AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax: ಈ ಐದರಲ್ಲಿ ಹೆಚ್ಚಿನ ಮೌಲ್ಯದ ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು

ನಗದು ವಹಿವಾಟುಗಳಿಗೆ ಸಂಬಂಧಿಸಿದಂತೆ ಬಿಗಿಯಾದ ಕ್ರಮಗಳನ್ನು ತರಲಾಗಿದೆ. ಇಲ್ಲಿ ಪ್ರಸ್ತಾವ ಮಾಡಿರುವ 5 ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯುವ ಸಾಧ್ಯತೆ ಇದೆ.

Income Tax: ಈ ಐದರಲ್ಲಿ ಹೆಚ್ಚಿನ ಮೌಲ್ಯದ ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 25, 2021 | 10:46 AM

Share

ಆದಾಯ ತೆರಿಗೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ನಗದು ವಹಿವಾಟಿನ ಬಗ್ಗೆ ಬಹಳ ಜಾಗರೂಕವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಬ್ಯಾಂಕ್, ಮ್ಯೂಚುವಲ್ ಫಂಡ್ ಹೌಸ್‌ಗಳು, ಬ್ರೋಕರ್ ಪ್ಲಾಟ್‌ಫಾರ್ಮ್‌ಗಳು ಮುಂತಾದ ವಿವಿಧ ಹೂಡಿಕೆ ಪ್ಲಾಟ್​ಫಾರ್ಮ್​ಗಳು ಸಾಮಾನ್ಯವಾಗಿ ಸಾರ್ವಜನಿಕರಿಗೆ ನಗದು ವಹಿವಾಟು ನಿಯಮಗಳನ್ನು ಬಿಗಿಗೊಳಿಸಿವೆ. ಇದೀಗ, ಈ ಹೂಡಿಕೆ ಮತ್ತು ಸಾಲ ನೀಡುವ ಸಂಸ್ಥೆಗಳು ಒಂದು ನಿರ್ದಿಷ್ಟ ಮಿತಿಯ ತನಕ ಮಾತ್ರ ನಗದು ವ್ಯವಹಾರವನ್ನು ಅನುಮತಿಸುತ್ತವೆ. ಇದರಲ್ಲಿ ಸ್ವಲ್ಪ ಮಟ್ಟಿಗಿನ ಉಲ್ಲಂಘನೆಯಾದರೂ ಆದಾಯ ತೆರಿಗೆ ಇಲಾಖೆಯು ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ಕಳುಹಿಸಬಹುದು.

ಹೆಚ್ಚಿನ ಮೌಲ್ಯದ ನಗದು ವ್ಯವಹಾರವನ್ನು ಮಾಡಿದ್ದಲ್ಲಿ ಅದನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ (ITR) ವರದಿ ಮಾಡಲು ತೆರಿಗೆದಾರರಿಗೆ ಸಲಹೆ ನೀಡಲಾಗುವುದು ಎನ್ನುತ್ತಾರೆ ತೆರಿಗೆ ತಜ್ಞರು. ಈ ಬಗ್ಗೆ ವಿಷಯ ಪರಿಣತರು ಮಾತನಾಡಿ, “ಒಬ್ಬ ವ್ಯಕ್ತಿಯು ಹೆಚ್ಚಿನ ಮೌಲ್ಯದ ನಗದು ವಹಿವಾಟು ನಡೆಸಿದರೆ ಅವರು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯುವ ಸಾಧ್ಯತೆಗಳಿವೆ. ವಿವಿಧ ನಗದು ಸಂಬಂಧಿತ ವಹಿವಾಟುಗಳಲ್ಲಿ ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್ ಹೌಸ್‌ಗಳು, ಬ್ರೋಕರೇಜ್‌ಗಳು ಮತ್ತು ಆಸ್ತಿ ನೋಂದಣಿದಾರರು ಸೇರಿವೆ. ಮೌಲ್ಯವು ನಿರ್ದಿಷ್ಟ ಮಿತಿಯನ್ನು ಮೀರಿದರೆ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಯಾವಾಗಲೂ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು. ಹೆಚ್ಚಿನ ಮೌಲ್ಯದ ವಹಿವಾಟುಗಳಲ್ಲಿ ತೊಡಗಿರುವ ವ್ಯಕ್ತಿಗಳ ಹಣಕಾಸಿನ ದಾಖಲೆಗಳನ್ನು ಪಡೆಯಲು ಅನೇಕ ಸರ್ಕಾರಿ ಸಂಸ್ಥೆಗಳ ಜತೆಗೆ ಆದಾಯ ತೆರಿಗೆ ಇಲಾಖೆಯು ಒಪ್ಪಂದಗಳನ್ನು ಹೊಂದಿದೆ. ಆದರೆ ಆ ವಹಿವಾಟಿನ ಬಗ್ಗೆ ತೆರಿಗೆ ಫೈಲಿಂಗ್​ನಲ್ಲಿ ತಿಳಿಸದಿದ್ದಾಗ ಮಾತ್ರ ಹೀಗಾಗುತ್ತದೆ.”

