Emotion ಕಂಟ್ರೋಲ್ ಮಾಡಿದರೆ ಏನಾಗುತ್ತೆ ಗೊತ್ತಾ?
ಯಾವುದೇ ಘಟನೆ ಬಗ್ಗೆ ಯೋಚನೆ ಮಾಡುತ್ತಾ ಇರಬಹುದು. ಆದರೆ ಆ ಘಟನೆ ಬಗ್ಗೆ ಕೊರಗಬಾರದು. ಆ ಘಟನೆಯಿಂದ ಮೂಡುವ ಇಮೋಷನ್ನ ಬೇರೆಯವರ ಜೊತೆ ಹಂಚಿಕೊಳ್ಳಬೇಕು.
ಹಲವರು ಹಲವು ಬಾರಿ ಇಮೋಷನ್ನ (Emotion) ತಡೆಗಟ್ಟುತ್ತಾರೆ. ಹೀಗೆ ಮಾಡಿದರೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮಾನಸಿವಾಗಿ ಆರೋಗ್ಯದಿಂದ (Health) ಇರೋಕೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಕೆಲ ಸಲಹೆಗಳನ್ನ ನೀಡಿದ್ದಾರೆ. ಇಮೋಷನ್ ತಡೆದರೆ ಯಾವಾಗಲೋ ಒಂದು ಬಾರಿ ಬ್ಲಾಸ್ಟ್ ಆಗುತ್ತೆ. ನಮ್ಮ ಜೊತೆ ನಮ್ಮ ಸಂಬಂಧ ಹೇಗೆ ಇರುತ್ತೆ ಅನ್ನುವುದು ಬಹಳ ಮುಖ್ಯವಾಗುತ್ತೆ. ಯಾವುದೇ ಘಟನೆ ಬಗ್ಗೆ ಯೋಚನೆ ಮಾಡುತ್ತಾ ಇರಬಹುದು. ಆದರೆ ಆ ಘಟನೆ ಬಗ್ಗೆ ಕೊರಗಬಾರದು. ಆ ಘಟನೆಯಿಂದ ಮೂಡುವ ಇಮೋಷನ್ನ ಬೇರೆಯವರ ಜೊತೆ ಹಂಚಿಕೊಳ್ಳಬೇಕು. ಹೀಗೆ ಮಾಡಿದರೆ ಮನಸ್ಸು ಹಗುರು ಅಂತ ಅನಿಸುತ್ತೆ. ಮುಂದಿನ ಜೀವನದ ಬಗ್ಗೆ ಧೈರ್ಯ ಹೆಚ್ಚಾಗುತ್ತೆ. ಇನ್ನು ಪ್ರತಿ ದಿನ ಒಂದೇ ತರಹ ಇರಲ್ಲ. ಒಂದು ದಿನ ಖುಷಿಯಿಂದ ಕೂಡಿರಬಹುದು. ಇನ್ನೊಂದು ದಿನ ತೀರಾ ದುಃಖ ಆಗಿರಬಹುದು. ನಿಮ್ಮ ಖುಷಿ ಇತರರೊಂದಿಗೆ ಹಂಚಿಕೊಳ್ಳಿ. ದುಃಖ ಇದ್ದರೆ, ಇನ್ನೊಬ್ಬರ ಬಳಿ ಹೇಳಿ ಸಮಾಧಾನ ಮಾಡಿಕೊಳ್ಳಿ ಅಂತ ಸೌಜನ್ಯ ತಿಳಿಸಿದ್ದಾರೆ.
ಇದನ್ನೂ ಓದಿ
Poetry: ಅವಿತಕವಿತೆ; ಕಿತ್ತಳೆ ಇಂದಿನ ಕಿತ್ತಳೆಯಾಗಿರುವುದಿಲ್ಲ, ಮಾರುವವರೂ ಬೇರೆ ಅವರ ಕೂಗೂ ಮೊದಲಿನವರ ಕೂಗಲ್ಲ