Closing Bell: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 22ನೇ ತಾರೀಕಿನ ಮಂಗಳವಾರದಂದು ಏರಿಕೆ ದಾಖಲಿಸಿದೆ. ಆ ಬಗ್ಗೆ ವಿವರ ಇಲ್ಲಿದೆ.

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 22ನೇ ತಾರೀಕಿನ ಮಂಗಳವಾರದಂದು ಏರಿಕೆ ದಾಖಲಿಸಿದೆ. ಇಂದಿನ ವಹಿವಾಟು ಏರಿಳಿತಗಳಿಂದ ಕೂಡಿತ್ತು. ಆದರೂ ವಾಹನ, ಬ್ಯಾಂಕ್, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಸ್ಟಾಕ್ಗಳು ಈ ಏರಿಕೆಯಲ್ಲಿ ಪ್ರಮುಖವಾಗಿ ಪಾಲ್ಗೊಂಡವು. ಮಂಗಳವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 696.81 ಪಾಯಿಂಟ್ಸ್ ಅಥವಾ ಶೇ 1.22ರಷ್ಟು ಏರಿಕೆಯನ್ನು ದಾಖಲಿಸಿ, 57,989.30 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿತು. ಇನ್ನು ನಿಫ್ಟಿ ಸೂಚ್ಯಂಕವು 197.90 ಪಾಯಿಂಟ್ಸ್ ಅಥವಾ ಶೇ 1.16ರಷ್ಟು ಮೇಲೇರಿ, 17,315.50 ಪಾಯಿಂಟ್ಸ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿತು.
ಇಂದಿನ ವಹಿವಾಟಿನಲ್ಲಿ 1573 ಕಂಪೆನಿ ಷೇರುಗಳು ಏರಿಕೆಯನ್ನು ಕಂಡರೆ, 1745 ಕಂಪೆನಿ ಷೇರುಗಳು ಇಳಿಕೆ ದಾಖಲಿಸಿದವು. 99 ಕಂಪೆನಿ ಸ್ಟಾಕ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಲಯವಾರು ಗಮನಿಸುವುದಾದರೆ, ಮಾಹಿತಿ ತಂತ್ರಜ್ಞಾನ, ವಾಹನ, ಬ್ಯಾಂಕ್, ತೈಲ ಹಾಗೂ ಅನಿಲ ಸೂಚ್ಯಂಕಗಳು ತಲಾ ಶೇ 1ರಷ್ಟು ಹೆಚ್ಚಳವಾದವು. ಇನ್ನು ರಿಯಾಲ್ಟಿ ಸೂಚ್ಯಂಕ ಶೇ 1ರಷ್ಟು ಕುಸಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಟೆಕ್ ಮಹೀಂದ್ರಾ ಶೇ 3.95 ಬಿಪಿಸಿಎಲ್ ಶೇ 3.14 ಟಾಟಾ ಮೋಟಾರ್ಸ್ ಶೇ 2.90 ರಿಲಯನ್ಸ್ ಶೇ 2.58 ಐಒಸಿ ಶೇ 2.25
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಹಿಂದೂಸ್ತಾನ್ ಯುನಿಲಿವರ್ ಶೇ -2.81 ನೆಸ್ಟ್ಲೆ ಶೇ -2.50 ಬ್ರಿಟಾನಿಯಾ ಶೇ -2.44 ಸಿಪ್ಲಾ ಶೇ -1.69 ಡಿವೀಸ್ ಲ್ಯಾಬ್ಸ್ ಶೇ -0.17
ಇದನ್ನೂ ಓದಿ: Paytm: ಪೇಟಿಎಂನ ಶೇ 75ರಷ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ನಾಲ್ಕು ತಿಂಗಳಲ್ಲಿ ಉಡೀಸ್