ಬಾಂಬ್ಗಳನ್ನು ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ ಅಂತ ಮತ್ತೊಮ್ಮೆ ಹೇಳಿದ ಜಮೀರ್ ಅಹ್ಮದ್
ನಮ್ಮ ರಾಜಕಾರಣಿಗಳು ತಮ್ಮಲ್ಲಿ ದೇಶಭಕ್ತಿಗೆ ಕೊರೆತೆಯಿಲ್ಲ ಅನ್ನೋದನ್ನು ಪ್ರೂವ್ ಮಾಡಲು ಅತಿಶಯೋಕ್ತಿಗಳನ್ನು ಬಳಸುವುದು ನಿಲ್ಲಿಸಬೇಕು. ದೇಶದ ಸೈನಿಕರಲ್ಲಿ ಬಲ ತುಂಬಲು ಶುಕ್ರವಾರದ ಸಾಮೂಹಿಕ ನಮಾಜ್ನಲ್ಲಿ ದೇವರನ್ನು ಕೇಳಿಕೊಳ್ಳಲಾಗಿದೆ ಎಂದು ಜಮೀರ್ ಹೇಳುತ್ತಾರೆ, ಭಾರತೀಯರೆಲ್ಲ ಪ್ರಾರ್ಥನೆಗಳನ್ನು ಮಾಡಿದರೆ ಸಾಕು, ನಮ್ಮ ಯೋಧರ ಚೇತನ ಇಮ್ಮಡಿಗೊಳ್ಳುತ್ತದೆ.
ಕಲಬುರಗಿ, ಮೇ 10: ನಗರಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಬಿಜೆಡ್ ಜಮೀರ್ ಅಹ್ಮದ್ ಖಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅನುಮತಿ ನೀಡಿದರೆ ತಾನು ಈಗಲೂ ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಲು ಸಿದ್ಧ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ತಾನು ತಯಾರು ಎಂದು ಮತ್ತೊಮ್ಮೆ ಹೇಳಿದರು. ನಾಗರಿಕರನ್ನು ಯುದ್ಧಕ್ಕೆ ಕಳಿಸಲ್ಲ ಎಂಬ ಅಂಶ ಪ್ರಾಯಶಃ ಸಚಿವರಿಗೆ ಗೊತ್ತಿದ್ದಂತಿಲ್ಲ. ಪಾಕಿಸ್ತಾನಕ್ಕೆ ಯಾವುದೇ ಸಾಮರ್ಥ್ಯ ಇಲ್ಲ, ಅದೊಂದು ಖಾಲಿ ಡಬ್ಬ ಮತ್ತು ಠುಸ್ ಪಟಾಕಿ ಎಂಬ ಉಪಮೆಗಳನ್ನು ಬಳಸುವ ಜಮೀರ್ ಅಹ್ಮದ್ ಭಾರತ ಮನಸ್ಸು ಮಾಡಿದರೆ ಕೇವಲ ಎರಡು ದಿನಗಳಲ್ಲಿ ಪಾಕಿಸ್ತಾನ ನಿರ್ನಾಮವಾಗುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: Operation Sindoor: “ಮೋದಿ ಹೆಸರು ಹೇಳಲೂ ಹೆದರುವ ಹೇಡಿ”: ತನ್ನದೇ ದೇಶದ ಪ್ರಧಾನಿ ಬಗ್ಗೆ ಪಾಕ್ ಸಂಸದ ವ್ಯಂಗ್ಯ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
