ಟ್ಯಾಂಕರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ: ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ; ಓರ್ವ ವ್ಯಕ್ತಿಯ ಕಾಲು ಮುರಿತ

ಟ್ಯಾಂಕರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ: ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ; ಓರ್ವ ವ್ಯಕ್ತಿಯ ಕಾಲು ಮುರಿತ
ಟ್ಯಾಂಕರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ

ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದವರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ. ಹೊಸಪೇಟೆಯಲ್ಲಿ ಸಿಂಗಲ್ ಬ್ಯಾರಲ್ ಗನ್ ಹಿಡಿದು ಮೆರವಣಿಗೆ ಮಾಡಿದ ಹಿನ್ನಲೆ, ವರ್ಷತೊಡಕು ಅಂಗವಾಗಿ ಭೇಟಿಯಾಡಿ ಸಂಭ್ರಮಿಸುವ ವೇಳೆ ಬಂದೂಕು ಬಳಕೆ ಮಾಡಲಾಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 04, 2022 | 8:47 AM

ತುಮಕೂರು: ಟ್ಯಾಂಕರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ (Accident) ಹೊಡೆದಿರುವಂತಹ ಘಟನೆ ನಡೆದಿದೆ. ತುಮಕೂರು ಹೊರವಲಯದ ಅಂತರಸನಹಳ್ಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬೆಳಗಿನ ಜಾವ 3.50 ಕ್ಕೆ ಸುಮಾರಿಗೆ ಘಟನೆ ಸಂಭವಿಸಿದೆ. ಹಿಂಬದಿಯಿಂದ ಬಂದು ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಓರ್ವ ಪ್ರಯಾಣಿಕನ ಕಾಲು ಮುರಿದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. Ka 51 AF 3434 ನಂಬರ್ ನ ಖಾಸಗಿ ಬಸ್ ಸೊರಬದಿಂದ ಬೆಂಗಳೂರು ಕಡೆ ತೆರಳುತ್ತಿತ್ತು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಗಾಳಿಯಲ್ಲಿ ಗುಂಡು ಹಾರಿಸಿದವರ ವಿರುದ್ಧ ಕೇಸ್​ ದಾಖಲು:

ವಿಜಯನಗರ: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದವರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ. ಹೊಸಪೇಟೆಯಲ್ಲಿ ಸಿಂಗಲ್ ಬ್ಯಾರಲ್ ಗನ್ ಹಿಡಿದು ಮೆರವಣಿಗೆ ಮಾಡಿದ ಹಿನ್ನಲೆ, ವರ್ಷತೊಡಕು ಅಂಗವಾಗಿ ಭೇಟಿಯಾಡಿ ಸಂಭ್ರಮಿಸುವ ವೇಳೆ ಬಂದೂಕು ಬಳಕೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಬೇಟೆಯಾಡಿ ಸಂಭ್ರಮಿಸುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಲಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದಕ್ಕೆ ಇಬ್ಬರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹೊಸಪೇಟೆ ನಿವಾಸಿ ಕೆ, ಹನುಮಂತ ಹಾಗೂ ಕಿಚಡಿ ಯಮನೂರಪ್ಪ ವಿರುದ್ಧ ಕೇಸ್ ದಾಖಲಾಗಿದ್ದು, ಹೊಸಪೇಟೆ ಪಟ್ಟಣ ಪೊಲೀಸ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಡಾಟ ಎಂಟ್ರಿ ಆಪರೇಟರ್ ಹಾಗೂ ಇಂಜಿನಿಯರ್​ಗೆ ಗ್ರಾಪಂ ಸದಸ್ಯನಿಂದ ಅವಾಜ್:

ತುಮಕೂರು: ಗ್ರಾಮ ಪಂಚಾಯತ್​ಗೆ ಬಂದರೇ ನಾಯಿಗೆ ಹೊಡೆದಂಗೆ ಹೊಡಿತಿನಿ ಎಂದು ಗ್ರಾಪಂ‌ ಸದಸ್ಯನಿಂದ ಗ್ರಾಪಂ ಡಾಟ ಎಂಟ್ರಿ ಆಪರೇಟರ್ ನಾಗರಾಜು ಹಾಗೂ ಇಂಜಿನಿಯರ್ ಗಿರಿರಾಜು ಗ್ರಾಪಂ ಸದಸ್ಯ ಅವಾಜ್ ಹಾಕಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಅವಾಜ್ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ವೈರಲ್ ಆಗಿದೆ. ಗ್ರಾಪಂ ಸದಸ್ಯ ಐಸಿ ಮಹೇಶ್ ಎಂಬಾತ ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಿದ್ದರು. ಯೋಜನೆಯ ಬಿಲ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾಪಂ ಗೆ ಬರದಂತೆ ಧಮ್ಕಿ ಆರೋಪ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಒಕ್ಕಣೆ ಕಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆಪೆಯಿಂದ ಕೂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಗ್ರಾಮದ ಗಂಗಾಧರ ಇಂಜಿನಿಯರಿಂಗ್ ದೂರು ನೀಡಿದ್ದರು. ಪರಿಶೀಲನೆ ವೇಳೆ ಗ್ರಾಪಂ ಸದಸ್ಯ ಮಹೇಶ್ ನಾನು ಗ್ರಾಪಂ ಸದಸ್ಯ ಕಾಮಗಾರಿ ಪರಿಶೀಲನೆ ಮಾಡುವ ಅಗತ್ಯವಿಲ್ಲ. ನಾನು ಹೇಳಿದಂತೆ ಬಿಲ್ ಮಾಡಿ ಎಂದು ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಜೊತೆಗೆ ಪೋನ್ ಮೂಲಕವೂ ಪುಲ್ ಅವಾಜ್ ಹಾಕಲಾಗಿದೆ. ಈ ಬಗ್ಗೆ ಆಡಿಯೋ ಕೂಡ ವೈರಲ್ ಆಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಎಂದು ದೂರು ನೀಡಲಾಗಿದ್ದು, ಡಾಟ ಎಂಟ್ರಿ ಹಾಗೂ ನರೇಗಾ ಇಂಜಿನಿಯರ್​ನಿಂದ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸೋಲಾರ್ ಪ್ಲ್ಯಾಂಟ್ ಬಳಿ ಚಿರತೆಗಳು ಪ್ರತ್ಯಕ್ಷ:

ಮೈಸೂರು: ಸೋಲಾರ್ ಪ್ಲ್ಯಾಂಟ್ ಬಳಿ ಚಿರತೆಗಳು ಪ್ರತ್ಯಕ್ಷವಾಗಿವೆ. ಪಿರಿಯಾಪಟ್ಟಣ ತಾಲ್ಲೂಕು ದೊಡ್ಡ ಬೇಲಾಳು ಗ್ರಾಮದ ಬಳಿಯ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಆವರಣದಲ್ಲಿ ಬೆಳಿಗಿನ ಜಾವ 5 ಗಂಟೆಯ ಸಮಯದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಭದ್ರತಾ ಸಿಬ್ಬಂದಿ, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಸೋಲಾರ್ ಪ್ಲಾಂಟ್ ಒಳಗಡೆ ಯಾರು ಓಡಾಡದಂತೆ ಸೂಚನೆ ನೀಡಲಾಗಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ ಓದಿ:

Viral: ವಿಶ್ವದ ಅತ್ಯಂತ ದುಬಾರಿ ಶಾಲೆ ಬಗ್ಗೆ ಗೊತ್ತಾ; ಫೀಸ್​ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ..!

Follow us on

Related Stories

Most Read Stories

Click on your DTH Provider to Add TV9 Kannada