ಫೈನಾನ್ಸ್ ಕಂಪನಿಗೆ ನಾಮ ಹಾಕಿ ಎಸ್ಕೇಪಾಗಿದ್ದ ಮ್ಯಾನೇಜರ್ ಅರೆಸ್ಟ್; ಸವಾಲಾಗಿದ್ದ ದೋಖಾ ಪ್ರಕರಣ ಭೇದಿಸಿದ ಮದ್ದೂರು ಪೊಲೀಸ್
ಮದ್ದೂರು ಪೊಲೀಸ್ ಠಾಣೆಯಲ್ಲಿ 2021 ಜೂನ್ 6 ರಂದು ಹಣ ಮತ್ತು 14 ರಂದು ಚಿನ್ನ ದುರುಪಯೋಗದ ಬಗ್ಗೆ ದೂರು ದಾಖಲಾಗಿತ್ತು. ಕುಟುಂಬದವರ ಸಂಪರ್ಕಕ್ಕೂ ಬಾರದೇ ಶಿವಶಂಕರ್ ತಲೆಮರೆಸಿಕೊಂಡಿದ್ದ.
ಮಂಡ್ಯ: ಫೈನಾನ್ಸ್ ಕಂಪನಿಗೆ ನಾಮ ಹಾಕಿ ಎಸ್ಕೇಪಾಗಿದ್ದ ಮ್ಯಾನೇಜರ್ (Manager) ಅರೆಸ್ಟ್ ಆಗಿದ್ದಾನೆ. ಸವಾಲಾಗಿದ್ದ ದೋಖಾ ಪ್ರಕರಣ ಮದ್ದೂರು ಪೊಲೀಸರು ಭೇದಿಸಿದ್ದಾರೆ. ಬರೋಬರಿ 10 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಖತರ್ನಾಕ್ ಮ್ಯಾನೇಜರ್, ಶಿವಶಂಕರ್, ಕೆಲಸ ಮಾಡುತ್ತಿದ್ದ ಕಂಪನಿಗೆ ವಂಚನೆ ಮಾಡಿದ ಮ್ಯಾನೇಜರ್ ಅರೆಸ್ಟ್ ಆಗಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರಿನ ಐಐಎಫ್ಎಲ್ ಫೈನಾನ್ಸ್ ಕಂಪನಿಗೆ ಮೋಸ ಮಾಡಿದ್ದ ಶಿವಶಂಕರ್. 2 ಕೇಜಿ 958 ಗ್ರಾಂ ಚಿನ್ನ, 12.38 ಲಕ್ಷ ದುರುಪಯೋಗ ಮಾಡಿಕೊಂಡು ಎಸ್ಕೇಪಾಗಿದ್ದ. ಬಂಧಿತ ಆರೋಪಿಯಿಂದ 1.03 ಕೋಟಿ ಮೌಲ್ಯದ 1 ಕೆಜಿ 943 ಗ್ರಾಂ ಚಿನ್ನ, ಬುಲೆಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಗ್ರಾಹಕರಿಂದ ಕಡಿಮೆ ಹಣಕ್ಕೆ ಚಿನ್ನ ಗಿರವಿ ಇಟ್ಟಿಸಿಕೊಂಡು ಬೇರೆಡೆ ಹೆಚ್ಚಿನ ಹಣಕ್ಕೆ ಗಿರವಿ ಇಡುತ್ತಿದ್ದ. ಮಣಪುರಂ ಗೋಲ್ಡ್, ಮತ್ತೂಟ್ ಫೈನಾನ್ಸ್, ಕೋಸಮಟ್ಟಂ ಫೈನಾನ್ಸ್ ಹಾಗೂ ಜ್ಯೂವೆಲರಿ ಅಂಗಡಿಗಳಲ್ಲಿ ಗಿರವಿ ಇಡುತ್ತಿದ್ದ. ಕಂಪನಿಯ ಮೇಲಾಧಿಕಾರಿಗಳಿಗೆ ಗೊತ್ತಾಗುತ್ತಿದ್ದಂತೆ ವಂಚಕ ಶಿವಶಂಕರ್ ಎಸ್ಕೇಪ್ ಆಗಿದ್ದ.
