ಬೇರೆಯವರ ಬಗ್ಗೆ ಸುಖಾಸುಮ್ಮನೆ ಒಂದು ಅಭಿಪ್ರಾಯ ತಳೆಯಬೇಡಿ, ಅದೊಂದು ಕೆಟ್ಟ ಚಾಳಿ: ಡಾ ಸೌಜನ್ಯ ವಶಿಷ್ಠ
ಯಾವುದೇ ವಿಷಯಕ್ಕೆ ಕೂಡಲೇ ರಿಯಾಕ್ಟ್ ಮಾಡೋದು ಸರಿಯಲ್ಲ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳುತ್ತಾರೆ. ಸಂಗಾತಿ ಹೇಳಿದ್ದಕ್ಕೆ, ಸ್ನೇಹಿತರು ಹೇಳಿದ್ದಕ್ಕೆ, ಆಫೀಸಿನಲ್ಲಿ ಬಾಸ್ ಹೇಳಿದ್ದಕ್ಕೆ ಕೂಡಲೇ ಪ್ರತಿಕ್ರಿಯೆ ತೋರಿಸಬೇಡಿ, ಒಬ್ಬ ಗುಡ್ ಲಿಸನರ್ ಆಗಿ ಎಂದು ಡಾ ಸೌಜನ್ಯ ಸಲಹೆ ನೀಡುತ್ತಾರೆ.
ನಮ್ಮ ಪ್ರವೃತ್ತಿಯೇ ಹಾಗೆ. ನಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ಜಾಸ್ತಿ ಯೋಚನೆ ಮಾಡೋದಿಲ್ಲ. ಮನಸ್ಸು ಬಂದಾಗ ಮನಸ್ಸಿಗೆ ಬಂದಿದ್ದನ್ನು ತಿಂದು ಬಿಡುತ್ತೇವೆ. ಊಟ ಮಾಡುವಾಗಲೂ ನಮ್ಮ ಒಂದು ಕೈಯಲ್ಲಿ ಫೋನ್. ಆದರೆ ಇದು ಸರ್ವಾಥಾ ತಪ್ಪು ಎಂದು ಖ್ಯಾತಾ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ (Dr Soujanya Vasistha) ಹೇಳುತ್ತಾರೆ. ನಮ್ಮನ್ನು ಖಿನ್ನತೆ (depression) ಅವರಿಸಿದಾಗಲೂ ಸಿಕ್ಕಾಪಟ್ಟೆ ತಿನ್ನುತ್ತೇವೆ. ಆದರೆ ಊಟ ನಮ್ಮ ದೇಹದ ಒಂದು ಶಿಸ್ತುಬದ್ಧ ಕ್ರಿಯೆ. ದೇಹದ ಆರೋಗ್ಯ (health) ಕಾಪಾಡಿಕೊಳ್ಳಬೇಕಾದರೆ, ನಿಯಮಿತ ಸಮಯಕ್ಕೆ ಆಹಾರ ಸೇವಿಸಬೇಕು. ಉಣ್ಣುವಾಗ ಅವಸರದ ಪ್ರವೃತ್ತಿ ಸಲ್ಲದು, ಊಟವನ್ನು ಎಂಜಾಯ್ ಮಾಡುತ್ತಾ ಮಾಡಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ. ನಿಗದಿತ ಸಮಯದಲ್ಲಿ ನಿಯಮಿತವಾಗಿ ತಿನ್ನಬೇಕು, ದ್ರವ ಪದಾರ್ಥಗಳನ್ನೂ ಹೆಚ್ಚೆಚ್ಚು ಸೇವಿಸುವುದು ದೇಹಕ್ಕೆ ಒಳ್ಳೆಯದು ಎಂದು ಅವರು ಹೇಳುತ್ತಾರೆ.
