Viral: ವಿಶ್ವದ ಅತ್ಯಂತ ದುಬಾರಿ ಶಾಲೆ ಬಗ್ಗೆ ಗೊತ್ತಾ; ಫೀಸ್​ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ..!

ಹಿಂದೊಮ್ಮೆ ಓದುವುದು ಉಚಿತವಾಗಿ ಲಭ್ಯವಿತ್ತು. ಆದರೆ ಈಗ ಶಿಕ್ಷಣ ವ್ಯಾಪಾರವಾಗಿ ಮಾರ್ಪಟ್ಟಿದೆ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಸ್ತಿ ಮಾರುತ್ತಿದ್ದಾರೆ. ಆದರೆ ವಿಶ್ವದ ಅತ್ಯಂತ ದುಬಾರಿ ಶಾಲೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಶುಲ್ಕ ಎಷ್ಟು ಗೊತ್ತಾ? ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ?

ಗಂಗಾಧರ​ ಬ. ಸಾಬೋಜಿ
|

Updated on: Apr 04, 2022 | 8:00 AM

ಹಿಂದೊಮ್ಮೆ ಓದುವುದು ಉಚಿತವಾಗಿ ಲಭ್ಯವಿತ್ತು. ಆದರೆ ಈಗ ಶಿಕ್ಷಣ ವ್ಯಾಪಾರವಾಗಿ ಮಾರ್ಪಟ್ಟಿದೆ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಸ್ತಿ ಮಾರುತ್ತಿದ್ದಾರೆ. ಆದರೆ ವಿಶ್ವದ ಅತ್ಯಂತ ದುಬಾರಿ ಶಾಲೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಶುಲ್ಕ ಎಷ್ಟು ಗೊತ್ತಾ? ಅಲ್ಲಿ ಸಿಗುವ ಸೌಲಭ್ಯಗಳನ್ನು ನೋಡಿದರೆ ಮೈಂಡ್ ಬ್ಲ್ಯಾಂಕ್ ಆಗುವುದು ಖಂಡಿತ.!

1 / 5
ಈ ಶಾಲೆಯು ಸ್ವಿಟ್ಜರ್ಲೆಂಡ್‌ನ ಜಿನೀವಾ ಸರೋವರದ ಬಳಿ ಇದೆ. ಇದನ್ನು ಇನ್‌ಸ್ಟಿಟ್ಯೂಟ್ ಲೆ ರೋಸಿ ಎಂದು ಹೆಸರಿಸಲಾಗಿದೆ. ಈ ಶಾಲೆಯನ್ನು 1880 ರಲ್ಲಿ ಪಾಲ್ ಕಾರ್ನೆಲ್ ಎಂಬ ವ್ಯಕ್ತಿ ಸ್ಥಾಪಿಸಿದರು. ಅಧ್ಯಯನಕ್ಕೆ ಅನುಕೂಲಕರವಾದ ಶಾಂತ ವಾತಾವರಣ. ಎರಡು ಕ್ಯಾಂಪಸ್‌ಗಳಿವೆ, ಈಜುಕೊಳಗಳು ಮತ್ತು ಟೆನ್ನಿಸ್ ಕೋರ್ಟ್‌ಗಳು, ಚಳಿಗಾಲದಲ್ಲಿ ಮಕ್ಕಳು ಕೂಡ ಇಲ್ಲಿ ಸ್ಕೀ ಮಾಡಬಹುದು.

2 / 5
ಶಾಲೆಯನ್ನು ಅಂತಾರಾಷ್ಟ್ರೀಯ ಶಾಲೆ ಎಂದು ಗುರುತಿಸಲಾಗಿದೆ. ಪ್ರತಿ ತರಗತಿಯಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುತ್ತಾರೆ. ವಿದೇಶಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 10 ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ.

3 / 5
7-18 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದರೆ. ಪ್ರತಿ ವರ್ಷ ಕೇವಲ ಮೂರು ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನ ಪಡೆಯುತ್ತಾರೆ. ಸ್ಪೇನ್‌ನ ರಾಜ, ಈಜಿಪ್ಟ್‌ನ ರಾಜ, ಬೆಲ್ಜಿಯಂ ರಾಜ ಮತ್ತು ಗ್ರೀಸ್‌ನ ರಾಜಕುಮಾರಿ ಎಲ್ಲರೂ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

4 / 5
ಶಾಲಾ ಶುಲ್ಕ ವರ್ಷಕ್ಕೆ $130,000. ಭಾರತೀಯ ಕರೆನ್ಸಿಯಲ್ಲಿ ಅಕ್ಷರಶಃ ರೂ. 9.8 ಕೋಟಿ ರೂ. ಇದನ್ನ ನೋಡುತ್ತಿದ್ದರೆ ಶಿಕ್ಷಣ ಎಷ್ಟು ದುಬಾರಿ ಎನ್ನಿಸುತ್ತಿದೆ ಅಲ್ವಾ..!

5 / 5
Follow us