ಮದ್ದೂರು ಪೊಲೀಸ್ ಠಾಣೆಯಲ್ಲಿ 2021 ಜೂನ್ 6 ರಂದು ಹಣ ಮತ್ತು 14 ರಂದು ಚಿನ್ನ ದುರುಪಯೋಗದ ಬಗ್ಗೆ ದೂರು ದಾಖಲಾಗಿತ್ತು. ಕುಟುಂಬದವರ ಸಂಪರ್ಕಕ್ಕೂ ಬಾರದೇ ಶಿವಶಂಕರ್ ತಲೆಮರೆಸಿಕೊಂಡಿದ್ದ. ಕೆಲವು ತಿಂಗಳು ಗೋವಾ, ಕೇರಳ, ಮಹಾರಾಷ್ಟ್ರದಲ್ಲಿ ವಾಸ್ತವ್ಯ ಹೊಡಿದ್ದ. ಹಣ ಕಡಿಮೆಯಾಗುತ್ತಿದ್ದಂತೆ ಹಾಸನ ಜಿಲ್ಲೆಯ ಟೀ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿ. ಖಾಕಿ ಪಡೆಗೆ ಫೈನಾನ್ಸ್ ಕಂಪನಿಗೆ ವಂಚನೆ ಪ್ರಕರಣ ಅತ್ಯಂತ ಸವಾಲಾಗಿತ್ತು. ಕಂಪನಿ ಅಧಿಕಾರಿಗಳು ದೂರು ನೀಡಿದ್ದ ಬಳಿಕ ಆರೋಪಿ ಪತ್ನಿಯಿಂದಲೂ ಗಂಡ ನಾಪತ್ತೆ ದೂರು ನೀಡಲಾಗಿದೆ. ಕುಟುಂಬಸ್ಥರು, ಸ್ನೇಹಿತರಿಗೂ ಒಂದು ಕಾಲ್ ಮಾಡದೇ ತಲೆಮರೆಸಿಕೊಂಡಿದ್ದ ಆರೋಪಿ. ಯಾರ ಸಂಪರ್ಕಕ್ಕೂ ಸಿಗದಿದ್ದಕ್ಕೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಆದರು ಹುಡುಕಾಡುತ್ತಿದ್ದ ಪೋಲೀಸರಿಗೆ ಕೊನೆಗೂ ಸಿಕ್ಕಬಿದಿದ್ದಾನೆ. ಹುಲಿಯೂರು ದುರ್ಗದ ಬಸ್ ನಿಲ್ದಾಣದ ಸಮೀಪ ಆರೋಪಿ ಶಿವಕುಮಾರ್ ಖಾಕಿ ವಶಕ್ಕೆ ಸಿಕ್ಕಬಿದಿದ್ದಾನೆ.
ಕಾರಿನಲ್ಲಿ ಬಂದು ಮನೆಗಳ್ಳತನ ಮಾಡಿದ ಖದೀಮರು:
ಚಿತ್ರದುರ್ಗ: ಚಳ್ಳಕೆರೆಯಲ್ಲಿ ಕಾರಲ್ಲಿ ಬಂದು ಮನೆಗಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಚಳ್ಳಕೆರೆ ಪಟ್ಟಣದ ತ್ಯಾಗರಾಜ ಬಡಾವಣೆ ಮನೆಗಳ್ಳತನ ನಡೆದಿದೆ. ಉದ್ಯಮಿ ಗಣೇಶ ಭಟ್ಟ ಎಂಬುವರಿಗೆ ಸೇರಿದ ಮನೆ ಕಳ್ಳತನ ಮಾಡಲಾಗಿದೆ. ಎರ್ಟಿಗಾ ಕಾರಲ್ಲಿ ಬಂದಿದ್ದ ಮೂವರು ಕಳ್ಳರಿಂದ ಕೃತ್ಯ ಎಸಗಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಗೆ ಕನ್ನ ಹಾಕಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಳ್ಳರು ಕಾರಲ್ಲಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:
‘ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ಉಪೇಂದ್ರ ಪಾತ್ರ ನೋಡಿ ಮೆಚ್ಚಿಕೊಂಡ ಪ್ರಿಯಾಂಕಾ
Bengaluru Crime: ವಾಕಿಂಗ್ ಮಾಡುವ ಮಹಿಳೆಯರ ಪೋಟೋ ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿಯ ಬಂಧನ