ಬೇರೆಯವರ ಬಗ್ಗೆ ಸುಖಾಸುಮ್ಮನೆ ಕಾಮೆಂಟ್ ಮಾಡೋದು, ಅವರ ಬಗ್ಗೆ ಒಂದು ಅಭಿಪ್ರಾಯ ತಳೆದುಬಿಡೋದು ನಮ್ಮ ವ್ಯಕ್ತಿತ್ವದ ಕೆಟ್ಟ ಅಂಶ ಎಂದು ಡಾ ಸೌಜನ್ಯ ಹೇಳುತ್ತಾರೆ. ಬೇರೆಯವರ ಆಚಾರ-ವಿಚಾರ, ಉಡುಗೆ-ತೊಡುಗೆ ಅಥವಾ ಬೇರೆ ಯಾವುದೇ ವಿಷಯದ ಬಗ್ಗೆ ಕಾಮೆಂಟ್ ಪಾಸ್ ಮಾಡಲು ನಾವು ಯಾರೂ ಅಲ್ಲ. ನಮ್ಮಲ್ಲಿರುವ ಕೊರತೆಯನ್ನು ಮುಚ್ಚಿಡಲು ನಾವು ಬೇರೆಯವರನ್ನು ಜಜ್ ಮಾಡುತ್ತೇವೆ. ಪ್ರಪಂಚದಲ್ಲಿ ಯಾರೂ ಒಳ್ಳೆಯವರಲ್ಲ ಯಾರೂ ಕೆಟ್ಟವರಲ್ಲ. ನಮಗೆ ಬೇರೆಯವರಿಗೆ ಉಪಕಾರ ಮಾಡಲು ಸಾಧ್ಯವಾಗದಿದ್ದರೂ ಅಪಕಾರ ಮಾಡಬಾರದು ಎಂದು ಡಾ ಸೌಜನ್ಯ ಹೇಳುತ್ತಾರೆ.
ಹಾಗೆಯೇ, ಯಾವುದೇ ವಿಷಯಕ್ಕೆ ಕೂಡಲೇ ರಿಯಾಕ್ಟ್ ಮಾಡೋದು ಸರಿಯಲ್ಲ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳುತ್ತಾರೆ. ಸಂಗಾತಿ ಹೇಳಿದ್ದಕ್ಕೆ, ಸ್ನೇಹಿತರು ಹೇಳಿದ್ದಕ್ಕೆ, ಆಫೀಸಿನಲ್ಲಿ ಬಾಸ್ ಹೇಳಿದ್ದಕ್ಕೆ ಕೂಡಲೇ ಪ್ರತಿಕ್ರಿಯೆ ತೋರಿಸಬೇಡಿ, ಒಬ್ಬ ಗುಡ್ ಲಿಸನರ್ ಆಗಿ ಎಂದು ಡಾ ಸೌಜನ್ಯ ಸಲಹೆ ನೀಡುತ್ತಾರೆ.
ನಿತ್ಯದ ಬದುಕಿನಲ್ಲಿ ಯಾವುದಾದರೂ ವಿಷಯದಲ್ಲಿ ನಮಗೆ ಹಿನ್ನಡೆಯಾದಾಗ ಬೇರೆಯವರನ್ನು ದೂರುವುದು, ನಮ್ಮ ಅಸಾಮರ್ಥ್ಯಕ್ಕೆ ಇನ್ನೊಬ್ಬರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ನಮ್ಮ ಜಾಯಮಾನ. ಹಾಗೆ ಯಾವತ್ತೂ ಮಾಡದಿರಿ ಎಂದು ಡಾ ಸೌಜನ್ಯ ಹೇಳುತ್ತಾರೆ. ಅದು ಕೂಡ ನಮ್ಮ ವ್ಯಕ್ತಿತ್ವ ನೆಗೆಟಿವ್ ಅಂಶ. ನಾವು ಏನು ಮಾಡುತ್ತೇವೆಯೋ ಅದರಲ್ಲಿ ಖುಷಿಪಡೋಣ ಮತ್ತು ಬೇರೆಯವರನ್ನೂ ಖುಷಿಯಾಗಿರಿಸಲು ಪ್ರಯತ್ನಿಸೋಣ ಅಂತ ಅವರು ಹೇಳುತ್ತಾರೆ.
ಬದುಕಿನಲ್ಲಿ ಯಾವುದೂ ಶಾಶ್ವತ ಅಲ್ಲ. ಹಿಂದೆ ಯಾವುದಾದರೂ ಕಹಿಘಟನೆ ನಡೆದಿದ್ದರೆ ಅದರ ಬಗ್ಗೆ ಯೋಚಿಸುತ್ತಾ ಕೊರಗುವುದನ್ನು ಬಿಟ್ಟು ಮುಂದೆ ಸಾಗಿರಿ ಎಂದು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.
ಇದನ್ನೂ ಓದಿ: ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿ, ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಗುಜರಾತ್ನ ಆಪ್ ನಾಯಕ; ವಿಡಿಯೋ ವೈರಲ್