ನಾನು, ನನ್ನದು ಎಂದು ಯೋಚಿಸದ ಆತ್ಮವೇ ಮಹಾನ್ ಆತ್ಮ, ನಾವೆಲ್ಲ ಅಲ್ಪಾತ್ಮರು: ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು
ನಾವು ಚಿಕ್ಕ ಆತ್ಮ ಹೊಂದಿರುವುದರಿಂದಲೇ, ಇದು ನನ್ನೂರು, ಅದು ಬೇರೆಯವರ ಊರು, ಇದು ನನ್ನ ಮಂದಿರ, ಅದು ಅವರ ಮಂದಿರ ಅಂತ ಭೇದ ಮಾಡುತ್ತೇವೆ. ಆಕಾಶವನ್ನು ನೋಡಿ. ಅದು ವಿಶ್ವದೆಲ್ಲೆಡೆ ಹಬ್ಬಿದೆ. ಅದು ಯಾವುದೇ ಭೇದಭಾವ ಮಾಡುವುದಿಲ್ಲ ಎಂದು ಸ್ವಾಮೀಜಿ ಹೇಳುತ್ತಾರೆ.
ಉತ್ತರ ಕರ್ನಾಟಕದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Shri Siddeshwara Swamiji) ಕುರಿತು ತಿಳಿಯದವರು ಬಹಳ ಕಡಿಮೆಯೆಂದೇ ಹೇಳಬೇಕು. ಶ್ರೀಗಳು ಆಧ್ಯಾತ್ಮದ ಬಗ್ಗೆ ಬಹಳ ಆಳವಾದ ಅಧ್ಯಯನ (extensive study) ನಡೆಸಿದ್ದಾರೆ. ಅವರ ಕೇವಲ ಕನ್ನಡ ಮಾತ್ರವಲ್ಲ, ಇಂಗ್ಲಿಷ್, ಸಂಸ್ಕೃತ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲೂ ಪ್ರವಚನ (discourse) ನೀಡುತ್ತಾರೆ. ಅವರ ಮಾತುಗಳನ್ನು ಗಮನವಿಟ್ಟು ಕೇಳಿ. ಆತ್ಮ, ಪರಮಾತ್ಮ ಮತ್ತು ಮಹಾತ್ಮ ಆಯಾಮಗಳ ಬಗ್ಗೆ ಅವರು ಬಹಳ ಆರ್ಥಗರ್ಭಿತವಾಗಿ ಮಾತಾಡಿದ್ದಾರೆ. ದೇವರು ಮಹಾನ್ ಅತ್ಮ, ಶ್ರೇಷ್ಠಾತ್ಮ, ಈ ಅತ್ಮ ಇಡೀ ಭೂಮಂಡಲವನ್ನು ಆವರಿಸಿಕೊಂಡಿರುತ್ತದೆ, ಹಾಗಾಗೇ ಅದು ಮಹಾನ್ ಆತ್ಮ, ಮಹಾತ್ಮ ಅನ್ನೋದು ಬಹಳ ಸುಂದರವಾರ ಪದ, ಎಂದು ಶ್ರೀಗಳು ಹೇಳುತ್ತಾರೆ.
