AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railway Recruitment 2022: ಕ್ರೀಡಾ ಕೋಟಾದಲ್ಲಿ ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ

Indian Railway Recruitment 2022: ಅಭ್ಯರ್ಥಿಯು ITI ಯೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡಾ ಅರ್ಹತೆಯನ್ನೂ ಹೊಂದಿರಬೇಕು.

Indian Railway Recruitment 2022: ಕ್ರೀಡಾ ಕೋಟಾದಲ್ಲಿ ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ
Indian Railway Recruitment 2022
TV9 Web
| Updated By: ಝಾಹಿರ್ ಯೂಸುಫ್|

Updated on: Feb 21, 2022 | 9:00 AM

Share

Indian Railway Recruitment 2022: ಭಾರತೀಯ ರೈಲ್ವೇ ಇಲಾಖೆಯ ಆಗ್ನೇಯ ಕೇಂದ್ರ ರೈಲ್ವೇ (SECR) ಅಡಿಯಲ್ಲಿ ಗ್ರೂಪ್ C ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ secr.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯನ್ನು ಕ್ರೀಡಾ ಕೋಟಾದ ಅಡಿಯಲ್ಲಿ ಮಾಡಲಾಗುತ್ತಿರುವುದು ವಿಶೇಷ.

Indian Railway Recruitment 2022ಗಾಗಿ ಹುದ್ದೆಗಳ ವಿವರಗಳು: ಗುಂಪು C ಹುದ್ದೆಗಳ ಸಂಖ್ಯೆ – 21 ಹುದ್ದೆಗಳು

Indian Railway Recruitment 2022ಗಾಗಿ ಅರ್ಹತಾ ಮಾನದಂಡಗಳು: ಹಂತ 2/3: ಅಭ್ಯರ್ಥಿಯು ITI ಯೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡಾ ಅರ್ಹತೆಯನ್ನೂ ಹೊಂದಿರಬೇಕು. ಹಂತ 4: ವಿಜ್ಞಾನ ವಿಷಯದೊಂದಿಗೆ 12 ನೇ ತರಗತಿ ಪಾಸಾಗಿರಬೇಕು. ಅಲ್ಲದೆ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡಾ ಅರ್ಹತೆಯನ್ನು ಹೊಂದಿರಬೇಕು. ಹಂತ-5: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಅಲ್ಲದೆ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡಾ ಅರ್ಹತೆಯನ್ನೂ ಕೂಡ ಹೊಂದಿರಬೇಕು.

Indian Railway Recruitment 2022ಗಾಗಿ ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ – ರೂ. 500 /- SC/ ST ಸಮುದಾಯ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (BBC) – ರೂ. 150/-

Indian Railway Recruitment 2022 ರ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 5 ಮಾರ್ಚ್ 2022

Indian Railway Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು https://nitplrrc.com/RRC_BILASPUR_SPORTS .

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. https://nitplrrc.com/RRC_BILASPUR_SPORTS2022/Template .

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್