Health Tips: ಪದೇ ಪದೇ ಆತಂಕಕ್ಕೆ ಒಳಗಾಗುತ್ತೀರಾ? ಅದರಿಂದ ಹೊರಬರೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
Mental Health: ಆತಂಕ ಎಲ್ಲರಿಗೂ ಸಾಮಾನ್ಯ. ಆದರೆ ಅದನ್ನು ಮೆಟ್ಟಿ ನಿಲ್ಲುವುದು ಹೇಗೆ? ಈ ಬಗ್ಗೆ ವಿವರಿಸಿದ್ದಾರೆ ಮನೋ ವೈದ್ಯೆ ಡಾ.ಸೌಜನ್ಯ ವಸಿಷ್ಠ.
ಮನುಷ್ಯನಲ್ಲಿ ಆತಂಕ (Anxiety) ಇರೋದು ತೀರಾ ಸಾಮಾನ್ಯ. ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುತ್ತಿರುತ್ತದೆ. ಇವುಗಳಲ್ಲಿ ಕೆಲವೊಂದು ನಮ್ಮಲ್ಲಿ ಆತಂಕವನ್ನು ಸೃಷ್ಟಿಸುತ್ತವೆ. ಆತಂಕದಲ್ಲಿ ಇದ್ದಾಗ ಮುಖ ಸಪ್ಪೆಯಾಗಿರುತ್ತದೆ. ಚಟುವಟಿಕೆ ಕಡಿಮೆಯಾಗುತ್ತದೆ. ಆದರೆ ಅದನ್ನು ಮೆಟ್ಟಿ ನಿಲ್ಲೋದು ಹೇಗೆ ಎಂದು ಹಲವರಿಗೆ ಅನುಮಾನಗಳಿರಬಹುದು. ಈ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ (Dr Soujanya Vasista) ಅವರು ತಿಳಿಸಿಕೊಟ್ಟಿದ್ದಾರೆ. ನೀವು ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು.
ಡಾ.ಸೌಜನ್ಯ ಸಲಹೆ ಹೀಗೆ. ‘‘ನಿಮ್ಮ ಆತಂಕವನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ಸುಮಾರು ಒಂದು ಪ್ಯಾರಾದಲ್ಲಿ ಅದನ್ನು ಬರೆದ ನಂತರ ಈ ಆತಂಕದ ಹಿನ್ನೆಲೆಯೇನು ಎಂದು ಯೋಚಿಸಿ. ಆತಂಕ ಹುಟ್ಟಲು ಏನು ಕಾರಣ ಎಂಬುದರ ಬಗ್ಗೆಯೂ ಬರೆಯಿರಿ. ಆ ಆತಂಕ ಸುಖಾಸುಮ್ಮನೆಯೇ, ವಾಸ್ತವದಲ್ಲಿ ಏನಾಗಿರಬಹುದು ಎಂಬ ತಿಳುವಳಿಕೆಯೂ ನಿಮ್ಮಲ್ಲಿರುತ್ತದೆ. ಅದನ್ನೂ ಮತ್ತೊಂದು ಪ್ಯಾರಾದಲ್ಲಿ ಬರೆಯಿರಿ. ಹಾಗೆಯೇ ಈ ಆತಂಕದ ಪರಿಣಾಮಗಳೇನು? ಆ ಆತಂಕ ನಿಜವೇ ಅಥವಾ ನಮ್ಮ ಕಲ್ಪನೆಯೇ? ಈ ಬಗ್ಗೆಯೂ ಬರೆಯಿರಿ’’
ಈ ರೀತಿ ಬರೆದಾಗ ನಿಮ್ಮ ಸಮಸ್ಯೆಗಳಿಗೆ ನಿಮಗೇ ಪರಿಹಾರ ದೊರೆಯುತ್ತದೆ. ಆತಂಕ ಇರುವವರಿಗೆ ನಾಳೆಯ ಬಗ್ಗೆ ಹೆಚ್ಚಿನ ಆಲೋಚನೆಗಳಿರುತ್ತವೆ. ನಾಳೆಯ ಬಗ್ಗೆ ಅಥವಾ ಮುಂದಿನ ಬಗ್ಗೆ ಗೊಂದಲಗಳಿದ್ದಾಗ ಹೀಗಾಗಬಹುದು. ಈ ವಿಧಾನದಿಂದ ಅದನ್ನು ಸರಳವಾಗಿ ಪರಿಹರಿಸಬಹುದು ಎನ್ನುತ್ತಾರೆ ಡಾ.ಸೌಜನ್ಯ ವಸಿಷ್ಠ.
ಇದನ್ನೂ ಓದಿ: ಬೇರೆಯವರ ಬಗ್ಗೆ ಸುಖಾಸುಮ್ಮನೆ ಒಂದು ಅಭಿಪ್ರಾಯ ತಳೆಯಬೇಡಿ, ಅದೊಂದು ಕೆಟ್ಟ ಚಾಳಿ: ಡಾ ಸೌಜನ್ಯ ವಶಿಷ್ಠ
ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ದೇಹಕ್ಕೆ ನಿಯಮಿತ ವರ್ಕ್ಔಟ್ ಬಹಳ ಮುಖ್ಯ: ಡಾ ಸೌಜನ್ಯ ವಶಿಷ್ಠ