ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಡವಾಗಿ ನಾಪತ್ತೆ; ಕಾರಿನ ಬಳಿ ಪತ್ತೆಯಾದ ರಕ್ತದ ಕಲೆ

ಕೊಡಗಿನಲ್ಲಿ ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನಿಸಿದ ಏಳು ಮಂದಿಯನ್ನು ಬಂಧಿಸಲಾಗಿದೆ. ವಿದ್ಯುತ್ ತಂತಿಯ ಉರುಳಿಗೆ ಸಿಲುಕಿ‌ ಹುಲಿ ಸಾವನ್ನಪ್ಪಿದೆ.

ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಡವಾಗಿ ನಾಪತ್ತೆ; ಕಾರಿನ ಬಳಿ ಪತ್ತೆಯಾದ ರಕ್ತದ ಕಲೆ
ನಾಪತ್ತೆಯಾದ ಲೋಹಿತ್
Follow us
| Edited By: ಗಂಗಾಧರ​ ಬ. ಸಾಬೋಜಿ

Updated on: Apr 04, 2022 | 12:33 PM

ದೇವನಹಳ್ಳಿ: ಜೆಡಿಎಸ್ ಮಾಜಿ ಕಾರ್ಪೊರೇಟರ್ (Corporator) ಪತಿ ನಿಗೂಡವಾಗಿ ನಾಪತ್ತೆಯಾಗಿರುವಂತಹ ಘಟನೆ ನಡೆದಿದೆ. ಜಮೀನಿನ ಬಳಿ‌‌ ಹೋಗಿ ಬರುವಾಗ ಹೆದ್ದಾರಿ‌ ನಡುವೆ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಬಿನ್ನಿಪೇಟೆ ವಾರ್ಡ್ ಮಾಜಿ ಕಾರ್ಪೋರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ನಾಪತ್ತೆಯಾಗಿದ್ದಾರೆ. ಕಳೆದ‌ 29 ರಂದು ಹೊಸಕೋಟೆ ತಾಲೂಕಿನ ‌ನಂದಗುಡಿ‌ ಬಳಿಯಿರೂ ರೇಸ್ ಜಮೀನಿನ ಬಳಿಗೆ ಲೋಹಿತ್ ಬಂದಿದ್ದರು. ಈ ವೇಳೆ ನಂದಗುಡಿ ಬಳಿ ಹೆದ್ದಾರಿ ಬದಿಯಲ್ಲಿ ಪಂಚರ್ ಆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು ಲೋಹಿತ್ ನಾಪತ್ತೆಯಾಗಿದ್ದಾರೆ. ಕಾರಿನ ಬಳಿ ರಕ್ತದ ಕಲೆಗಳು ಪತ್ತೆಯಾಗಿರೂ ಹಿನ್ನೆಲೆಯಲ್ಲಿ ಆತಂಕ ಉಂಟಾಗಿದೆ. ನಂದಗುಡಿ ಪೊಲೀಸರಿಂದ ನಾಪತ್ತೆಯಾದ ಲೋಹಿತ್​ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಬೆಂಗಳೂರಿನಿಂದ ನಂದಗುಡಿ ಬಳಿಯ ಜಮೀನಿನಲ್ಲಿ ರೇಸ್ ಟ್ರಾಕ್ ಮಾಡಿದ್ದ ಲೋಹಿತ್, ಹೀಗಾಗಿ ರೇಸ್ ಟ್ರಾಕ್ ಬಳಿಗೆ ಹೋಗಿ ಬರೋದಾಗಿ ಹೇಳಿ ಬಂದಿದ್ದರು. ಬಂದ ನಂತರ ಮೊಬೈಲ್ ಸ್ವಿಚ್ ಆಪ್‌ ಆಗಿದ್ದು, ಹುಡುಕಿಕೊಂಡು ಬಂದಾಗ ಹೆದ್ದಾರಿ ಬದಿಯಲ್ಲಿ ಕಾರು ಪತ್ತೆಯಾಗಿದೆ. ಇನ್ನೂ ಕಾರಿ‌ನ ಸಮೀಪದ ದೇವಸ್ಥಾನದ ಬಳಿ ಚಪ್ಪಲ್ಲಿ ಮತ್ತು ಬೆಲ್ಟ್ ಕೂಡ ಪತ್ತೆಯಾಗಿದೆ. ವಿಶೇಷ ತನಿಖಾ ತಂಡದಿಂದ ನಾಪತ್ತೆಯಾಗಿರೂ ಲೋಹಿತ್​ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನಿಸಿದ ಏಳು ಮಂದಿಯ ಬಂಧನ:

ಮಡಿಕೇರಿ: ಕೊಡಗಿನಲ್ಲಿ ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನಿಸಿದ ಏಳು ಮಂದಿಯನ್ನು ಬಂಧಿಸಲಾಗಿದೆ. ವಿದ್ಯುತ್ ತಂತಿಯ ಉರುಳಿಗೆ ಸಿಲುಕಿ‌ ಹುಲಿ ಸಾವನ್ನಪ್ಪಿದೆ. ಹುಲಿಯನ್ನು ಹೊಲದಲ್ಲಿ ಹುತು ಹಾಕಿದ್ದ ಆರೋಪಿಗಳು, ಹುಲಿಯ ಹಲ್ಲು, ಉಗುರು ಕಿತ್ತು ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದಾರೆ. ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯಲ್ಲಿ ಮಡಿಕೇರಿ ಸಿಐಡಿ ಅರಣ್ಯ ಸಂಚಾರ ದಳದಿಂದ ಕಾರ್ಯಾಚರಣೆ ಮಾಡಿದ್ದು, ಎಂಟು ಜೋಡಿ ಉಗುರು, ನಾಲ್ಕು ಹಲ್ಲುಗಳನ್ನು ಆರೋಪಿಗಳಿಂದ ವಶ ಪಡೆಯಲಾಗಿದೆ.

ಕಾರಿನಲ್ಲಿ ಬಂದು ಮನೆಗಳ್ಳತನ ಮಾಡಿದ ಖದೀಮರು:

ಚಿತ್ರದುರ್ಗ: ಚಳ್ಳಕೆರೆಯಲ್ಲಿ ಕಾರಲ್ಲಿ ಬಂದು ಮನೆಗಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಚಳ್ಳಕೆರೆ ಪಟ್ಟಣದ ತ್ಯಾಗರಾಜ ಬಡಾವಣೆ ಮನೆಗಳ್ಳತನ ನಡೆದಿದೆ. ಉದ್ಯಮಿ ಗಣೇಶ ಭಟ್ಟ ಎಂಬುವರಿಗೆ ಸೇರಿದ ಮನೆ ಕಳ್ಳತನ ಮಾಡಲಾಗಿದೆ. ಎರ್ಟಿಗಾ ಕಾರಲ್ಲಿ ಬಂದಿದ್ದ ಮೂವರು ಕಳ್ಳರಿಂದ ಕೃತ್ಯ ಎಸಗಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಗೆ ಕನ್ನ ಹಾಕಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಳ್ಳರು ಕಾರಲ್ಲಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:

ಈ ವರ್ಷದ ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳು ಯಾರು ಗೊತ್ತಾ..! ಇಲ್ಲಿದೆ ಮಾಹಿತಿ

ತಾಜಾ ಸುದ್ದಿ