Alia Bhatt: ಮುಂದೂಡಲ್ಪಟ್ಟಿತಾ ರಣಬೀರ್- ಆಲಿಯಾ ಕಲ್ಯಾಣ? ಮದುವೆಯ ಬಗ್ಗೆ ಹಬ್ಬಿದೆ ಹಲವು ಗುಸುಗುಸು

Ranbir Kapoor | Alia- Ranbir wedding: ಬಾಲಿವುಡ್​ನಲ್ಲಿ ಸದ್ಯ ಸಖತ್ ಸುದ್ದಿಯಲ್ಲಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಲ್ಯಾಣದ ಬಗ್ಗೆ ದಿನಕ್ಕೊಂದು ಗುಸುಗುಸು ಕೇಳಿಬರುತ್ತಿದೆ. ಈಗಿನ ವರದಿಗಳ ಪ್ರಕಾರ ಆಲಿಯಾ- ರಣಬೀರ್ ವಿವಾಹದ ಸ್ಥಳ ಬದಲಾಗಿದೆ. ಆದರೆ ದಿನಾಂಕದ ಬಗ್ಗೆ ಗೊಂದಲ ಮುಂದುವರೆದಿದೆ.

Alia Bhatt: ಮುಂದೂಡಲ್ಪಟ್ಟಿತಾ ರಣಬೀರ್- ಆಲಿಯಾ ಕಲ್ಯಾಣ? ಮದುವೆಯ ಬಗ್ಗೆ ಹಬ್ಬಿದೆ ಹಲವು ಗುಸುಗುಸು
ರಣಬೀರ್​ ಕಪೂರ್​, ಆಲಿಯಾ ಭಟ್
Follow us
TV9 Web
| Updated By: shivaprasad.hs

Updated on: Apr 12, 2022 | 3:05 PM

ಬಾಲಿವುಡ್​ನಲ್ಲಿ ಸದ್ಯ ರಣಬೀರ್ ಕಪೂರ್- ಆಲಿಯಾ ಭಟ್ ಕಲ್ಯಾಣದ್ದೇ ಸುದ್ದಿ. ಈ ತಾರಾ ಜೋಡಿ ಹಲವು ವರ್ಷಗಳ ಸುತ್ತಾಟದ ನಂತರ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅಭಿಮಾನಿಗಳಿಗೆ ಈ ಜೋಡಿಯ ಮೇಲೆ ಅಪಾರ ಅಭಿಮಾನ. ಹೀಗಾಗಿಯೇ ಅವರ ವಿವಾಹದ ಬಗ್ಗೆ ತೀವ್ರ ಕುತೂಹಲಗೊಂಡಿದ್ದಾರೆ. ಆದರೆ ಆಲಿಯಾ (Alia Bhatt)- ರಣಬೀರ್ (Ranbir Kapoor) ಮಾತ್ರ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಮದುವೆಯಾಗುತ್ತೇವೆ ಎಂದಷ್ಟೇ ಹೇಳಿ ಮೌನವಾಗಿಬಿಟ್ಟಿದ್ದಾರೆ. ಇದು ಹಲವು ಗಾಸಿಪ್​ಗಳು ಹಬ್ಬಲು ಕಾರಣವಾಗಿದೆ. ಆದರೆ ಈ ತಾರಾ ಜೋಡಿಯ ಕುಟುಂಬಸ್ಥರು ಮಾತ್ರ ಆಗೊಂದು ಈಗೊಂದು ಮಾಹಿತಿಯನ್ನು ರಿವೀಲ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಆಲಿಯಾ ಅವರ ಅಂಕಲ್ ರಾಬಿನ್ ಭಟ್ ವಿವಾಹದ ಬಗ್ಗೆ ಮಾತನಾಡಿ ಏಪ್ರಿಲ್ 14ರಂದು ವಿವಾಹ ನಡೆಯಲಿದೆ ಎಂದಿದ್ದರು. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು. ಇದಕ್ಕೆ ಪೂರಕವೆಂಬಂತೆ ಆಲಿಯಾ ಹಾಗೂ ರಣಬೀರ್ ನಿವಾಸಗಳು ಸಿಂಗಾರಗೊಳ್ಳಲು ಆರಂಭವಾಗಿತ್ತು. ರಣಬೀರ್ ನಿವಾಸದಲ್ಲಿ ಕಲ್ಯಾಣ ನಿಶ್ಚಯವಾಗಿತ್ತು. ಆದರೆ ಇತ್ತೀಚಿಗೆ ಮದುವೆಯ ದಿನಾಂಕ ಹಾಗೂ ಸ್ಥಳದ ಬಗ್ಗೆ ಹಲವು ಅನುಮಾನಗಳು ಹುಟ್ಟುಕೊಂಡಿದ್ದು, ಈ ಬಗ್ಗೆ ಹಲವು ಮಾಹಿತಿಗಳು ರಿವೀಲ್ ಆಗಿವೆ.

