‘ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ಉಪೇಂದ್ರ ಪಾತ್ರ ನೋಡಿ ಮೆಚ್ಚಿಕೊಂಡ ಪ್ರಿಯಾಂಕಾ
ಉಪೇಂದ್ರ ಅವರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಯಾಂಕಾ ಉಪೇಂದ್ರ ಅವರು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಉಪೇಂದ್ರ ಅವರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾಗೆ (Home Minister Movie) ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳಿಗೋಸ್ಕರ ವಿಶೇಷ ಶೋ ಏರ್ಪಡಿಸಲಾಗಿತ್ತು. ಉಪೇಂದ್ರ ಪತ್ನಿ ಪ್ರಿಯಾಂಕಾ (Priyanka Upendra), ನಟ ಶಿವರಾಜ್ಕುಮಾರ್ ಸೇರಿ ಹಲವರು ಈ ಶೋ ವೀಕ್ಷಣೆ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಲೆಬ್ರಿಟಿ ಶೋ ಮುಗಿದ ಬಳಿಕ ಮಾಧ್ಯಮದ ಜತೆಗೆ ಅವರು ಮಾತನಾಡಿದ್ದಾರೆ. ‘ನನಗೆ ಸಿನಿಮಾ ಇಷ್ಟ ಆಯ್ತು. ಉಪೇಂದ್ರ (Upendra) ಅವರು ಚೆನ್ನಾಗಿ ಕಾಣಿಸಿದಾರೆ. ನಾನು ಈ ಮಾತನ್ನು ಅವರ ಹೆಂಡತಿ ಆಗಿ ಹೇಳ್ತಾ ಇಲ್ಲ, ಓರ್ವ ಅಭಿಮಾನಿಯಾಗಿ ಹೇಳ್ತಾ ಇದೀನಿ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಈ ರೀತಿಯ ಅಂಡರ್ಸ್ಟ್ಯಾಂಡಿಂಗ್ ಹಸ್ಬಂಡ್ ಇದ್ರೆ ನಿಜಕ್ಕೂ ಒಳ್ಳೆಯದಾಗುತ್ತದೆ’ ಎಂದಿದ್ದಾರೆ ಅವರು. ಏಪ್ರಿಲ್ 1ರಂದು ‘ಹೋಮ್ ಮಿನಿಸ್ಟರ್’ ಸಿನಿಮಾ ರಿಲೀಸ್ ಆಗಿದೆ. ಉಪೇಂದ್ರ ಅವರಿಗೆ ಜತೆಯಾಗಿ ವೇದಿಕಾ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉಪ್ಪಿ ಅಭಿನಯದ ‘ಹೋಮ್ ಮಿನಿಸ್ಟರ್’ ಸಿನಿಮಾ ರಿಲೀಸ್, ಕುಣಿದು ಕುಪ್ಪಳಿಸಿದ ಅಭಿಮಾನಿಗಳು!
Home Minister Movie: ಉಪ್ಪಿ ಅಭಿನಯದ ‘ಹೋಮ್ ಮಿನಿಸ್ಟರ್’ ನೋಡಿ ಶಿವಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