುದು ಮತ್ತು ಒಮಿಕ್ರಾನ್ ವೈರಸ್ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ನಂತರ ಎಲ್ಐಸಿ ಪಾಲಿಸಿಯನ್ನು ಮುಂದುವರಿಸಲು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಆಯ್ಕೆಯಾಗಿ ಬಳಸಬಹುದು,” ಎಂಬ ಸಲಹೆಯೂ ಕೇಳಿಬರುತ್ತದೆ. ಎಲ್ಐಸಿ ಮತ್ತು ಇಪಿಎಫ್ ಎರಡೂ ವೃತ್ತಿಪರರ ಪ್ರಮುಖ ಭಾಗವಾಗಿದೆ. ಆದರೆ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಮಾತ್ರ ಇಪಿಎಫ್ ಖಾತೆಯಿಂದ ಎಲ್ಐಸಿ ಪಾವತಿಯನ್ನು ಬಳಸಬೇಕು ಎಂಬುದನ್ನು ತಿಳಿದಿರಬೇಕು. ಆರ್ಥಿಕ ಬಿಕ್ಕಟ್ಟು ಮುಗಿದ ನಂತರ ಈ ಸೌಲಭ್ಯವನ್ನು ತಕ್ಷಣವೇ ನಿಲ್ಲಿಸಬೇಕು.

ಇದನ್ನೂ ಓದಿ: PF Interest: ಪಿಎಫ್​ ಖಾತೆದಾರರಿಗೆ ಬಡ್ಡಿ ಮೊತ್ತ ಜಮೆ; ಖಾತೆಗೆ ಬಂದಿದೆಯಾ ಪರಿಶೀಲಿಸುವುದು ಹೇಗೆ?

Published On - 1:47 pm, Tue, 7 December 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