‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?

Nannamma Super Star Winner: ‘ನನ್ನಮ್ಮ ಸೂಪರ್​ ಸ್ಟಾರ್​’ ಟೈಟಲ್​ ಗೆದ್ದ ಯಶಸ್ವಿನಿ ಹಾಗೂ ವಂಶಿಕಾ ವೇದಿಕೆ ಮೇಲೆ ಕುಣಿದಾಡಿದರು. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?
ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಗೆದ್ದ ವಂಶಿಕಾ-ಯಶಸ್ವಿನಿ
Follow us
TV9 Web
| Updated By: ಮದನ್​ ಕುಮಾರ್​

Updated on: Apr 04, 2022 | 8:16 AM

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಸೆಲೆಬ್ರಿಟಿಗಳ ಮಕ್ಕಳು ಭರಪೂರ ಮನರಂಜನೆ ನೀಡುತ್ತಿದ್ದ ಈ ಶೋ ತನ್ನದೇ ಆದ ವೀಕ್ಷಕರ ಬಳಗವನ್ನು ಹೊಂದಿತ್ತು. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾದ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಮಿಂಚಿದರು. ಅದರಲ್ಲೂ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಅಂಜನಿ ಕಶ್ಯಪ್​ (Vanshika Anjani Kashyap) ಮೋಡಿ ಮಾಡಿದಳು. ಈ ಕಾರ್ಯಕ್ರಮಕ್ಕೆ ಈಗ ತೆರೆ ಬಿದ್ದಿದೆ. ಅಂದರೆ ಫಿನಾಲೆ ಆಗಿದೆ. ಝಗಮಗಿಸುವ ಅದ್ದೂರಿ ವೇದಿಕೆಯಲ್ಲಿ ಕೊನೆಯ ಎಪಿಸೋಡ್​ ಮೂಡಿಬಂದಿದೆ. ಈ ಶೋನಲ್ಲಿ ಯಾರು ವಿನ್ನರ್​ (Nannamma Super Star Winner) ಆಗುತ್ತಾರೆ ಎಂಬ ಕೌತುಕ ಮನೆ ಮಾಡಿತ್ತು. ಎಲ್ಲ ಮಕ್ಕಳು ಕೂಡ ಸೂಪರ್​ ಪರ್ಫಾರ್ಮೆನ್ಸ್​ ನೀಡಿದ್ದರು. ವಂಶಿಕಾ ವಿನ್​ ಆಗಬಹುದು ಎಂದು ಬಹುತೇಕರು ಊಹಿಸಿದ್ದರು. ಅಂತಿಮವಾಗಿ ಆ ಊಹೆ ನಿಜವಾಗಿದೆ. ಭಾನುವಾರ (ಏ.3) ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದ ವಿನ್ನರ್​ ಹೆಸರನ್ನು ಘೋಷಿಸಲಾಗಿದೆ. ತಾಯಿ-ಮಗಳಾದ ಯಶಸ್ವಿನಿ ಹಾಗೂ ವಂಶಿಕಾ ಜೋಡಿ ಈ ಟ್ರೋಫಿ ಗೆದ್ದಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಕಿರುತೆರೆ ಪ್ರೇಕ್ಷಕರಿಗೆ ‘ನನ್ನಮ್ಮ ಸೂಪರ್​ ಸೂಪರ್​ ಸ್ಟಾರ್​’ ಕಾರ್ಯಕ್ರಮದ ಸ್ಪರ್ಧಿಗಳು ಹಲವು ತಿಂಗಳ ಕಾಲ ಮನರಂಜನೆ ನೀಡಿದರು. ವಿದ್ಯಾ-ರೋಹಿತ್​, ಸುಪ್ರಿತಾ-ಇಬ್ಬನಿ, ಜಾನ್ವಿ-ಗ್ರಂಥ್​, ಪುನೀತಾ-ಆರ್ಯ, ಯಶಸ್ವಿನಿ-ವಂಶಿಕಾ, ನಂದಿನಿ-ಅದ್ವಿಕ್​ ಅವರು ಫಿನಾಲೆ ತಲುಪಿದ್ದರು. ಭಾನುವಾರ ಸಂಜೆ ನಡೆದ ಫಿನಾಲೆಯಲ್ಲಿ ವಿನ್ನರ್​ ಯಾರು ಎಂಬುದನ್ನು ನಟಿ ತಾರಾ ಅನುರಾಧ ಅವರು ಘೋಷಿಸಿದರು. ವಂಶಿಕಾ ಮತ್ತು ಯಶಸ್ವಿನಿ ಅವರು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಈ ತಾಯಿ-ಮಗಳ ಜೋಡಿಗೆ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನದ ಹಣ ಸಿಕ್ಕಿದೆ.

