Tumkur: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಪಟೂರಿನಲ್ಲಿ ವಿದ್ಯುತ್ ವ್ಯತ್ಯಯ
ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನ ವ್ಯಾಸಂಗ ವೇತನ ಅಥವಾ ಫೆಲೋಶಿಪ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆ 28 ರವರೆಗೆ ವಿಸ್ತರಿಸಲಾಗಿದೆ.
ತುಮಕೂರು: ತುಮಕೂರು ನಗರದ (tumkur) ಮತ್ತು ಗ್ರಾಮಾಂತರ, ಮಧುಗಿರಿ ಹಾಗೂ ಕೊರಟಗೆರೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ, ಮಿನಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಗೌರವ ಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ವೆಬ್ ಸೈಟ್ anganwadirecruit.kar.nic.in ಮೂಲಕ ಮಾರ್ಚ್ 19 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಗಳಿರುವ ಗ್ರಾಮಗಳ ವಿವರ ನಿಗದಿಪಡಿಸಿದ ಹುದ್ದೆಗಳ ಸಂಖ್ಯೆ ಮತ್ತು ಇತರೆ ಎಲ್ಲ ಮಾಹಿತಿಯನ್ನು ವೆಬ್ ಸೈಟ್ ಮೂಲಕ ಪಡೆಯಬಹುದು. ಮಾಹಿತಿಗೆ ಸೂಚಿಸಿರುವ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನ ಸಂಪರ್ಕಿಸಬಹುದು (anganwadi worker).
ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ: ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನ ವ್ಯಾಸಂಗ ವೇತನ ಅಥವಾ ಫೆಲೋಶಿಪ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆ 28 ರವರೆಗೆ ವಿಸ್ತರಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಹೆಚ್ ಡಿ ಅಧ್ಯಯನದಲ್ಲಿ ತೊಡಗಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ 1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆನ್ ಲೈನ್ ಅರ್ಜಿ ಪ್ರತಿ ಮತ್ತು ಧೃಡೀಕೃತ ದಾಖಲೆಗಳನ್ನು ಮಾರ್ಚ್ 3 ಒಳಗಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು. ಮಾಹಿತಿಗೆ ವೆಬ್ ಸೈಟ್ http://www.bcwd.Karnataka.gov.in ಅಥವಾ ಸಹಾಯವಾಣಿ 080-8050770004 ಸಂಪರ್ಕಿಸಬಹುದು.
ವಿದ್ಯುತ್ ವ್ಯತ್ಯಯ: ತುಮಕೂರು ಜಿಲ್ಲೆ ತಿಪಟೂರು ಬೆಸ್ಕಾಂ ಉಪವಿಭಾಗ ವ್ಯಾಪ್ತಿಯ 110 11 ಕೆವಿ ನೊಣವಿನಕೆರೆ ಉಪಸ್ಥಾವರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಫೆಬ್ರವರಿ ಇಂದು ಬೆಳಿಗ್ಗೆ 10 ರಿಂದ ಸಂಜೆ 6 ರವೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತಾಲೂಕಿನ ಕೈದಾಳ, ನಲ್ಲಿಕೆರೆ, ಗುಂಗುರಮಳೆ, ಆಲ್ಬೂರು, ಬರುಡೇಘಟ್ಟ, ನೊಣವಿನಕೆರೆ, ಮಸವನಘಟ್ಟ, ರಾಯಶೆಟ್ಟಿಹಳ್ಳಿ, ಕರೀಕೆರೆ, ಸೂಗೂರು, ವೆಂಗಟಾಪುರ, ಕೋಡಿಹಳ್ಳಿ ಪೂರಕಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಬೆಸ್ಕಾಂನೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. -ಮಹೇಶ್, ಟಿವಿ9, ತುಮಕೂರು
Also Read: Sugarcane festival: ಆಲೆಮನೆ ಹಬ್ಬದ ಸವಿಯಲ್ಲಿ ಮಿಂದೆದ್ದ ಸ್ಥಳೀಯರು, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್!
Also Read: Guru: ಸಾವಿರಾರು ಸೂರ್ಯ-ಚಂದ್ರರು ಹುಟ್ಟಿ ಬಂದರೂ ಹೃದಯದೊಳಗಿನ ಅಜ್ಞಾನದ ಕತ್ತಲೆ ಹೋಗಲಾಡಿಸಲು ಸಾಧ್ಯವಿಲ್ಲ!
Published On - 8:23 am, Tue, 22 February 22