ಆಲಿಯಾ- ರಣಬೀರ್ ವಿವಾಹ ಮುಂದೂಡಲ್ಪಟ್ಟಿತಾ?

ಆಜ್​ತಕ್ ತನ್ನ ವರದಿಯಲ್ಲಿ ಪ್ರಕಾರ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ವಿವಾಹ ಮುಂದೂಡಲ್ಪಟ್ಟಿದೆ. ಭದ್ರತೆಯ ಕಾರಣಗಳಿಂದ ಮದುವೆಯನ್ನು ಮುಂದೂಡಲಾಗಿದೆ ಎಂದು ಆಲಿಯಾ ಸೋದರ ರಾಹುಲ್ ಭಟ್ ಹೇಳಿದ್ದಾಗಿ ವರದಿ ಮಾಡಿತ್ತು. ಇದು ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಹಿಂದೂಸ್ತಾನ್ ಟೈಮ್ಸ್ ರಾಹುಲ್ ಭಟ್ ಅವರಲ್ಲಿ ಈ ಪ್ರಶ್ನೆ ಕೇಳಿದೆ. ಆಗ ಅವರು ಬೇರೆಯದೇ ಉತ್ತರ ನೀಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್​​ಗೆ ರಾಹುಲ್ ಭಟ್ ನೀಡಿರುವ ಮಾಹಿತಿಯಂತೆ, ವಿವಾಹ ನಿಗದಿಯಂತೆ ನಡೆಯಲಿದೆ. ಆದರೆ ರಣಬೀರ್ ಮನೆಯಲ್ಲಿ ನಡೆಯಬೇಕಿದ್ದ ವಿವಾಹವನ್ನು ತಾಜ್ ಹೋಟೆಲ್​ನಲ್ಲಿ ಅಥವಾ ಕೊಲಾಬಾದಲ್ಲಿ ನಡೆಸುವ ಬಗ್ಗೆ ಚಿಂತಿಸಲಾಗಿದೆ. ಭದ್ರತೆಯ ಕಾರಣದಿಂದ ಹಾಗೂ ಮದುವೆಯ ದಿನಾಂಕ ಲೀಕ್ ಆಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಅಲ್ಲದೇ ಈ ಮೊದಲು ತಾವು ವಿವಾಹದ ದಿನಾಂಕ ಬದಲಾದ ಬಗ್ಗೆ ಹೇಳಿಯೇ ಇರಲಿಲ್ಲ. ಕೇವಲ ಸ್ಥಳ ಬದಲಾವಣೆಯ ಬಗ್ಗೆ ಮಾತನಾಡಿದ್ದೆ ಎಂದೂ ಸ್ಪಷ್ಟನೆ ನೀಡಿದ್ದಾರೆ ರಾಹುಲ್ ಭಟ್.

ಆದರೆ ರಾಹುಲ್ ಭಟ್ ಮದುವೆಯ ದಿನಾಂಕವನ್ನು ರಿವೀಲ್ ಮಾಡಲು ನಿರಾಕರಿಸಿದ್ದಾರೆ. ಆ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ ಎಂದಿರುವ ಅವರು, ಏಪ್ರಿಲ್ 20ರೊಳಗೆ ಮದುವೆ ನಡೆಯುವುದು ಮಾತ್ರ ನಿಜ ಎಂದಿದ್ದಾರೆ. ಮದುವೆಯ ಬಗ್ಗೆ ಆಲಿಯಾ- ರಣಬೀರ್ ಅವರೇ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದೂ ನುಡಿದಿದ್ದಾರೆ ರಾಹುಲ್ ಭಟ್.

