ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಅಧಿಕೃತ ವಿಡಿಯೋ ಬಿಡುಗಡೆ ಮಾಡಿದ ಸೇನೆ
ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಸೇನೆಯ ಕುಮ್ಮಕ್ಕಿನೊಂದಿಗೆ ಸ್ಥಾಪಿಸಲಾಗಿರುವ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಸರಣಿಯಾಗಿ ಧ್ವಂಸಗೊಳಿಸಿದ ಮೊದಲ ದೃಶ್ಯಾವಳಿಯನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಅನೇಕ ಉಗ್ರರ ಶಿಬಿರಗಳನ್ನು ದಾಳಿಯಲ್ಲಿ ಧ್ವಂಸಗೊಳಿಸಲಾಗಿದೆ. ಭಾರತೀ ಸೇನೆ ಬಿಡುಗಡೆ ಮಾಡಿದ ಅಧಿಕೃತ ವಿಡಿಯೋ ಇಲ್ಲಿದೆ ನೋಡಿ.
ಶ್ರೀನಗರ, ಮೇ 10: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಆಸುಪಾಸಿನಲ್ಲಿ ಪಾಕಿಸ್ತಾನದ ಸೇನೆಯ ಸಹಕಾರದೊಂದಿಗೆ ಭಯೋತ್ಪಾದಕರು ನಿರ್ಮಾಣ ಮಾಡಿರುವ ಅನೇಕ ಲಾಂಚ್ ಪ್ಯಾಡ್ಗಳನ್ನು ಭಾರತೀಯ ಸೇನೆ ಚಿಂದಿ ಉಡಾಯಿಸಿದೆ. ಉಗ್ರ ನಿಗ್ರಹ ಕಾರ್ಯಾಚರಣೆಯ ಮೊದಲ ವಿಡಿಯೋವನ್ನು ಸೇನೆ ಬಿಡುಗಡೆ ಮಾಡಿದೆ. ಆ ವಿಡಿಯೋ ಇಲ್ಲಿದೆ.
Published on: May 10, 2025 01:20 PM
Latest Videos

