Karnataka Congress: ರಾಜ್ಯದಲ್ಲಿ ಕಾಂಗ್ರೆಸ್  ಹಿಂದೂ-ಮುಸ್ಲಿಂ  ಧ್ವನಿ ಕಳೆದುಕೊಂಡಿದ್ದೇಕೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚೆ

Karnataka Congress: ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂ-ಮುಸ್ಲಿಂ ಧ್ವನಿ ಕಳೆದುಕೊಂಡಿದ್ದೇಕೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚೆ

TV9 Web
| Updated By: ಸಾಧು ಶ್ರೀನಾಥ್​

Updated on:Apr 04, 2022 | 6:42 PM

TV9 Kannada Digital Live: ರಾಜ್ಯದಲ್ಲಿ ಮುಸ್ಲಿಂ ಮತ್ತು ಹಿಂದೂ ಕಟ್ಟರ್​ ವಾದಿಗಳ ಧ್ವನಿ ತಾರಕಕ್ಕೇರಿದೆ. ಈ ತಾಕಲಾಟದ ಮಧ್ಯೆ ಏಕೋ​ ಧ್ವನಿ ಇಲ್ಲದ ಪಕ್ಷದಂತಾಗಿದೆ ಕಾಂಗ್ರೆಸ್. ಈ ಮಧ್ಯೆ, ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್​ ಗಾಂಧಿ ಕಳೆದ ವಾರಾಂತ್ಯ ಇಲ್ಲಿಗೆ ಬಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿ ಹೋಗಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತು ಟಿವಿ 9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಈಗ ಚರ್ಚೆ ನಡೆದಿದೆ.

ಬೆಂಗಳೂರು:ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆ ಹಿಮ್ಮೇಳ ಜೋರಾಗಿದೆ. ಇನ್ನೊಂದು ವರ್ಷಕ್ಕೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಈ ಮಧ್ಯೆ ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಮುಸ್ಲಿಂ ಮತ್ತು ಹಿಂದೂ ಕಟ್ಟರ್​ ವಾದಿಗಳ ಧ್ವನಿ ತಾರಕಕ್ಕೇರಿದೆ. ಅದಕ್ಕೆ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಿವೆ. ಆದರೆ ಈ ವಿಚಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತಾಗಿದೆ ಕರ್ನಾಟಕ ಕಾಂಗ್ರೆಸ್ ಸ್ಥಿತಿ (Karnataka Congress). ಈ ತಾಕಲಾಟದ ಮಧ್ಯೆ ಏಕೋ​ ಧ್ವನಿ ಇಲ್ಲದ ಪಕ್ಷದಂತಾಗಿದೆ ಕಾಂಗ್ರೆಸ್.

ಈ ಮಧ್ಯೆ, ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್​ ಗಾಂಧಿ (Rahul Gandhi) ಕಳೆದ ವಾರಾಂತ್ಯ ಇಲ್ಲಿಗೆ ಬಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿ ಹೋಗಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತು ಈಗ ಟಿವಿ 9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸೋಣ. ಟಿವಿ9 ಹಿರಿಯ ಆ್ಯಂಕರ್​ ಹರಿಪ್ರಸಾದ್ ಇದೀಗ ಲೈವ್​ ಚರ್ಚೆ ನಡೆಸಿಕೊಡುತ್ತಾರೆ. ಈ ಚರ್ಚೆಗೆ ನಿಮಗಿದೂ ಸ್ವಾಗತ. ಬನ್ನೀ… ಕಾಂಗ್ರೆಸ್​ ಧ್ವನಿ ಕಳೆದುಕೊಂಡಿದ್ದು ಏಕೆ – ಚಿಂತನ ಮಂಥನ ಇಲ್ಲಿದೆ (TV9 Kannada Digital Live):

ಇದನ್ನೂ ವೀಕ್ಷಿಸಿ:
RRR: ರಾಜಮೌಳಿ ಕಲೆಗಾರಿಕೆ ಹೇಗಿದೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ..

ಇದನ್ನೂ ಓದಿ:
JDS ​ನಿಂದ ಹೊರಟವರ ಪೈಕಿ ಹೊರಟ್ಟಿ 101ನೇಯವರು! ಆದರೂ ಪಕ್ಷ ಉಳಿದಿದೆ -ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ

Published on: Apr 04, 2022 03:38 PM