JDS ​ನಿಂದ ಹೊರಟವರ ಪೈಕಿ ಹೊರಟ್ಟಿ 101ನೇಯವರು! ಆದರೂ ಪಕ್ಷ ಉಳಿದಿದೆ -ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ

JDS ​ನಿಂದ ಹೊರಟವರ ಪೈಕಿ ಹೊರಟ್ಟಿ 101ನೇಯವರು! ಆದರೂ ಪಕ್ಷ ಉಳಿದಿದೆ -ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ
JDS ​ನಿಂದ ಹೊರಟವರ ಪೈಕಿ ಹೊರಟ್ಟಿ 101ನೇಯವರು! ಆದರೂ ಪಕ್ಷ ಉಳಿದಿದೆ -ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ

Basavaraj Horatti: ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 100ಕ್ಕೂ ಹೆಚ್ಚು ನಾಯಕರು ಜೆಡಿಎಸ್​ನಿಂದ ಹೊರಹೋಗಿದ್ದಾರೆ. ಬಸವರಾಜ ಹೊರಟ್ಟಿ 101ನೇಯವರು, ಆದರೂ ಪಕ್ಷ ಉಳಿದಿದೆ -ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

TV9kannada Web Team

| Edited By: sadhu srinath

Apr 04, 2022 | 1:44 PM

ಬೆಂಗಳೂರು: ಏಳು ಬಾರಿ ಸತತವಾಗಿ ಮೇಲ್ಮನೆಗೆ ಆರಿಸಿಬಂದು ಹಿರಿಯ ಸದಸ್ಯರಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಮಾತೃ ಪಕ್ಷವಾದ ಜೆಡಿ ಎಸ್ ನಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಈ ಬಾರಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ (Karnataka Legislative Council Elections) ಬಿಜೆಪಿ ಪಕ್ಷದಿಂದ ತಮ್ಮ ಅದೃಷ್ಟ ಪರೀಕ್ಷಿಸಲು ಸಜ್ಜಾಗಿದ್ದಾರೆ. ತಾವು ಬಿಜೆಪಿ ಸೇರುವುದಾಗಿ ಬಸವರಾಜ ಹೊರಟ್ಟಿ ಘೋಷಿಸಿಯಾಗಿದೆ. ಹೊರಟ್ಟಿ ಅವರ (JDS) ಈ ನಿರ್ಧಾರದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಮೊದಲಿಗೆ ಸಭಾಪತಿ ಹೊರಟ್ಟಿ ಹೇಳಿಕೆಯಿಂದ ನನಗೆ ಶಾಕ್​ ಆಗಲಿಲ್ಲ. ಹೊರಟ್ಟಿ ಹೋದರೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಎಂದಿದ್ದಾರೆ (Legislative Council Chairman Basavaraj Horatti).

ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಖರ್ಚು ಮಾಡ್ತಾರೆ. ಅಷ್ಟೊಂದು ಖರ್ಚು ಮಾಡಲು ನನ್ನಿಂದ ಸಾಧ್ಯವಿಲ್ಲ ಅಂತಿದ್ದರು ಹೊರಟ್ಟಿ. ಅವರಿವರು ಕರೆಯುತ್ತಿದ್ದಾರೆ ಎಂದೂ ಕಳೆದ ವಾರವೇ ಹೇಳಿದ್ದರು. ನನಗಾಗಿ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಹೋಗಿ ಅಂದೆ ಎಂದು ಹೊರಟ್ಟಿ ಅವರಿಗೆ ತಿಳಿಸಿದ್ದಾಗಿ ಜೆಡಿಎಸ್ ನಾಯಕ ಹೆಚ್.​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 100ಕ್ಕೂ ಹೆಚ್ಚು ನಾಯಕರು ಜೆಡಿಎಸ್​ನಿಂದ ಹೊರಹೋಗಿದ್ದಾರೆ. ಬಸವರಾಜ ಹೊರಟ್ಟಿ 101ನೇಯವರು, ಆದರೂ ಪಕ್ಷ ಉಳಿದಿದೆ. ಪಕ್ಷಕ್ಕೆ ಮತ್ತೊಬ್ಬ ಹೊರಟ್ಟಿ, ಮತ್ತೊಬ್ಬ ಕೋನರೆಡ್ಡಿ ಬರಬಹುದು. ಅವರಿದ್ದಾಗ ಏನು ಬಾಂಬೆ ಕರ್ನಾಟಕ ಉದ್ಧಾರ ಆಗಿತ್ತಾ? ಎಂದು ಪ್ರಶ್ನಿಸಿರುವ HDK ಅವರ ಭವಿಷ್ಯವನ್ನು ನಾನ್ಯಾಕೆ ಹಾಳುಮಾಡಲಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಷ್ಟಕ್ಕೂ ಅವರನ್ನು ಸಭಾಪತಿ ಮಾಡಿದ್ದು ಬಿಜೆಪಿಗೆ ಹೋಗಲಿಕ್ಕಾ? ಬಿಜೆಪಿಗೆ ಹೋಗ್ತೀವಿ ಅಂದ್ರೆ ಬೇಡ ಅಂತಾ ಗೋಗರೆಯೋಕೆ ಆಗುತ್ತಾ? ಎಂದು ಕುಮಾರಸ್ವಾಮಿ ಅವರು ಹೊರಟ್ಟಿ ನಡೆಯನ್ನು ಲೇವಡಿ ಮಾಡಿದರು.

