ಕಲಬುರಗಿಯ ಆಳಂದ್ ಪಟ್ಟಣದಲ್ಲಿ ಮಹಾರಾಷ್ಟ್ರದ ಬಸ್ ತಡೆದು ಕಪ್ಪುಮಸಿ ಬಳಿದ ಕನ್ನಡ ಸಂಘಟನೆ ಕಾರ್ಯಕರ್ತರು
ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸಾರಿಗೆ ಇಲಾಖೆ ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತುಕತೆ ನಡೆದಿದ್ದು ವಾಹನ ಮತ್ತು ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಬೇಕು, ಬಸ್ಸುಗಳನ್ನು ನಿಲ್ಲಿಸಿ ಪುಂಡಾಟಿಕೆ ನಡೆಸದಂತೆ ಜಾಗ್ರತೆವಹಿಸಬೇಕೆಂದು ನಿರ್ಣಯಿಸಲಾಗಿದೆ. ಯಾರೋ ಮಾಡಿದ ತಪ್ಪಿಗೆ ಎರಡೂ ರಾಜ್ಯಗಳ ಅಮಾಯಕ ಪ್ರಯಾಣಿಕರು ತೊಂದರೆ ಎದುರಿಸುವ ಪರಸ್ಥಿತಿ ನಿರ್ಮಾಣವಾಗುತ್ತಿದೆ.
ಕಲಬುರಗಿ, ಮಾರ್ಚ್ 01: ಶಿವಸೇನೆ ಮತ್ತು ಎಂಇಎಸ್ ಪುಂಡರು ಮಹಾರಾಷ್ಟ್ರದಲ್ಲಿ ಕರ್ನಾಟಕದ ಸರ್ಕಾರೀ ಬಸ್ಸುಗಳಿಗೆ ಮಾಡುತ್ತಿರುವುದನ್ನು ಕನ್ನಡ ಪರ ಸಂಘಟನೆನಗಳ ಸದಸ್ಯರು ನೆರೆರಾಜ್ಯದ ಬಸ್ಸುಗಳಿಗೆ ಕರ್ನಾಟಕದಲ್ಲಿ ಮಾಡುತ್ತಿದ್ದಾರೆ. ಜಿಲ್ಲೆಯ ಆಳಂದ್ ಪಟ್ಟಣದ ಚೆಕ್ಪೋಸ್ಟ್ ಒಂದರ ಬಳಿ ಮಹಾರಾಷ್ಟ್ರ ಬಸ್ಸನ್ನು ತಡೆದ ಕನ್ನಡ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರಲ್ಲ್ಲದೆ ಬಸ್ಸಿನ ಮೇಲೆ ಎಲ್ಲೆಲ್ಲಿ ಮರಾಠಿ ಅಕ್ಷರಗಳು ಕಾಣುತ್ತವೆಯೋ ಅಲ್ಲೆಲ್ಲ ಕಪ್ಪು ಮಸಿ ಬಳಿದರು. ಒಬ್ಬ ಕಾರ್ಯಕರ್ತ ಬಸ್ಸನ್ನು ಹತ್ತಿ ಕನ್ನಡ ಬಾವುಟವನ್ನು ಬೀಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಂಡಕ್ಟರ್ ಮೇಲೆ ಹಲ್ಲೆ, ನಾಲ್ವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ: ಮಾರ್ಟಿನ್ ಮಾಬನಿಯಾಂಗ್
Latest Videos