ಆದಾಯ ತೆರಿಗೆ ನೋಟಿಸ್​ಗೆ ಕಾರಣ ಆಗಬಹುದಾದ ಟಾಪ್ 5 ನಗದು ವಹಿವಾಟುಗಳ ಬಗ್ಗೆ ಸೆಬಿ ನೋಂದಾಯಿತ ಆದಾಯ ತೆರಿಗೆ ಸಲ್ಯೂಷನ್ ಪೂರೈಕೆದಾರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರು ಈ ಕೆಳಗಿನವುಗಳನ್ನು ಪಟ್ಟಿ ಮಾಡಿದ್ದಾರೆ:

1] ಬ್ಯಾಂಕ್ ಎಫ್‌ಡಿ: ಬ್ಯಾಂಕ್ ಎಫ್‌ಡಿಯಲ್ಲಿನ ನಗದು ಠೇವಣಿ ರೂ. 10 ಲಕ್ಷ ಮೀರಬಾರದು. ಒಂದು ಅಥವಾ ಹೆಚ್ಚಿನ ನಿಶ್ಚಿತ ಠೇವಣಿಗಳಲ್ಲಿ ವೈಯಕ್ತಿಕ ಠೇವಣಿಗಳು ನಿಗದಿತ ಮಿತಿಗಿಂತ ಹೆಚ್ಚಿದ್ದರೆ ಬ್ಯಾಂಕ್‌ಗಳು ಬಹಿರಂಗಪಡಿಸಬೇಕು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಪ್ರಕಟಿಸಿದೆ.

2] ಬ್ಯಾಂಕ್ ಉಳಿತಾಯ ಖಾತೆ ಠೇವಣಿ: ಬ್ಯಾಂಕ್ ಖಾತೆಯಲ್ಲಿ ನಗದು ಠೇವಣಿ ಮಿತಿ ರೂ. 10 ಲಕ್ಷ. ಉಳಿತಾಯ ಖಾತೆದಾರರು ಆರ್ಥಿಕ ವರ್ಷದಲ್ಲಿ ರೂ. 10 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡಿದರೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ನೀಡಬಹುದು. ಇನ್ನು ಹಣಕಾಸು ವರ್ಷದಲ್ಲಿ ರೂ. 10 ಲಕ್ಷ ಮಿತಿಯನ್ನು ದಾಟಿದ ಬ್ಯಾಂಕ್ ಖಾತೆಯಲ್ಲಿನ ನಗದು ಠೇವಣಿ ಮತ್ತು ಹಿಂಪಡೆಯುವಿಕೆಗಳನ್ನು ತೆರಿಗೆ ಅಧಿಕಾರಿಗಳಿಗೆ ಬಹಿರಂಗಪಡಿಸಬೇಕು. ಅಂದ ಹಾಗೆ ಕರೆಂಟ್​ ಅಕೌಂಟ್​ನಲ್ಲಿ ಈ ಮಿತಿ ರೂ. 50 ಲಕ್ಷ.

3] ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ: CBDT ನಿಯಮಗಳ ಪ್ರಕಾರ, ಕ್ರೆಡಿಟ್ ಕಾರ್ಡ್ ಬಿಲ್‌ಗಳು ರೂ. 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಯನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು. ಹೆಚ್ಚುವರಿಯಾಗಿ, ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಹಣಕಾಸು ವರ್ಷದಲ್ಲಿ ರೂ. 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿದರೆ ಅದನ್ನು ತೆರಿಗೆ ಇಲಾಖೆಗೆ ಬಹಿರಂಗಪಡಿಸಬೇಕು.