ಬಸವಣ್ಣ, ಬುದ್ಧ, ಶಂಕರಾಚಾರ್ಯ, ಮಹಾವೀರ ಮತ್ತು ಗಾಂಧಿ ಅವರನ್ನೆಲ್ಲ ನಾವು ಮಹಾತ್ಮರು ಅಂತ ಕರೆಯುತ್ತೇವೆ. ಯಾಕೆಂದರೆ ಅವರಲ್ಲಿ ನಾನು, ನನ್ನದು ಎಂಬ ಸ್ವಾರ್ಥ ಇರಲಿಲ್ಲ. ಇವೆಲ್ಲವುಗಳನ್ನು ಮೀರಿದ ಆತ್ಮ ಅವರಲ್ಲಿತ್ತು, ಹಾಗಾಗೇ ಅವರು ಮಹಾತ್ಮರು ಎಂದು ಅವರು ಹೇಳುತ್ತಾರೆ. ತಮ್ಮಲ್ಲಿ ಸ್ವಾರ್ಥ ಇಲ್ಲದವರು ಮಾತ್ರ ಮಹಾನ್ ಅನಿಸಿಕೊಳ್ಳುತ್ತಾರೆ. ನಾವು ಅಲ್ಪಾತ್ಮರು, ಯಾಕೆಂದರೆ ನಾವು ಸ್ವಾರ್ಥಿಗಳು; ನಾನು, ನನ್ನದು ಎಂಬ ಪರಿಧಿಯಿಂದ ನಾವು ಆಚೆ ಬರಲಾರೆವು, ಅದಕ್ಕೆಂದೇ ನಮ್ಮದು ಚಿಕ್ಕ ಆತ್ಮ, ಮತ್ತು ನಾವು ಅಲ್ಪಾತ್ಮರು ಎಂದು ಶ್ರೀಗಳು ಹೇಳುತ್ತಾರೆ.
ನಾವು ಚಿಕ್ಕ ಆತ್ಮ ಹೊಂದಿರುವುದರಿಂದಲೇ, ಇದು ನನ್ನೂರು, ಅದು ಬೇರೆಯವರ ಊರು, ಇದು ನನ್ನ ಮಂದಿರ, ಅದು ಅವರ ಮಂದಿರ ಅಂತ ಭೇದ ಮಾಡುತ್ತೇವೆ. ಆಕಾಶವನ್ನು ನೋಡಿ. ಅದು ವಿಶ್ವದೆಲ್ಲೆಡೆ ಹಬ್ಬಿದೆ. ಅದು ಯಾವುದೇ ಭೇದಭಾವ ಮಾಡುವುದಿಲ್ಲ ಎಂದು ಸ್ವಾಮೀಜಿ ಹೇಳುತ್ತಾರೆ.
ದೇವರ ಸನ್ನಿಧಿಯನ್ನು ಅರಿತುಕೊಳ್ಳಿ. ಜಗತ್ತು ಎಷ್ಟು ದೊಡ್ಡದು ಅಂತ ಒಮ್ಮೆ ಯೋಚನೆ ಮಾಡಿ ನೋಡಿ. ಅದು ನಮ್ಮ ಕಲ್ಪನೆಗೆ ನಿಲುಕದಷ್ಟು ದೊಡ್ಡದು.
ವಿಜ್ಞಾನಿಗಳು ಹೇಳುವ ಪ್ರಕಾರ ಸೂರ್ಯ ಭೂಮಿಗಿಂತ ಬಹಳ ದೊಡ್ಡದು. ಹತ್ತು ಲಕ್ಷಗಳ ಭೂಮಿಗಳನ್ನು ಒಂದೆಡೆ ಇಟ್ಟರೆ ಒಬ್ಬ ಸೂರ್ಯನ ಸೃಷ್ಟಿಯಾಗುತ್ತದೆ, ಅಷ್ಟು ದೊಡ್ಡದಾಗಿದೆ ಸೂರ್ಯ. ಆದರೆ, ಇಂಥ ಸೂರ್ಯನನ್ನೇ ಅನಾಮತ್ತಾಗಿ ನುಂಗಿ ಬಿಡುವಷ್ಟು ಅನೇಕ ಆಕಾಶಕಾಯಗಳು ನಭೋಮಂಡಲದಲ್ಲಿವೆ ಎಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹೇಳುತ್ತಾರೆ.
ಇದನ್ನೂ ಓದಿ: Spirituality: ವ್ರತ ಪೂಜೆ, ಅನುಷ್ಠಾನಗಳಲ್ಲಿ ಬೇರೆಯವರು ಮಾಡಿದ ಅಡುಗೆಯನ್ನು ಯಾಕೆ ಊಟ ಮಾಡಬಾರದು ಅಂತಾರೆ?