ಇಷ್ಟೆಲ್ಲಾ ಮಾಹಿತಿ ನೀಡಿರುವ ರಾಹುಲ್ ಭಟ್, ಕುಟುಂಬಸ್ಥರು ತಮಗೆ ಮೊಬೈಲ್​ಅನ್ನು ಸ್ವಿಚ್ ಆಫ್ ಮಾಡಲು ಹೇಳಿದ್ದರು ಎಂದೂ ತಿಳಿಸಿದ್ದಾರೆ. ಯಾವುದೇ ವಿಚಾರ ಲೀಕ್ ಆಗಬಾರದು ಎನ್ನುವ ಉದ್ದೇಶದಿಂದ ಹೀಗೆ ಹೇಳಿದ್ದರು. ಆದರೆ ತಾವು ಜಿಮ್ ಟ್ರೇನರ್ ಆಗಿರುವುದರಿಂದ ಫೋನ್ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ಅವರು. ತಮ್ಮಿಂದ ವಿವಾಹದ ಬಗ್ಗೆ ಯಾವುದೇ ವಿಚಾರ ಹೊರಹೋಗುವುದಿಲ್ಲ. ತಾನು ಗಟ್ಟಿಗ ಎಂದೂ ರಾಹುಲ್ ಹೇಳಿಕೊಂಡಿದ್ದಾರೆ. ಈ ಹಿಂದೆ ಡೇವಿಡ್ ಹೆಡ್ಲಿ ಪ್ರಕರಣದಲ್ಲಿ 30 ಗಂಟೆ ವಿಚಾರಣೆಗೆ ಒಳಗಾಗಿದ್ದೆ ಎಂದೂ ಹೇಳಿದ್ದಾರೆ ರಾಹುಲ್ ಭಟ್.

ಚಿತ್ರೀಕರಣದಲ್ಲಿ ಭಾಗಿಯಾಗಿರುವ ಆಲಿಯಾ:

ಆಲಿಯಾ ಭಟ್ ರಣಬೀರ್ ವಿವಾಹದ ಬಗ್ಗೆ ಗುಸುಗುಸು ಜೋರಾಗಿರುವಂತೆಯೇ ತಮ್ಮ ಬ್ಯುಸಿ ಶೆಡ್ಯೂಲ್ ಕಾರಣದಿಂದಾಗಿ ಆಲಿಯಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇಟೈಮ್ಸ್ ಫೋಟೋ ಪ್ರಕಟಿಸಿದ್ದು, ರಣವೀರ್ ಸಿಂಗ್ ಜತೆಗೆ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದ ಶೂಟಿಂಗ್​ನಲ್ಲಿ ಆಲಿಯಾ ಭಾಗಿಯಾಗಿದ್ದಾರೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಈ ವಿಚಾರಗಳು ಮದುವೆಯ ಬಗ್ಗೆ ಅಪ್ಡೇಟ್ ಸಿಗುತ್ತದೆ ಎಂದು ಕಾದಿರುವ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದು, ಈ ಎಲ್ಲದರ ಬಗ್ಗೆ ಅಧಿಕೃತ ಸ್ಪಷ್ಟನೆ ಯಾವಾಗ ಸಿಗಬಹುದು ಎಂದು ಕಾದಿದ್ದಾರೆ.

ಇದನ್ನೂ ಓದಿ:

‘ನಾವು ಎಲ್ಲವನ್ನು ಎದುರಿಸುತ್ತಾ ಸಾಗಬೇಕು’; ರಾಜ್​ ಪುಣ್ಯಸ್ಮರಣೆ ದಿನ ಶಿವಣ್ಣ ಮಾತು

ಕರ್ನಾಟಕದಲ್ಲಿ ‘ಕೆಜಿಎಫ್ ಚಾಪ್ಟರ್ 2′ ಅಬ್ಬರ​; ಅಬ್ಬಬ್ಬಾ ಮೊದಲ ದಿನ ಇಷ್ಟೊಂದು ಶೋ?

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