ಹಿಂದೂತ್ವ ಬಿಜೆಪಿಯ ಸೊತ್ತಲ್ಲ ಎಂದ ಪಕ್ಷದಿಂದ ದೂರವಾಗಿರುವ ಮಾಜಿ ಶಾಸಕ ಕೆಎಸ್ ಈಶ್ವರಪ್ಪ
ಕುಂಭಮೇಳಕ್ಕೆ ಹೋಗಿದ್ರಾ ಸರ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಕೇವಲ ತಾನು ಮಾತ್ರ ಅಲ್ಲ, ತನ್ನ ಪತ್ನಿ, ಮಗ ಮತ್ತು ಸೊಸೆ, ನಾಲ್ವರು ಹೆಣ್ಣುಮಕ್ಕಳು, ನಾಲ್ವರು ಅಳಿಯಂದಿರು ಮತ್ತು ಎಂಟು ಮೊಮ್ಮಕ್ಕಳೊಂದಿಗೆ ಮಹಾಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿದ್ದಾಗಿ ಹೇಳಿದರು. ಇದು ಪದೇಪದೆ ಸಿಗುವ ಅವಕಾಶವಲ್ಲ, ಬಹಳ ವರ್ಷಗಳ ನಂತರ ಸಿಗುವ ಒಮ್ಮೆ ಅವಕಾಶ ಎಂದು ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿ, ಮಾರ್ಚ್ 1: ಬಿಜೆಪಿಯಿಂದ ದೂರವಾಗಿರುವ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಹಿಂದೂತ್ವ (Hindutva) ಬಿಜೆಪಿಯ ಸೊತ್ತಲ್ಲ, ಬೇರೆ ಬೇರೆ ಪಕ್ಷಗಳ ಅನೇಕ ನಾಯಕರು ಭಾರತೀಯ ಸಂಸ್ಕೃತಿಯನ್ನು ಕಾಪಾಡುತತ್ತಿದ್ದಾರೆ, ಅವರಲ್ಲೊಬ್ಬರು ಡಿಕೆ ಶಿವಕುಮಾರ್ ಎಂದು ಹೇಳಿದರು. ಗಾಂಧಿಯ ಬಗ್ಗೆ ಮಾತಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ಬಳಿಕ ಗೋಹತ್ಯೆ ನಿಷೇಧ ಕಾನೂನು ತರಬೇಕು ಅಂತ ಅವರು ಹೇಳಿದ್ದರು, ಅವರು ಸಾಯುವಾಗ ಹೇ ರಾಮ್ ಎಂದು ಚೀತ್ಕರಿಸಿದರು, ಅವರ ಸಮಾಧಿ ಮೇಲೆ ಹೇ ಅಲ್ಲಾಹ್ ಅಥವಾ ಹೇ ಏಸು ಅಂತ ಬರೆದಿಲ್ಲ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೋದೇ ಹಿಂದೂ ಧರ್ಮ, ಹಿಂದೂಗಳು ಯಾವ ದೇವರಿಗೆ ನಮಸ್ಕರಿಸಿದರೂ ಅದು ಸಲ್ಲೋದು ಒಬ್ಬನಿಗೆ ಮಾತ್ರ ಎಂದು ಈಶ್ವರಪ್ಪ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನನ್ನ ಭಿಕ್ಷೆಯಿಂದ ವಿಜಯೇಂದ್ರ ಅಸೆಂಬ್ಲಿ ಚುನಾವಣೆ ಗೆದ್ದಿದ್ದು ಅಂತ ಶಿವಕುಮಾರ್ ಹೇಳಿದ್ದಾರೆ: ಈಶ್ವರಪ್ಪ