ಜೆಡಿಎಸ್ ಗೆ ಅಸ್ಥಿರತೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಆದರೆ ಅಸ್ಥಿರತೆ ಅವರಿಗೆ ಇರಬಹುದು. ಕೇಂದ್ರದಿಂದ ಮಂತ್ರಿಗಿರಿ ಕಳೆದುಕೊಂಡು ಬಂದಿದ್ದಾರಲ್ಲಾ, ಯಾಕೆ ತೆಗೆದರು? ಎಂದು ಹೆಚ್.​ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ಹನುಮನನ್ನು ನಾವೂ ಸ್ವಲ್ಪ ದಿನ ಗುತ್ತಿಗೆಗೆ ತಗೋತೀವಿ: ಕುಮಾರಸ್ವಾಮಿ ಹನುಮ ಜಯಂತಿ ಬಳಿಕ ನಾವೂ ಹೋರಾಟ ಮಾಡುತ್ತೇವೆ. ಹನುಮನನ್ನು ವಿಹಿಂಪ, ಬಜಗರಂಗದಳದವರಿಗೆ ಮಾತ್ರ ಗುತ್ತಿಗೆ ಕೊಟ್ಟಿದ್ದಾರಾ? ನಾವೂ ಸ್ವಲ್ಪ ದಿನ ಗುತ್ತಿಗೆ ತಗೋಬೇಕು ಅಂತಾ ಇದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

2023 ರಲ್ಲಿ ರಾಜ್ಯದಲ್ಲಿ ಜನತಾ ದಳ ಸರ್ಕಾರ: 2023 ರಲ್ಲಿ ಜನತಾ ದಳ ಸರ್ಕಾರ ರಾಜ್ಯದಲ್ಲಿ ಬರಲಿದೆ. ಜಮೀರ್ ಅಹಮದ್ ಪಕ್ಷಕ್ಕೆ ಬರುವ ವಿಚಾರ ಸದ್ಯಕ್ಕೆ ನಮ್ಮ ಮುಂದೆ ಚರ್ಚೆ ಇಲ್ಲ. ಹಿಂದೂ ಸಮಾಜದ ಬಹಳ ಜನ ನನ್ನ ಸಂಪರ್ಕದಲ್ಲಿ ಇದ್ದಾರೆ. ಪಕ್ಷಕ್ಕೆ ಹಲವು ಜನ ಬರುವರು ಇದ್ದಾರೆ. ಬೇರೆ ನಾಯಕರನ್ನು ಸೃಷ್ಟಿ ಮಾಡುವ ತಾಕತ್ ಜೆಡಿಎಸ್ ಗೆ ಇದೆ ಎಂದು ಹೆಚ್.​ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜಿಮ್​ನಲ್ಲಿ ಕುಸಿದುಬಿದ್ದು ಯುವತಿ ಸಾವು ಪ್ರಕರಣ; ಪೋಸ್ಟ್ ಮಾರ್ಟಮ್ ವರದಿಯಲ್ಲಿ ಸಾವಿನ ಕಾರಣ ಬಹಿರಂಗ

ಇದನ್ನೂ ಓದಿ: ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಡವಾಗಿ ನಾಪತ್ತೆ; ಕಾರಿನ ಬಳಿ ಪತ್ತೆಯಾದ ರಕ್ತದ ಕಲೆ

Follow us on

Related Stories

Most Read Stories

Click on your DTH Provider to Add TV9 Kannada