“ಐಟಿಆರ್ ಸಲ್ಲಿಸುವಾಗ ಯಾವುದೇ ದೊಡ್ಡ ವಹಿವಾಟು ಬಹಿರಂಗಗೊಳ್ಳಬೇಕು. ನೀವು ಯಾವುದೇ ಹೆಚ್ಚಿನ ಮೌಲ್ಯದ ವಹಿವಾಟುಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಆದಾಯ ತೆರಿಗೆ ನೋಟಿಸ್ ಪಡೆಯುವುದನ್ನು ತಪ್ಪಿಸಲು ನಿಮ್ಮ ಐಟಿಆರ್ ಅನ್ನು ಸಲ್ಲಿಸುವಾಗ ಅವುಗಳನ್ನು ಫಾರ್ಮ್ 26 ಎಎಸ್‌ನಲ್ಲಿ ಬಹಿರಂಗಪಡಿಸುವುದನ್ನು ಖಚಿತಪಡಿಸಿಕೊಳ್ಳಿ,” ಎಂದು ಟ್ಯಾಕ್ಸ್ ಕನ್ಸಲ್ಟೆಂಟ್​ಗಳು ಸಲಹೆ ಮಾಡುತ್ತಾರೆ.

4] ರಿಯಲ್ ಎಸ್ಟೇಟ್ ಆಸ್ತಿ ಮಾರಾಟ ಅಥವಾ ಖರೀದಿ: ಆಸ್ತಿ ರಿಜಿಸ್ಟ್ರಾರ್ ತೆರಿಗೆ ಅಧಿಕಾರಿಗಳಿಗೆ ರೂ. 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರ ಆಸ್ತಿಯ ಯಾವುದೇ ಹೂಡಿಕೆ ಅಥವಾ ಮಾರಾಟವನ್ನು ಬಹಿರಂಗಪಡಿಸಬೇಕು. ಆದ್ದರಿಂದ ಯಾವುದೇ ರಿಯಲ್ ಎಸ್ಟೇಟ್ ಆಸ್ತಿ ಖರೀದಿ ಅಥವಾ ಮಾರಾಟದಲ್ಲಿ ತೆರಿಗೆದಾರರು ತಮ್ಮ ನಗದು ವಹಿವಾಟನ್ನು ಫಾರ್ಮ್ 26ASನಲ್ಲಿ ವರದಿ ಮಾಡಲು ಸಲಹೆ ನೀಡುತ್ತಾರೆ ಏಕೆಂದರೆ ಆಸ್ತಿ ರಿಜಿಸ್ಟ್ರಾರ್ ಖಂಡಿತವಾಗಿಯೂ ಅದರ ಬಗ್ಗೆ ವರದಿ ಮಾಡುತ್ತಾರೆ.

5] ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ಗಳಲ್ಲಿ ಹೂಡಿಕೆ: ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಬಾಂಡ್‌ಗಳು ಅಥವಾ ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರು ಈ ಹೂಡಿಕೆಗಳಲ್ಲಿನ ತಮ್ಮ ನಗದು ವಹಿವಾಟು ಒಂದು ಹಣಕಾಸು ವರ್ಷದಲ್ಲಿ ರೂ. 10 ಲಕ್ಷಕ್ಕಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಪತ್ತೆಹಚ್ಚಲು ಹಣಕಾಸಿನ ವಹಿವಾಟಿನ ವಾರ್ಷಿಕ ಮಾಹಿತಿ ರಿಟರ್ನ್ (AIR) ಹೇಳಿಕೆಯನ್ನು ಸೃಷ್ಟಿಸಿದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಇದರ ಆಧಾರದ ಮೇಲೆ ತೆರಿಗೆ ಅಧಿಕಾರಿಗಳು ಹೆಚ್ಚಿನ ಮೌಲ್ಯದ ವಹಿವಾಟುಗಳ ವಿವರಗಳನ್ನು ಸಂಗ್ರಹಿಸುತ್ತಾರೆ.

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