AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sugarcane festival: ಆಲೆಮನೆ ಹಬ್ಬದ ಸವಿಯಲ್ಲಿ ಮಿಂದೆದ್ದ ಸ್ಥಳೀಯರು, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್!

Alemane habba: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೊಡ ಗ್ರಾಮದಲ್ಲಿ 5ನೇ ವರ್ಷದ ಈ ಆಲೆಮನೆ ಹಬ್ಬದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿ ರುಚಿ ರುಚಿಯಾದ ಕಬ್ಬಿನ ನೊರೆ ಹಾಲನ್ನು ಸವಿದರು. ಅಂದಾಜು ಎಂಟು ಟನ್ ಕಬ್ಬನ್ನು ನುರಿಸಲಾಗಿದೆ‌.

Sugarcane festival: ಆಲೆಮನೆ ಹಬ್ಬದ ಸವಿಯಲ್ಲಿ ಮಿಂದೆದ್ದ ಸ್ಥಳೀಯರು, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್!
ಆಲೆಮನೆ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಜನ, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್!
TV9 Web
| Edited By: |

Updated on: Feb 22, 2022 | 6:41 AM

Share

ಜಾತ್ರೆ, ರಥೋತ್ಸವ, ಗಣೇಶೋತ್ಸವ ಹೀಗೆ ವಿಶೇಷ ಆಚರಣೆಯಲ್ಲಿ ಸಾವಿರಾರು ಜನ ಸೇರುವುದನ್ನು ನಾವು ನೋಡಿದ್ದೆವೆ. ಆದರೆ ಇಲ್ಲಿ ಆಧುನಿಕ ಯುಗದ ಜಂಜಾಟದಲ್ಲಿ ಬ್ಯುಸಿಯಾಗಿರುವ ಜನರಿಗೆ, ನಮ್ಮ ಪ್ರಾಚೀನ ಪರಂಪರೆಯನ್ನು ಸಾರುವ ಹಬ್ಬವನ್ನ (Alemane habba) ಸಹಸ್ರಾರು ಜನ ಸೇರಿ ಆಚರಿಸಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ (sugarcane festival)… ಹಾಗಾದ್ರೆ ಈ ಆಚರಣೆ ಯಾವುದು…? ಎಲ್ಲಿ ಇದನ್ನು ಆಚರಿಸ್ತಾರೆ ಅನ್ನೋ ಕುತೂಹಲ ಇದೆಯಾ..? ಹಾಗಾದ್ರೆ ಈ ಸ್ಟೋರಿ ಓದಿ

ಆಲೆಮನೆ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಜನ, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್ ಹೌದು ಹೀಗೆ ರುಚಿ ರುಚಿಯಾದ ತಾಜಾ ಕಬ್ಬಿನ ಹಾಲಿನ ರುಚಿ ಸವಿಯಲು ಸರತಿ ಸಾಲಿನಲ್ಲಿ ನಿಂತಿರುವ ಜನ, ಮತ್ತೊಂದು ಕಡೆ ಮಿರ್ಚಿ ಮಂಡಕ್ಕಿ, ಪಾಪಡೆ ಕೈಯಲ್ಲಿ ಹಿಡಿದು ಗೆಳೆಯರೊಂದು ತಮಾಷೆ ಮಾತುಗಳನ್ನ ಆಡುತ್ತಾ ಸವಿ ಸವಿಯುತ್ತಿರು ಗುಂಪು..

ಮಾಗೊಡ ಗ್ರಾಮದಲ್ಲಿ 5ನೇ ವರ್ಷದ ಆಲೆಮನೆ:

Alemane habba sugarcane festival at magod yellapur taluk attracts thousands of localites 1

5ನೇ ವರ್ಷದ ಈ ಆಲೆಮನೆ ಹಬ್ಬದಲ್ಲಿ ಅಂದಾಜು ಎಂಟು ಟನ್ ಕಬ್ಬನ್ನು ನುರಿಸಲಾಗಿದೆ‌.

ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೊಡ ಗ್ರಾಮದಲ್ಲಿ. ಹೌದು ಇತ್ತಿಚಿನ ದಿನಗಳಲ್ಲಿ ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಹಳೆ ಪದ್ಧತಿಗಳು ಕ್ರಮೇಣವಾಗಿ ನಶಿಸಿಹೊಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕಬ್ಬಿನ ಆಲೆಮನೆಗಳು ಕಡೆಮೆ ಆಗುತ್ತಿವೆ. ಹೀಗಾಗಿ ಮಾಗೊಡ ಗ್ರಾಮಸ್ಥರು ಕಳೆದ ಐದು ವರ್ಷ ದಿಂದ ಆಲೆಮನೆ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ.

5ನೇ ವರ್ಷದ ಈ ಆಲೆಮನೆ ಹಬ್ಬದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿ ರುಚಿ ರುಚಿಯಾದ ಕಬ್ಬಿನ ನೊರೆ ಹಾಲನ್ನು ಸವಿದರು. ಅಂದಾಜು ಎಂಟು ಟನ್ ಕಬ್ಬನ್ನು ನುರಿಸಲಾಗಿದೆ‌. ಜೊತೆಗೆ ಮಿರ್ಚಿ, ಮಂಡಕ್ಕಿ, ಕಾರ, ಪಾಪಡೆ ಹೀಗೆ ಹಲವು ಬಗೆ ತಿಂಡಿಗಳನ್ನು ಬಂದ ಜನ ಸವಿದಿದ್ದಾರೆ. ಆಲೆಮನೆ ಹಬ್ಬದ ಸಂಘಟನೆ ಈ ಹಬ್ಬ ಆಯೋಜನೆ ಮಾಡಿದ್ದು ಅತ್ಯಂತ ಅಚ್ಚುಕಟ್ಟಾಗಿ ಆಚರಣೆ ಮಾಡಿದ್ದಾರೆ.

ಕಬ್ಬಿನಿಂದ ತಯಾರಾದ ತೋಡದೇವು ಬೆಲ್ಲ, ಕಾಕಂಬಿ ಬೆಲ್ಲ, ಜೋನಿ ಬೆಲ್ಲ ಹೀಗೆ ಹಲವು ರೀತಿಯ ಆರೋಗ್ಯಕರ ಬೆಲ್ಲವನ್ನ ಇಲ್ಲಿ ರೈತರೆ ನೇರವಾಗಿ ಮಾರಾಟ ಮಾಡುತ್ತಿದ್ದರು.. ಹಬ್ಬದ ಜೊತೆ ಜೊತೆಗೆ ಗೋ ಪಾಲನೆ ಪೋಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನ ಕೂಡ ಸಂಯೋಜನೆ ಮಾಡಿದ್ದರು.

ಒಟ್ಟಾರೆ ಬೆಲ್ಲದ ಸವಿಯನ್ನ ಬಲ್ಲವನೇ ಬಲ್ಲ ಎನ್ನುವಂತೆ. ಬೆಲ್ಲದ ರುಚಿಯಷ್ಟೇ ಆಥಿತ್ಯ ನೀಡಿ ಎಲ್ಲರನ್ನೂ ಒಗ್ಗೂಡಿಸಿ ಹಬ್ಬವನ್ನ ಜಾತ್ರೆ ಅಂತೆ ಈ ಗ್ರಾಮಸ್ಥರು ಮಾಡುತ್ತಿದ್ದಾರೆ.. ನೀವು ರುಚಿ ರುಚಿಯಾದ ಕಬ್ಬಿನ ನೋರೆ ಹಾಲನ್ನ, ಜೋನಿ ಬೆಲ್ಲದ ಸವಿಯನ್ನ ಸವಿಬೇಕಾದರೆ, ಮಾಗೊಡ ಗ್ರಾಮದ ಆಲೆಮನೆ ಹಬ್ಬಕ್ಕೆ ಒಮ್ಮೆ ಭೇಟಿ ಕೋಡಿ -ವಿನಾಯಕ ಬಡಿಗೇರ ಟಿವಿ9 ಕಾರವಾರ