ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆ ಯಾವ ವಿಷಯದ ಮೇಲೆ? ಇಂದಿನ ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆ ಯಾವ ವಿಷಯದ ಮೇಲೆ? ಇಂದಿನ ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

TV9 Web
| Updated By: ಸಾಧು ಶ್ರೀನಾಥ್​

Updated on:Apr 21, 2022 | 4:04 PM

Karnataka Assembly Elections 2023: ಕಳೆದೊಂದು ವರ್ಷದಿಂದ ಕೋಮು ಆಧಾರಿತ ರಾಜಕೀಯದ್ದೇ ಮೇಲುಗೈ ಆಗಿದೆ. ಆಡಳಿತಾರೂಢ ಬಿಜೆಪಿ​ (BJP) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ (Congress) ನೇರಾನೇರ ಕೋಮು ರಾಜಕೀಯದಲ್ಲಿ ಮುಳುಗಿದೆ. ಅದಕ್ಕೆ ಇಂಬು ಕೊಡುವಂತೆ ರಾಜ್ಯದ ಜನತೆಯೂ ಸಹ ಕೋಮು ಆಧರಿತವಾಗಿ ತಮ್ಮ ಇರುವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಹಾಗಾಗಿ ನಿಜಕ್ಕೂ ಚುನಾವಣೆ ಕಾವೇರಿದೆ.

ಕರ್ನಾಟಕ ಬಹುತೇಕ ಚುನಾವಣಾ ಮೂಡ್​ ಗೆ ಶಿಫ್ಟ್​ ಆಗಿದೆ. ಪ್ರಮುಖ ಪಕ್ಷಗಳ ನಾಯಕರು ಅದಾಗಲೇ ಚುನಾವಣಾ ರಣಕಹಳೆ ಮೊಳಗಿದ್ದಾರೆ. ಪ್ರಗತಿಯನ್ನು ಪಕ್ಕಕ್ಕಿಟ್ಟು, ಅನ್ಯ ವಿಷಯಗಳ ಬಗ್ಗೆ, ವೈಯಕ್ತಿಕ ತಳ ಮಟ್ಟದ ರಾಜಕೀಯ ಢಾಳಾಗಿ ಕಂಡುಬರುತ್ತಿದೆ. ಜೊತೆಗೆ ಭ್ರಷ್ಟಾಚಾರದ ಆರೋಪವೂ ತಳುಕು ಹಾಕಿಕೊಂಡಿದೆ. ಭ್ರಷ್ಟಾಚಾರ ಮತ್ತು ಕೋಮು ರಾಜಕೀಯ ಮುನ್ನೆಲೆಗೆ ಬಂದುಬಿಟ್ಟಿದೆ. ಅದೇನೇ ಇದ್ದರೂ ಮುಂದಿನ ವರ್ಷ 2023 ರ ಏಪ್ರಿಲ್-ಮೇನಲ್ಲಿಯೇ ರಾಜ್ಯ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವುದು (Karnataka Assembly Elections 2023). ಈ ಮಧ್ಯೆ, ಕಳೆದೊಂದು ವರ್ಷದಿಂದ ಕೋಮು ಆಧಾರಿತ ರಾಜಕೀಯದ್ದೇ ಮೇಲುಗೈ ಆಗಿದೆ. ಆಡಳಿತಾರೂಢ ಬಿಜೆಪಿ​ (BJP) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ (Congress) ನೇರಾನೇರ ಕೋಮು ರಾಜಕೀಯದಲ್ಲಿ ಮುಳುಗಿದೆ. ಅದಕ್ಕೆ ಇಂಬು ಕೊಡುವಂತೆ ರಾಜ್ಯದ ಜನತೆಯೂ ಸಹ ಕೋಮು ಆಧರಿತವಾಗಿ ತಮ್ಮ ಇರುವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಹಾಗಾಗಿ ನಿಜಕ್ಕೂ ಚುನಾವಣೆ ಕಾವೇರಿದೆ.

ಭ್ರಷ್ಟಾಚಾರ ಅಥವಾ ಮತೀಯ ಧ್ರುವೀಕರಣ – ಈ ಎರಡು ವಿಚಾರಗಳಲ್ಲಿ 2023 ನೇ ವಿಧಾನಸಭಾ ಚುನಾವಣೆಯಲ್ಲಿ ಯಾವುದು ನಿರ್ಣಾಯಕವಾಗಬಹುದು? ಈ ಕುರಿತು ಇಂದಿನ ಡಿಜಿಟಲ್​ ಲೈವ್​ನಲ್ಲಿ ಚರ್ಚೆ ನಡೆಯಲಿದೆ. ಆ್ಯಂಕರ್​ ಚಂದ್ರ ಮೋಹನ್ ಈ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. (TV9 Kannada Digital Live)

ಇದನ್ನೂ ವೀಕ್ಷಿಸಿ:
ಹಳೇ ಹುಬ್ಭಳ್ಳಿಯಲ್ಲಿ ಕೋಮುಗಲಭೆ; ಕಾಂಗ್ರೆಸ್​ ನಾಯಕರ ಹಳೆಯ ವರಸೆ! ಇದು ಎಷ್ಟು ಸಮಂಜಸ? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಇದನ್ನೂ ವೀಕ್ಷಿಸಿ:
Karnataka Congress: ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂ-ಮುಸ್ಲಿಂ ಧ್ವನಿ ಕಳೆದುಕೊಂಡಿದ್ದೇಕೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚೆ

Published on: Apr 21, 2022 03:44 PM