‘ನನ್ನಮ್ಮ ಸೂಪರ್​ ಸ್ಟಾರ್​’ ಟೈಟಲ್​ ಗೆದ್ದ ಯಶಸ್ವಿನಿ ಹಾಗೂ ವಂಶಿಕಾ ವೇದಿಕೆ ಮೇಲೆ ಕುಣಿದಾಡಿದರು. ಮಗುವನ್ನು ತಾಯಿ ಎತ್ತಿಕೊಂಡಿರುವ ರೀತಿಯಲ್ಲಿ ಟ್ರೋಫಿ ವಿನ್ಯಾಸಗೊಂಡಿದೆ. ಅದೇ ಮಾದರಿಯಲ್ಲಿ ಯಶಸ್ವಿನಿ ಮತ್ತು ವಂಶಿಕಾ ಕೂಡ ಪೋಸ್​ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವಂಶಿಕಾ ಖ್ಯಾತಿ ಹೆಚ್ಚಿತು. ಸೋಶಿಯಲ್​ ಮೀಡಿಯಾದಲ್ಲೂ ಆಕೆ ಸಖತ್​ ಫೇಮಸ್​ ಆಗಿದ್ದಾಳೆ. ಈಗ ವಿನ್ನರ್​ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಪುನೀತಾ ಹಾಗೂ ಆರ್ಯ ಅವರಿಗೆ ರನ್ನರ್​ ಅಪ್​ ಸ್ಥಾನ ಸಿಕ್ಕಿದೆ. ಈ ಶೋಗೆ ಸೃಜನ್​ ಲೋಕೇಶ್​, ಅನು ಪ್ರಭಾಕರ್​, ತಾರಾ ಅನುರಾಧ ಅವರು ನಿರ್ಣಾಯಕರಾಗಿದ್ದರು. ನಟಿ ಅನುಪಮಾ ಗೌಡ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬಂತು. ಫಿನಾಲೆ ಸಂಚಿಕೆಗೆ ರಿಯಲ್​ ಸ್ಟಾರ್​ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ್ದರು. ಪುಟಾಣಿಗಳಿಗೆ ಡೈಲಾಗ್​ ಹೇಳಿಕೊಡುವ ಮೂಲಕ ಅವರು ಮನರಂಜನೆ ನೀಡಿದರು. ‘ಹೋಮ್​ ಮಿನಿಸ್ಟರ್​’ ಚಿತ್ರದ ನಾಯಕಿ ವೇದಿಕಾ ಕೂಡ ಈ ಕ್ಷಣಕ್ಕೆ ಸಾಕ್ಷಿ ಆದರು.

‘ನನ್ನಮ್ಮ ಸೂಪರ್​ ಸ್ಟಾರ್​’ ಮುಗಿಯಿತು, ಮುಂದೇನು?

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಹೊಸ ಶೋ ಆರಂಭ ಆಗುತ್ತಿದೆ. ‘ನನ್ನಮ್ಮ ಸೂಪರ್​ ಸ್ಟಾರ್​’ ಶೋ ಮುಗಿದ ಬೆನ್ನಲ್ಲೇ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮ ಪ್ರಸಾರ ಆಗಲಿದೆ. ಆ ಶೋನ ಶೀರ್ಷಿಕೆಯನ್ನು ಉಪೇಂದ್ರ ಅವರು ಲಾಂಚ್​ ಮಾಡಿದ್ದಾರೆ. ‘ಟೈಟಲ್​ ಇಷ್ಟು ಇಂಟರೆಸ್ಟಿಂಗ್​ ಆಗಿದೆ ಎಂದಮೇಲೆ ಈ ಶೋ ಕೂಡ ತುಂಬ ಸೂಪರ್​ ಆಗಿ ಇರುತ್ತದೆ’ ಎಂದರು ವೇದಿಕಾ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮ ಪ್ರಸಾರ ಆಗಲಿದೆ.

ಇದನ್ನೂ ಓದಿ:

‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್​ ಆನಂದ್ ಭಾವುಕ ನುಡಿ

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